Sunday, May 19, 2013

ಮೇರೆ ಸನಮ್ - ಪ್ರೀತಿಯ ಋತು


ಚಿತ್ರ: ಮೇರೆ ಸನಮ್ (1961), ಗಾಯಕರು- ಮೊಹಮ್ಮದ್ ರಫಿ, ಸಂಗೀತ- ಓ ಪಿ ನಯ್ಯರ್
ಹಾಡು: ಹಂದಂ ಮೇರೆ..ಮಾನ್ ಭೀ ಜಾವೋ...ಕೆಹನಾ ಮೇರೆ ಪ್ಯಾರ್ ಕಾ....
ಕನ್ನಡ ಭಾವಾನುವಾದ: ಡಾ. ಆಜಾದ್ ಐ ಎಸ್.


ಪ್ರೀತಿಯ ಋತು

ಓ..ಸಖಿಯೇ ಹೀಗೇ, ಅಪ್ಪಿಕೋ ಒಮ್ಮೆ
ನನ್ನಯ ಮನಸಿನ ಮಾತಿದು
ಅರೆ..ನವಿರು ನವಿರು ನಗು ತುಟಿಯಲ್ಲಿ
ನಿನ್ನಯ ಮನಸಿನ ಮಾತದು
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ಆಯ್...ಪ್ರೇಮ ಪ್ರೀತಿಯ ಈ ಋತು
ಇರದು ಎಂದೆಂದೂ
ಮನಸಲಿ ಮುದದ ಭಾವವು
ಬರದು ಹಾಗೆಂದೂ.. II 2 II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಮುಂಗುರುಳಾ ಹೀಗೇ ಸರಿಸಿದರೆ, ನಯನದಿ ಆಸೆ ಇಣುಕುವುದು
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ನಿನ್ನಯ ಮುಖದ ಹೂನಗೆ
ಮಾಸದೆ ಇರಲೆಂದೂ
ಕನಸಲಿ ದಿನವೂ ಕಾಣಿಸಿ
ನೆನಪಿರು ಎಂದೆಂದೂ..II2II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಕರುಣಿಸು ನಿನ್ನ ದರುಶನವಾ, ಸಾರ್ಥಕ ಆಗಲಿ ಜೀವನವೂ
          II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.

6 comments:

  1. am trying to sing here...
    its like a karoke of words...
    just cute :)

    ReplyDelete
  2. ಆಂತರ್ಯದಲ್ಲಿ ರಸಿಕನಾದ ಕವಿ ಮಾತ್ರ ಹೀಗೆ ಭಾವಾನುವಾದ ಮಾಡಬಲ್ಲ.
    "ಮುಂಗುರುಳಾ ಹೀಗೇ ಸರಿಸಿದರೆ, ನಯನದಿ ಆಸೆ ಇಣುಕುವುದು" ಆಹಾ ನೆನೆಸಿಕೊಂಡರೇನೇ ಮೈ ಪುಳಕ.

    ReplyDelete
  3. ಧನ್ಯವಾದ ಬದರಿ, ಬಹಳ ಪ್ರಯತ್ನದ ನಂತರ ಪದ ಆಚೀಚೆ ಮಾಡಿ ಭಾವ ಹೊರಡಿಸೋ ಹೊತ್ತಿಗೆ...ಉಸ್ಸಪ್ಪಾ...
    ಹಾಗೇ ಕವನ ಬರೆದುಬಿಡಬಹುದು..ಆದರೆ ಒಂದು ಲಯಕ್ಕೆ ಮತ್ತು ಮೂಲ ಹಾಡಿಗೆ ನ್ಯಾಯ ಒದಗಿಸುವುದು..ಕಷ್ಟ.

    ReplyDelete
  4. chennaaguruttalvaa....heege haadoke? ...video haakondu hadtaa ideeni. adbhuta prayatna Azad sir ...loved it (y) & kannadada bhaavaanuvaada nijakkoo shlaaghaneeya :-)

    ReplyDelete
    Replies
    1. ವಾವ್ ಅಕ್ತಂಗಿ...ಈಗ ನೋಡಿದೆ ನಿನ್ನ ಪ್ರತಿಕ್ರಿಯೆ...ಧನ್ಯವಾದ

      Delete