Friday, October 1, 2010

ಗೊತ್ತಿಲ್ಲ ಮಗು

ಅಪ್ಪಾ



ಏನು ಮಗು?


ದೇವನಹಳ್ಳಿ ಅಂತರರಾಷ್ಟ್ರೀಯ ಮಟ್ಟಕ್ಕೆ ಹೋಯ್ತು ಅಲ್ವಪ್ಪಾ?


ಹೌದು ಮಗು ನಾಡಿಗೆ ಒಳ್ಳೆ ವಿಮಾನ ನಿಲ್ದಾಣ ಸಿಕ್ತು


ಅದಲ್ಲಪ್ಪಾ..ಕೋಟ್ಯಾಂತರ ಸಿಕ್ಕ ರೈತ


ನಾಲ್ಕೈದೇ ವರ್ಷದಲ್ಲಿ ಬೀದಿಗೆ ಬಂದಾಂತ...


ಗೊತ್ತಿಲ್ಲ ಮಗು






ಅಪ್ಪಾ


ಹೇಳು.ಏನು?


ಮತ್ತೆ ಇನ್ನಷ್ಟು ದೇವನಹಳ್ಳಿ ದೊಡ್ಡಬಳ್ಳಾಪುರದ ರೈತರು


ಸರ್ಕಾರದ ಭೂ ಸ್ವಾಧೀನಕ್ಕೆ ಒಪ್ತಾ ಇಲ್ವಂತಲ್ಲಪ್ಪ


ಹೌದು ಕಣೋ ನೀನೇ ಹೇಳಿದ್ಯಲ್ಲ, ಬೇರೆ ಗೇಯ್ಮೆ ಗೊತ್ತಿಲ್ದೇ


ಹಣ ಖರ್ಚು ಮಾಡಿ ಬೀದಿಗೆ ಬರೋದು ಬೇಡಾಂತ..


ಅಲ್ಲಪ್ಪಾ..ಅವರ ಹೆಸರಲ್ಲಿದ್ದ ಜಮೀನು


ಮಂತ್ರಿಗಳು ದೋಚ್ಕಂಡವ್ರಂತೆ...?


ನಂಗೊತ್ತಿಲ್ಲ ಮಗು...






ಅಪ್ಪಾ..


ಇನ್ನೂ ಏನೋ ನಿಂದು...?


ಈ ಸರ್ತಿ ದಸರಾಕ್ಕೆ ಕರ್ಕೊಂಡು ಹೋಗ್ತೀಯಾ?


ಆಗಲಿ ಕಣೋ ನಿಮ್ಮಣ್ಣಂಗೆ ಹೇಳು


ರೈಲಲ್ಲಿ ಎಲ್ಲರಿಗೆ ಟಿಕೇಟ್ ಮಾಡ್ಸು ಅಂತ.


ಊಂ ನನಗೆ ಬೇಡ,, ನಮ್ಮ ಮುಖ್ಯಮಂತ್ರಿಗಳು


ಹೊಸ ವಿಮಾನ ನಿಲ್ದಾಣ ಮಾಡಿದ್ದಾರೆ, ವಿಮಾನದಲ್ಲೇ ಹೋಗ್ಬೇಕು


ಆಯ್ತಪ್ಪಾ..ನೀನು ನಿನ್ನಣ್ಣ ಇಬ್ಬರೇ ಹೋಗಿ ಬನ್ನಿ..


ಅಂದ ಹಾಗೆ ಅಲ್ಲೂ ಮಿನಿಸ್ಟ್ರ ಸಂಬಂಧೀಕರು


ಜಮೀನು ಕೊಂಡ್ಕೊಂಡಿದ್ದಾರಂತೆ...


ಲೋ ತರ್ಲೆ...


ನಂಗೊತ್ತಿಲ್ಲ ಕಣೋ...

18 comments:

  1. ante kante alla magu... yella nijane papu... :)

    maguvina maatu chenagide sir.. :)

    ReplyDelete
  2. ನಿಮ್ಮ "ಗೊತ್ತಿಲ್ಲ ಮಗು" ಸರಣಿ ಮತ್ತೆ ಶುರುವಾಯ್ತಾ ? ಚೆನ್ನಾಗಿದೆ. ಯಡ್ಡಿ, ಕಟ್ಟಾ, ಕೆಟ್ಟಾ ಗಳ ಮೇಲೆಲ್ಲಾ ಪ್ರಶ್ನೆ ಗಳ ಸುರಿಮಳೆ ಬರಬಹುದು ಅಲ್ವೇ ? ಭಾರೀಚೂಟಿ ನಿಮ್ಮ ಮಗು !!!

    ReplyDelete
  3. ಈಗಿನ ರಾಜಕೀಯದಲ್ಲಿ, ಪ್ರಜೆಗಳು ಒರಲುವ ಮಾತನ್ನೇ ಹೇಳಿದ್ದೀರಿ:
    "ನನಗೆ ಗೊತ್ತಿಲ್ಲ!"

    ReplyDelete
  4. ಮಹೇಶ್...ಜಲನಯನದಲ್ಲಿ ನಮ್ಮ ಆಶಯ ಓದಿ ಇಲ್ಲಿ ಈ ಮಂತ್ರಿಗಳ ಕಂತ್ರಿತನ...ಛೇ ಅನ್ಸುತ್ತೆ ಅಲ್ಲವೇ...ಆದ್ರೆ ಎಲ್ಲಾ ಯುವಜನ ಮಕ್ಕಳಲ್ಲಿ ಈ ಎಲ್ಲದರ ಪೂರ್ಣ ರೂಪ ಮನದಟ್ಟಾದರೆ..ನಮ್ಮ ಆಶಯ ಸಫಲ..ಅಲ್ವೇ..? ಧನ್ಯವಾದ

    ReplyDelete
  5. ತರುಣ್..ಮಗುವಿನ ಒಂದು ಮುಖ ನಮ್ಮದೇ ನಮ್ಮ ಒಂದು ಮುಖ ಮಗುವಿನದು ಹೀಗಾಗಿ ಗೊಂದಲಗಳು,,,ಮಗುವಿನ ಬುದ್ಧಿವಂತಿಕೆ ನಮಗೆ ಬಂದಿದ್ದರೆ ಚನ್ನಿತ್ತು....ಧನ್ಯವಾದ

    ReplyDelete
  6. ಪರಾಂಜಪೆ ಸರ್...ಸಣ್ಣ ಪ್ರಯತ್ನ ಮಗುವಿನ ಮೂಲಕ ನಮ್ಮ ಮುಖ ಉಳಿಸಿಕೊಳ್ಳೋಕೆ...ಎಲ್ಲದಕೆ ನಾವೇ ಕಾರಣರು ಆದ್ರೂ ಗೊತ್ತಿಲ್ಲ ಅನ್ನೋ ಸೋಗು...ಅಲ್ಲವೇ..? ನಿಮ್ಮ ಊಹೆ ಸರಿಯಾಗಬಹುದು..ಅದು ನಿಮ್ಮಿಂದ ಬಂದರೂ ಆಶ್ಚರ್ಯವೇನಿಲ್ಲ..ಹಲವು ಬಾರಿ ನಿಮಗನಿಸಿದ್ದು ನಾನು ಮಾಡಿದ್ದೇನೆ..ಹಹಹ...ಧನ್ಯವಾದ

    ReplyDelete
  7. ಸುನಾಥಣ್ಣ...ಹೌದು ಪ್ರಜೆಗಳು ಪಿಸು ಪಿಸು...ಆದ್ರೆ ಮಗುವಿಗೇನಡ್ಡಿ..? ಬೇಕಾದರೆ ಮಿನಿಸ್ಟ್ರುಗಳ ಮುಖದ ಮೇಲೆಯೇ ಕೇಳುತ್ತಾನೆ ..ಅವ.....

    ReplyDelete
  8. ಓದಿದೆ..

    ಮುಂದಿನ ಸಲದ ಕಾರ್ಯಕ್ರಮಕ್ಕೆ 'ಆಹ್ವಾನಿಸಿದ್ದೀರಿ..' ಖಂಡಿತ ಬರೋಣ.

    ReplyDelete
  9. ಅಪ್ಪ ಮಗನ Concept ಚನ್ನಾಗಿದೆ

    ReplyDelete
  10. ಗುರು...ಧನ್ಯವಾದ...ಖಂಡಿತ ನಮ್ಮ ಮುಂದಿನ ಕಾರ್ಯಕ್ರಮಕ್ಕೆ ನೀವು ಬರಲೇ ಬೇಕು,,,

    ReplyDelete
  11. ನಿಶಾ ಧನ್ಯವಾದ...ಪ್ರತಿಕ್ರಿಯೆಗೆ

    ReplyDelete
  12. ಮಂಜು ಅಪ್ಪ-ಮಗ ಮಾತನಾಡಿಕೊಳ್ಳೋದು ನನಗೆ ಮುಂಚಿನಿಂದಲೂ ಆಕರ್ಷಿಸಿದ್ದು...ಅದಕ್ಕೇ ಅದನ್ನು ಒಂದು ಕಾನ್ಸೆಪ್ಟ್ ಮಾಡಿಕೊಂಡೆ..ಧನ್ಯವಾದ

    ReplyDelete
  13. ಚೆಂದದ ಪ್ರಶ್ನೆಗಳು. ಆದರೆ ಪಂಚ ಕಡಿಮೆ ಆಯಿತು!

    ReplyDelete
  14. magu keliddu andre maate illa,muddaage maddu kododu.tumbaa chennaagide sir consept.abhinandanegalu.

    ReplyDelete
  15. ತುಂಬಾ ಚನ್ನಾಗಿದೆ ಸಾರ್,
    ಒಳ್ಳೆ ಪ್ರಶ್ನೆಗಳು ವಾಸ್ತವಕ್ಕೆ ಹತ್ತಿರ ಇವೆ...

    ReplyDelete