Tuesday, June 21, 2011

(ಕೃಪೆ: ಪ್ರಕಾಶ್ ಹೆಗ್ಡೆ - ಬ್ಲಾಗ್ ಛಾಯಾಚಿತ್ತಾರದಿಂದ)

ನಿರೀಕ್ಷೆ


ಕಾದು ಕಾದು ಕಾತರತೆ ಸತ್ತಿದೆ
ಕುಳಿತಿದ್ದೆ ಬೆಳಕಲಿ ದೀಪ ಬತ್ತಿದೆ
ನಿನಗೇನು? ನಿನಗಿನ್ನೂ ಹೊತ್ತಿದೆ..
ನಾ ಬೆಳಕಿಂದ ಕತ್ತಲೆಡೆಗೆ ಜಾರಿದೆ

ಮೇಲಿಂದ ಬರಲು ಏನಡ್ಡಿ ?
ನನ್ನರ್ಥಮಾಡಿಕೋ ಏ ದಡ್ಡಿ
ನಂಬಿ ಕುಳಿತಿರುವೆ ನಿನ್ನನೇ...
ಮುಳುಗುವವಗೆ ಆಸರೆ ಹುಲ್ಲು ಕಡ್ಡಿ

ಮಹಡಿಯಿದು ನಿನ್ನದು
ಗಡಿಯದುವೇ ನನ್ನದು
ಕೈಬಿಡಬೇಡವೆಂದವಳು...
ಕೈಕೊಡುವುದು ಸಲ್ಲದು

ಅಂಗಳದಿ ಬೆಳಕು ಮಾಯವಾಗುವ ಮುನ್ನ
ತಿಂಗಳದು ಕರಗಿ ಕತ್ತಲಾಗುವ ಮುನ್ನ
ಕಂಗಳಲಿ ತುಂಬಿಕೊಳ್ಳಲುಬಹುದೇ?..
ನಿನ್ನಂದ ಚಂದವಿದು ಕರಗುವಾ ಮುನ್ನ

22 comments:

 1. ವಾಹ್ ! ಅಜ಼ಾದ್ ಭಾಯ್ ! ಸೂಪರ್ !
  ಸ್ವಲ್ಪ ಹೊತ್ತು ಕಾದಿರಿ . ಅವಳು ಖಂಡಿತಾ ಬರ್ತಾಳೆ ! ಕತ್ತಲಾದರೇನು ? ಮೋಂಬತ್ತಿ ತೊಗೊಂಡು ಬರ್ತಾಳೆ... ಮೋಂಬತ್ತಿಯ ಬೆಳಕಲ್ಲಿ ಮುದ್ದು ಮುಖ ಇನ್ನೂ ಮುದ್ದಾಗಿ ಕಾಣಿಸುತ್ತದೆ ಅಲ್ಲವೆ? .

  ReplyDelete
 2. ಆಜಾದು...

  ಮಸ್ತ್ ಐತಲೆ ಕವನ...

  ಕಾದು.. ಕಾದು ಕುಳಿತ ಮನಸ್ಸಿಗೆ
  ಬೇಯುವದರಲ್ಲೂ ವಿರಹದಲ್ಲೂ ಮಜಾ ಐತಿ ಕಣೋ...

  ನಿಜ ಹೇಳ್ತಿನಿ.. ಫೋಟೊಕ್ಕೆ ತಕ್ಕ ಕವನ ನಿಂದು... ಜೈ ಹೋ !!

  ReplyDelete
 3. ಚಿತ್ರಾ...ನಿಜ ನಿನ್ನ ಮಾತು..ಜಗಮಗ್ ಬೆಳಕಿಗಿಂತಾ ನವಿರು ಚಂದಿರನ ಬೆಳಕು ಇಲ್ಲ ಅರ್ಧಮುಖವನ್ನೇ ಬೆಳಗುವ ಮಂದ ದೀಪ(ಮೋಂಬತ್ತಿ) ಬೆಳಕು ಸುಂದರತೆಯನ್ನು ಇನ್ನಷ್ಟು ಉದ್ದೀಪಿಸಿತ್ತದೆ..ಸುಂದರ ಪ್ರತಿಕ್ರಿಯೆಗೆ ಧನ್ಯವಾದ ತಂಗ್ಯಮ್ಮಾ...

  ReplyDelete
 4. ಪ್ರಕಾಶೂ..ಬಿಡ್ ಬಿಡ್ ಭೋ ಪಸಂದ್ ಚಿತ್ರ ಕೊಟ್ರೆ ಯಾರಾದ್ರೂ ಬರೀತಾರ ಕವನ ಕಥನ..ನಂದೇನೈತಿ ಎಚ್-ಗಾರ್ಕೆ? ನಿನ್ ಚಿತ್ರದ ಕರಾಮತ್ತು ಕವನಕ್ಕೆ ಸ್ಫೂರ್ತಿ ಆಯ್ತು..
  ಹಂಗಂದ್ರ್ ಹ್ಯಾಂಗಲೋ ಯಪಾ...ನೋಡ್ ಮತ್ ಇನ್ನೂ ಉದುರ್ತಾವ ಕವನ..

  ReplyDelete
 5. ಚೆನ್ನಾಗಿದೆ, ಇಷ್ಟವಾಯ್ತು :)

  ReplyDelete
 6. ಸರ್,
  ಕಂಗಳಲಿ ತುಂಬಿಕೊಳ್ಳಲುಬಹುದೇ?.......

  ಕಾಯುವಿಕೆಯಲ್ಲಿ ಇರುವ ಸಕಾರಾತ್ಮಕ ಭಾವನೆ ಇಷ್ಟ ಆಯ್ತು

  ReplyDelete
 7. ಜಲನಯನ,
  ಅತ್ಯುತ್ತಮ ಗೀತೆ. ಪ್ರೇಮಭರಿತ ಈ ಆಹ್ವಾನವನ್ನು ಕೇಳಿದ ಯಾವ ನಲ್ಲೆ ಮಹಡಿಯ ಮೇಲೆ ಕೂತಾಳು!?

  ReplyDelete
 8. ಮಧುರವಾಗಿದೆ ಕವಿತೆ..ತು೦ಬಾ ಇಷ್ಟವಾಯ್ತು..ಸರ್..

  ReplyDelete
 9. ಕವಿತಾ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 10. ಆನಂದ್ ಥ್ಯಾಂಕ್ಸ್ ರೀ...

  ReplyDelete
 11. ಆಶಾವ್ರೆ ...ಕಂಗಳಲಿ ತುಂಬಿಕೊಳ್ಳಲು ಬಹುದೇ ..? ಒಂದು ಸಕಾರಾತ್ಮಕ ಆಶಯ...ಅನ್ನೋದು ನಿಜ..ಆಗೋದನ್ನ ತಡೆಯೋಕೆ ಸಾಧ್ಯ ಇಲ್ಲ ಹಾಗಾಗಿ ನಕಾರಾತ್ಮಕಗಳಲ್ಲಿ ಕೊರಗೋದಕ್ಕಿಂತ ಸಕಾರಾತ್ಮಕದಲ್ಲಿ ಇದ್ರೆ ಇದ್ದಷ್ಟೂ ದಿನ ಸುಖ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 12. ಮನಸು ಮೇಡಂ ನಿಮ್ಮ ಕವನ ಇದೇ ಚಿತ್ರಕ್ಕೆ ಸೂಪರ್ ಆಗಿ ಮೂಡಿದೆ...ಹಾಕಿದ್ದೀನಿ ನನ್ನ ಕಾಮೆಂಟು...ಧನ್ಯವಾದ...

  ReplyDelete
 13. ಕಡೆಯ ನಾಲ್ಕು ಸಾಲುಗಳು ಭಾವಪೂರ್ಣವಾಗಿವೆ ಎನ್ನಿಸಿತು. ಅಭಿನ೦ದನೆಗಳು ಸರ್.

  ಅನ೦ತ್

  ReplyDelete
 14. ಸುನಾಥಣ್ಣ ಅದೇ ಅಲ್ವಾ ಭರವಸೆ ಮಾತಲ್ಲಿ ಕಟ್ಟಿಹಾಕಿ ಸೆಳೆದುಕೊಳ್ಳಲು ಹೊಂಚು...ಹಹಹ...ಧನ್ಯವಾದ...

  ReplyDelete
 15. ದಿನಕರ್ ಎಲ್ಲಪ್ಪಾ ಕಾಣ್ತಿಲ್ಲ ಈ ಮಧ್ಯೆ..?? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

  ReplyDelete
 16. ವಿಜಯಶ್ರೀ ..ಧನ್ಯವಾದ ನಿಮ್ಮ ಪ್ರತಿಕ್ರೆಯೆಗೆ...

  ReplyDelete
 17. ಅನಂತ್ ಸರ್ ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯೆಗೆ ಧನ್ಯವಾದ...

  ReplyDelete
 18. ಕವನ ಮತ್ತು ಚಿತ್ರ ಎರಡೂ ಇಷ್ಟವಾಯ್ತು.

  ReplyDelete
 19. ಮಂಜುಳಾ ದೇವಿಯವರಿಗೆ ಜಲನಯನ ಮತ್ತು ಭಾವ ಮಂಥನ ಬ್ಲಾಗ್ ಗಳಿಗೆ ಸ್ವಾಗತ..ನನ್ನ ಜಲನಯನಕ್ಕೂ ಒಮ್ಮೆ ಭೇಟಿ ನೀಡಿ...
  ಧನ್ಯವಾದ ಬಂದುದಕ್ಕೆ

  ReplyDelete