Sunday, December 22, 2013

ನಿಂಗಿ-ಭಂಗಿ

(Source:Rashichaturvedi.blogspot.com)
ನಿಂಗಿ-ಭಂಗಿ
ಹರಿವಾಣ ಹೊತ್ತವ್ಳೆ
ನೀರನ್ನ ತತ್ತಾವ್ಳೆ
ನಿಂಗಿ ಬೋ ರಿಮಿ ರಿಮಿ
ಉದ್ದಕ್ಕೆ ಹಾವ್ನಂಗೆ
ಓಲಾಡೋ ಜಡ್ಯಾಗೆ
ತಾಳ ಆಕಿದ್ರೆ ತಕ ಧಿಮಿ
ವೈನಾಗೆ ನಡುವೈತೆ
ಬಳ್ಯಂಗೆ ಬಳ್ಕೈತೆ
ಕೊಡ ಕುಂತ್ರೆ ಏನ್ಪರಿ
ನಡ್ಯೋದು ಕುಲ್ಕುತ್ತಾ
ರಸಗುಲ್ಲಾ ಕಲ್ಕಾತ್ತಾ
ಕಾಡ್ತಾಳೆ ಕನ್ಸಾಗೆ ಪರಿ ಪರಿ
ತಲೆ ಮ್ಯಾಲೊಂದು
ಮತ್ತೆ ಕಂಕ್ಳಾಗೊಂದು
ನವಿಲೂನು ಕಲಿತೈತೆ ನಡ್ಗೆ
ನಿಂಗೀಯ ಚಲುವೀಗೆ
ಮೋಡಕೂ ಯಾಮೋಹ
ಕೆಳಗಿಳಿದು ಕಣ್ಣಾಯ್ತು ತಂಪ್ಗೆ

6 comments:

  1. ಧನ್ಯವಾದ ಮನಸು ಮೇಡಂ...

    ReplyDelete
  2. ನಿಂಗಿ ಕಣ್ಮುಂದೆ ಕಟ್ಟಿದಂತಹ ರಸಗವನ!

    ReplyDelete
    Replies
    1. ಸುನಾಥಣ್ಣ ಧನ್ಯವಾದಗಳು...ನಿಮ್ಮ ಎಂದಿನಂತಹ ಪ್ರೋತ್ಸಾಹಕ್ಕೆ...

      Delete
  3. ಸುಂದರ ಹುಡುಗಿಯ ಸುಂದರ ವರ್ಣನೆ ಅಣ್ಣಾ! ನಮ್ಮ ಕಣ್ಣೂ ತಂಪಾಯ್ತು ಕವನ ಓದಿ!

    ReplyDelete
    Replies
    1. ಪ್ರದೀಪ್...ಇನ್ನೊಂದು ಓದು...ಈ ನಂತರದ್ದು...ಹಹಹ ಧನ್ಯವಾದ.

      Delete