Thursday, July 12, 2012

ಅವಳು - ಅವಳೇ....

ಅವಳು - ಅವಳೇ

ಎಂಡ್ರ್ ಮಕ್ಳ್ ಓಗೌವ್ರೆ ತೌರ್ಗೆ
ಎಣ್ ಯಾರೂ ಬರಲ್ಲ ಈ ಕಡ್ಗೆ
ಆದ್ರೂ ದೈರ್ಯ ಸರಿ ರಾತ್ರಿಗೆ
ಮೋಯಿನಿ ಬತ್ತಳೆ ಬಾಗ್ಲಿಗೆ...

... ನಾನೋ ಮಾಡಿದ್ದುಣ್ಣೋ ಮಾರಾಯಾ
ತಿಂದು ಒಗೀತೀನಿ ಪಾತ್ರೆ ಅಂಗೇಯಾ
ಕಾಯ್ತಾ ಕುಂತೆ ರಾತ್ರಿ ನೊಡ್ತಾ ಮುಸ್ರೆಯಾ
ರಾತ್ರಿಯೆಲ್ಲ ಕಾದೆ ಕಾಣ್ಲೇ ಇಲ್ಲ ಮೋಯಿನಿಯಾ

ಈವಾಗ್ ಅರ್ತ ಆಯ್ತ ಐತೆ ನನ್ನವಳ ಮಾತ್ವ
ಬೆಳಿಗ್ಗೆ ಎದ್ ಏಟ್ಗೆ ಬತ್ತಿತ್ತು ಬೋರ್ವೀಟಾ ಸತ್ವ
ಆಪೀಸ್ ಟೈಮ್ಗೆ ಬಿಸ್ಬಿಸಿ ತಿಂಡಿ ಜೊತ್ಗೆ ಕಾಪಿ
ದಿನಾಯೆಲ್ಲಾ ಗೆಲ್ವಾಗಿರ್ಲಿಂತ ಕೊಡ್ತಿದ್ ಪಪ್ಪಿ

ಏನಂದ್ರೂ ನನ್ನೆಂಡ್ರೂ ಒಂದು ಎಣ್ಣ್ ಅಲ್ವೇ
ನನ್ನೆತ್ತವಳೂ ಅವಳ್ ಜನ್ಮಕ್ಕೆ ನನ್ನಜ್ಜಿ ಅಲ್ವೇ
ಜಲ, ಗಾಳಿ, ಅನ್ನಹಣ್ಣು ಕೊಡ್ತಾಳೆ ಬೂಮಾತೆ
ನನ್ಮಗ್ಳಿಗೆ ನನ್ನೆಂಡ್ರು ಅಮ್ಮ, ನನಗೆ ನನ್ನಮ್ಮ
ಜಗ್ದಾಗಿರೋ ಎಲ್ಲ ಗಂಡಸ್ರಿಗೂ ಇದ್ದಾಳೆ ಮಾತೆ

13 comments:

  1. ಅವಳಿಲ್ಲವಾದರೆ ಅವಳು ಕಾಡುವುದು. ಭಾಷೆ ,ಪದ್ಯ ಭೋ ಸಂದಾಗೈತೆ ಕಣಣ್ಣೋ.. ಆಝಾದ್ ಸರ್ ಸೂಪರು :)

    ReplyDelete
    Replies
    1. ಕಿರಣಾ... ಮೆಚ್ದೆ...ಬೋ ಸಂದಾಕೇ ಆಕೀದೀಯಾ...ಆಂ..ಅದೇನೋ ಯೋಳ್ತಾರಲ್ಲ... ಕಾಂಮೇಟು.....ಊಂ...ಅದೇಯಾ... ಟ್ಯಾಂಕೂ...

      Delete
  2. ಅಜಾದ್ ಸರ್,
    ಕವನದಾಳದ ಭಾವ ಪ್ರೀತಿ ಭರಿತ.
    ಅದನ್ನು ತೆಳುವಾದ ಹಾಸ್ಯಾಸ್ಪದ ರೀತಿಯಲ್ಲಿ ತಂದಿಟ್ಟ ರೀತಿ ತುಂಬಾ ಚೆನ್ನಾಗಿದೆ...
    ಇನ್ನಷ್ಟು ಕವನಗಳು ಮೂಡಿ ಬರಲಿ.

    ReplyDelete
  3. ರೂಪಾಶ್ರೀ...ಧನ್ಯವಾದ...

    ReplyDelete
  4. nice blog...

    plz visit my blog
    www.manaseeee.blogspot.com

    ReplyDelete
  5. Jalanayan,
    My modem out of order. Could not read ur poem till now. Wonderful is what I can all say.

    ReplyDelete
  6. nice........innashtu kavanagalu moodibarali.

    ReplyDelete
  7. ಆಜಾದ್ ಸರ್,

    ನಮ್ ಭಾಷೇಲಿ ಹೇಳ್ಬೇಕು ಅಂದ್ರೆ 'ಬಾಳ ಲೈಕ್ ಇತ್ತ್ ಮರ್ರೆ'...

    ReplyDelete
  8. ಆಡು ಭಾಷೆಯಲಿ ಹರಿದ ಪ್ರೀತಿಯ ಸೊಗಡು! ಚೆನ್ನಾಗಿದೆ ಕವನ ಆಜಾದ್ ಸರ್, ನನ್ನ ಬ್ಲಾಗ್ ಗೂ ಬನ್ನಿ.

    ReplyDelete
  9. haahaha azad nodiralilla . chennaagide .mahatva gottaaytalla kadegoo

    ReplyDelete
  10. ಎಲ್ಲಾ ಪ್ರತಿಕ್ರಿಯಿಸಿದ ಸ್ನೇಹಿತರಿಗೂ ಧನ್ಯವಾದ......
    ಮಾನ್ಸಿ ಈ ಮಧ್ಯೆ ಸ್ವಲ್ಪ ವ್ಯಸ್ತತೆಯಿಂದ ಬ್ಲಾಗ್ ಭೇಟಿ ಕಡಿಮೆಯಾಗಿದೆ...ಸಮಯ ಸಿಕ್ಕಾಗ ಖಂಡಿತಾ..
    ಸುನಾಥಣ್ಣ ಎಲ್ಲೇ ಇದ್ರೂ ಹೇಗೇ ಇದ್ರೂ ನಿಮ್ಮ ಪ್ರೋತ್ಸಾಹ ಸಿಗುತ್ತಲೇ ಇರುತ್ತೆ ಅದೇ ನನ್ನ ಭಾಗ್ಯ...ಧನ್ಯ
    ಉಷೋದಯವಾಯಿತು ನನ್ನ ಬ್ಲಾಗಿನಲ್ಲಿ ಧನ್ಯವಾದ
    ದಿನಕರ್ ಧನ್ಯವಾದ..
    ಅಶೋಕ್..ಹೌದು ಮಾರ್ರೆ..ನಿಮಗೂ ನನ್ನಿ
    ಪ್ರಭಾಮಣಿ ಮೇಡಂ ಬ್ಲಾಗುಗಳ ಕಡೆ ಬಾಗೋದು ಕಡಿಮೆ ಆಗಿದೆ ಎಲ್ಲರ ಸ್ಥಿತಿಗಿಂತಾ ಸ್ವಲ್ಪ ಗಂಭೀರ ನನ್ನ ಸ್ಥಿತಿ...ಧನ್ಯವಾದ.
    ರೂಪಾ...ಹೂಂ ತಗೋರಿ...ಈ ಥರದ್ದು ತೊಗರಿ..ಸಾಂಬಾರಿಗೆ

    ReplyDelete
  11. ಇದೂ ಪಸಂದಾಗೈತೆ :-)

    ReplyDelete