Monday, September 12, 2011

ಬುಂಡೆ ಕ್ಯಾತೆ



ಏನ್ಲಾ ಬುಂಡೆ ನಾಗ ಎಸ್ರು ಎಸ್ರುವಾಸಿ ಆಗ್ತಾ ಐತೆ?
ಬೋ ಪೈನಾಗಿ ಬೆಳ್ದಿದ್ವು ಕೂದ್ಲು ಆವಾಗ
ಎಗರ್ಸ್ಕೊಂಡ್ ಓಡಾಡಿದ್ದು..ಜುಟ್ ಬಿಟ್ ಜೂಲ್ನಾಗ ಆಗಿದ್ದು..
ವೈನಾಗಿ ತಲೆಬಾಚಿ ಜೀನ್ಸ್ ಆಕಿ ಅರೆ-ರಾಮ ಅರೆ-ಕಿಸ್ನ ಆಗಿದ್ದು
ಬೆಲ್ ಬಾಟಮ್ ಈಟಗ್ಲ ಆಕಿ ಪುಕ್ಸಟ್ಟೆ ರಸ್ತೆ ಎಲ್ಲಾ ಗುಡ್ಸಿದ್ದು..!!!
ಎಲ್ ಲ್ಲಾ ಓಯ್ತು ಎಲ್ಲಾನೂವೆ...??

ಕೆರ್ಯಾಗಿನ್ನೀರ್ಮುಗ್ದು ಕುರ್ಚುಲ್ಬೆಳ್ಯೋಂಗೆ
ಅಲ್ಲಲ್ಲಿ ಒಂದೊಂದೇ ಚಿಗ್ರಕ್ಕೊಂಡ್ ಕುಂತಂಗೆ
ಗರ್ಕೆ ಮಾತ್ರ ಇತ್ಲಾಗ್ ವೈನಾಗ್ಬೆಳ್ದಂಗೆ
ತ್ವಾಟ ಎಲ್ಲಾ ಖಾಲಿ ಮಾಡ್ಕಂಡ್ಕೂತಿದ್ದೀಯಾ

ಓಗ್ಲಿ ಅತ್ಲಾಗೆ ಅಂದ್ರೆ..ಲಾನ್ ಮಿಸೀನು ಆಕಿ ಬೋಡ್ಸಿದ್ದ್ಯಾಕ್ಲಾ??
ಬಂಜ್ರು ಎದ್ದು ಕುಂತದೆ, ನೆತ್ತಿಮ್ಯಾಗೆ ಬೆಳೀಯೊಲ್ದು ಅಂತಾ
ಮೂರೋನಾಲ್ಕೋ ತಿಣಕಾಡ್ತಾ ಇದ್ದದು..
ಬಣ್ಣ ಗಿನ್ಣ ಅಚ್ಚಿದ್ಯೇನ್ಲಾ ಬೆಳ್ಳಗಾಗಿಲ್ಲ??

ಟೋಪೀನಾದ್ರೂ ಆಕ್ಕೊಂಡ್ ಓಡಾಡು..
ಕತ್ಲಾಗ್ ಮಕ್ಳು-ಎಂಗಸ್ರು ನೋಡಿದ್ರೆ ಎದ್ರ್ಕೊಂಡಾರು
ಅಲ್ಕಲ್ಲಾ ಯಾವನ್ಲಾ ಪೋಟಾ ತಗ್ದವನು..??
ಮಕಾ ಕಾಣಂಗಲ್ವಾ ತೆಗ್ಯಾದು..??

ಒಬ್ರು ಗುಂಡ ಎಂಕ ಅಂತಾರೆ; ಇನ್ನೊಬ್ರು ಗಾಬ್ರಿ ಬಸ್ಯ ಅಂತಾರೆ
ಅಲ್ಲೊಬ್ರು ಸಿಡ್ಕ ಸಿದ್ದ ಅಂದ್ರೆ; ಇಲ್ಲೊಬ್ರು ಡೌಟೇ ಬ್ಯಾಡ ಇದು
ನಮ್ಮಟ್ಟೀ ಕೋಳಿಕಳ್ಳ ಕರಿಯಾ ಅಂತಾರೆ
ಆಮೇಲೊಬ್ರು ಎಲ್ಡು ಸುಳಿಯವೆ....ಇದು ಸುಬ್ಬಾನೇ ಅಂತಾರೆ.
ಎಲ್ಲಾ ಬುಟ್ಟ್ ಪೂರ್ತಾ ಮನ್ಸನ್ ಪೋಟೋ ಆಕೇ ಬುಡು..
ನಂಗೊತೋ ನೀನ್ಬುಂಡೆ ನಾಗ ಅಂತಾ....!!!


20 comments:

  1. ಹ ಹ ಹ ಹೋ ಹೋ ಹೋ ಹಿ ಹಿ ಹಿ ಹೆಂಗೆ ನಕ್ರೂ ನಿಲ್ತಿಲ್ಲಾ ನಗು. ಹೊಟ್ಟೆ ಇಡ್ಕಂಡ್ ಉಳ್ಲಾದ್ಕಂಡ್ ನಕ್ರುವೆ ಮರ್ಯಕಾಯ್ತಿಲ್ಲಾ ಈ ಪದಗಳ್ ವರ್ಸೆಯಾ !!!! ಎಂತಾ ಬುರುಡೆಗೆ ಎಂತಾ ಪದಗಳ ಕೂದಲ ನಾಟಿ ಮಾಡಿದ್ದೀರಿ , ಪದ್ಯಾ ಓದ್ತಾ ಇದ್ರೆ ಖಂಡಿತಾ ಕೂದಲು ಬೇಗ ಬೆಳಿಬಹುದು ಅಜಾದ್ ಸರ್ , ಜೈ ಹೋ
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  2. ಹ ಹ ಹ...ಲಾನ್ ಮಸೀನು ಹಾಕಿ ಬೋಡ್ಸಿದ್ಯಾಕ್ಲಾ..:)))))
    ಸೂಪರ್ ಕವನ ಬಯ್ಯಾ..ಅದು ಯಾರ ಬುರುಡೆ ಅಂತ ಎಲ್ಲರೂ ಬುರುಡೆ ಖಾಲಿ ಆಗೋತನಕ ಬುರುಡೆ ಕೆಡಿಸ್ಕೋಂಡ್ರು ಬುರುಡೆ ಪರಿಚಯ ಮಾತ್ರ ಆಗ್ಲಿಲ್ಲ..:D
    ಅನಿಲ್ ಬೆಡ್ಗೆ ದಾ ಅಂತ ನನ್ನ ಡೌಟ್..:)

    ReplyDelete
  3. ರಾಜರತ್ನಂ ಮತ್ತೊಂದು ದಪ ಹುಟ್ ಬಂದಾನ್ ನೋಡು!
    ಕುವೈತ್‍ನಲ್ಲಿ ಕೂತುಕೊಂಡು ಕವನಾ ಕಟ್ಟೋದ್ ನೋಡು!!

    ReplyDelete
  4. ಚೇತು...ಹಹಹಹ ಥ್ಯಾಂಕ್ಸ್... ಅನಿಲ್ ಆಲ್ಲಾ ಇದು ನಿನ್ನ ಪ್ರೀತಿಯ ಅಣ್ಣಂದು...ಗೊತ್ತಾಗ್ಲಿಲ್ವಾ,,,ಅಯ್ಯೋ ನಮ್ಮ ಪ್ರಕಾಶಂದು...ನನಗೆ ಯಾರಿಗೂ ಹೇಳ್ಬೇಡ ಅಂದಿದ್ದ..

    ReplyDelete
  5. ಸುನಾಥಣ್ಣ...ನಿಮ್ಮ ಪ್ರೋತ್ಸಾಹ ಮತ್ತು ಅಭಿಮಾನದ ಆಶೀರ್ವಾದ ಅದೇ ಒಂದು ಶಕ್ತಿ ನಮಗೆಲ್ಲಾ...ರತ್ನಂ ಕನ್ನಡದ ರತ್ನ...ನಮ್ಮದು ಕೇವಲ ಮಣ್ಣಿಗೆ ಹೋಗುವ ಯತ್ನ...ಇನ್ನು ಎಲ್ಲಾ ಅವಸ್ಥೆಗಳ ಪುಟವಿಟ್ಟು ಅಭಿನ್ನವಾದದ್ದು ರತ್ನ...ಅವರ ಅಗಾಧ ಕೃತಿ ಬಂಢಾರದ ಒಂದು ಅಕ್ಷರಕ್ಕೆ ನನ್ನ ಕವನ ಸಮವಾದರೂ ಸಾಕು ಧನ್ಯ...

    ReplyDelete
  6. ಮೊದಲಿಗೆ ಒಂದು ಮಾತು ಜಲನಯನ ಸಾರ್, ಈ ಫೋಟೋಗಳು ನನ್ನ ಭವಿಷ್ಯ ತೋರಿಸ್ತಾ ಇವ್ಯಾ ಅನ್ನೋ ಅನುಮನ!

    ರಾಜರತ್ನಂ ಸೈಲಿಯ ಸಮರ್ಥ ಬಳಕೆ. ಬಾಷೆಯಲ್ಲಿ ತಮಾಷೆಯ ಚಾಟಿ. ಅವ್ಯಾವಹಕ ನಗೆ ಹೊನಲು. ಭೇಷ್ ಭೇಷ್...

    ನಕ್ಕು ನಕ್ಕು ನನ್ನ ಕೂದಲೂ ಬಿದ್ದು ಹೋದ್ವು...

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ReplyDelete
  7. ಬದರಿ ತುಂಬಾ ತುಂಬಾ ಧನ್ಯವಾದಗಳು....ಮೊದಲ ತುಂಬಾ ನನ್ನಲ್ಲಿಗೆ ಬಮ್ದುದಕ್ಕೆ ಎರಡನೇದು ನಿಮ್ಮ ಬ್ಲಾಗ್ ಗೆ ಬರಲು ಅಹ್ವಾನಕ್ಕೆ...ಇದೋ ಬಂದೆ...

    ReplyDelete
  8. ಅದೇನ್ ಇಂಗಂತೀರಾ ಅಣ್ಣಾ ? ನಮಗೊತ್ತಿಲ್ವೆ ಈ ಬುಲ್ಡೆ ಬಣ್ಣಾ ?
    ಲಾನ್ ಮಿಸಿನ್ನು ಆಕಿದ್ರೂನು , ಮಕಾ ಚೂರೂ ಕಾಣದಿದ್ರೂನೂ ನಮಗೊತ್ತಿಲ್ವೆ ಈ ಬುಲ್ಡೆ ಬಣ್ಣಾ? ಇದ್ಯಾಕ್ ಅಂಗಾಡ್ತೀರಾ ಅಜ್ಹಾದಣ್ಣಾ ?

    ReplyDelete
  9. ಸೀತಾರಾಂ...ಥ್ಯಾಂಕ್ಸೂ...ಇದು ಬುಂಡೆ ಕ್ಯಾತನ ಕ್ಯಾತಿ ಸಾರಿ ಖ್ಯಾತಿನ ತೋರ್ಸುತ್ತೆ,,,,ಹಹಹಹ

    ReplyDelete
  10. This comment has been removed by the author.

    ReplyDelete
  11. ಅರೆರೆರೆ...ನೋಡಿದ್ಯಾ ಅಣ್ನಯ್ಯನ ಬುಂಡೆ ಇಚಾರ ಎತ್ದೇಟ್ಗೆ ತಂಗ್ಯಮ್ಮಾ?? ಬುಸ್ ಅನ್ನೊದು...ಊಂ..ಕಣಮ್ಮಿ..ಅಂಗೇಯಾ...ಅಲ್ಲಾ ನಂಗೇ ಚಾಲೆಂಜ್ ಆಕುದ್ರೆ ಬುಟ್ಟೇನಾ ??? ಅದ್ಕೇಯಾ ಎಸ್ದೆ ಒಂದು ಅಂಗೇಯಾ...ನೀನು ಇಬ್ರಿಗೂ ತಂಗೀನೇ ..ಈ ಬುಂಡೆಯವನ್ನ ಕಂಡ್ರೆ ನಂಗೂ ಪಿರೂತಿ ಜಾಸ್ತಿ...ಹಹಹಹ.... ಇದೇ ನೋಡು ಬುಂಡೆ ಕ್ಯಾತಿ...

    ReplyDelete
  12. ದಿನಕರ್....ಗೊತ್ತಾಯ್ತಾ,,,?? ಇದು ನೀವೇ ಅಂತ ಕೆಲವ್ರು ಹೇಳಿದ್ರು...ಅವರ ಸಂಶಯ ನಿವಾರಣೆ ಆಯ್ತು ಅನ್ಸುತ್ತೆ...ಹಹಹಹ ಧನ್ಯವಾದ...

    ReplyDelete
  13. ಹ್ಹ ಹ್ಹ ಹ್ಹಾ..........
    ಏನ್ ಬುಲ್ಡೆ ಅಂತ!!!!!

    ಅಲ್ಲಾ ಸ್ವಾಮಿ...............

    ಈ ಬುರುಡೆ ಖ್ಯಾತಿಯ ಮಹಾಶಯ ಯಾರು ಅಂತ ಕೊನೆಗೂ ಹೇಳೇ ಇಲ್ಲ!!!!

    ReplyDelete
  14. ಹಹಹ ಇನ್ಯಾರು ನಮ್ಮ ಬುಂಡೆ ಕ್ಯಾತ....ಡೊಳ್ಳಣ್ಣ ಗಣಪತಿ...ಹಹಹಹ ಗೊತ್ತಾಯ್ತಾ...ಪ್ರವೀಣಾ...???

    ReplyDelete
  15. ಅಜಾದ್, ಇವತ್ತು ಬಿಡುವು ಮಾಡಿಕೊಂಡು ಎಲ್ಲಾ ಬ್ಲಾಗುಗಳನ್ನು ಓದುತ್ತಿದ್ದೇನೆ. ನಿಮ್ಮ ಈ ಪದ್ಯವನ್ನು ಓದಿ ನಗುಬಂತು..ನಾನು ಅನಿಲ್ ಅಂದುಕೊಂಡಿದ್ದೆ.

    ReplyDelete
  16. ಶಿವು ...ಹಲವರು ಹೀಗೇ ..ದಿನಕರ್..ಅನಿಲ ಅಂತ ಅಂದ್ಕೊಂಡಿದ್ರು....ಧನ್ಯವಾದ...

    ReplyDelete
  17. ದಿನಕರ & ಡಾಕ್ಟರ್ ಕೃಷ್ಣಮೂರ್ತಿ

    ReplyDelete