Saturday, February 20, 2010

ಇನ್ನೊಂದು-ಮೂರು..ಹಾಗೇ...

ಕಾಲ್-ಏಜು


ನನಗಾಯ್ತು ಯುವೇಜು
ಜೊತೆಗೆ ನೀನ್ಬಂದೆ ಬಾಜು
ಎಲ್ಲ ಸೇರಿದ್ದು ಅಲ್ಲಿ
ಅದುವೇ ನಮ್ಮ ಕಾಲ್-ಏಜು


ಮನೆಯವರಿಗೆ ಸುಳ್ಳು
ಕಲಿಯೋದಕ್ಕೆ ಕಲ್ಲು
ಕೆಲವರು ಸೇರೋದೆ ಇಲ್ಲಿ
ಮಾಡೋಕೆ ಗುಲ್ಲು


ಕಲಿತವ ಉಳೀತಾನೆ
ಇಲ್ಲದವ ಅಲೀತಾನೆ
ಅವ ಆಗ್ತಾನಲ್ಲೇ ಪ್ರೊಫೆಸರು
ಇವ ಬರೋರ್ಗೆಲ್ಲಾ ಸೀನಿಯರು


No ಮಿಲನ್
ಅವಳಪ್ಪನಾದ ನಮ್ಮಿಬ್ಬರ ಮಧ್ಯೆ
ವಿಲನ್
ಅದಕೇ ಬಹಳದಿನ ಆದ್ರೂ ಆಗುತ್ತಿಲ್ಲ
ಮಿಲನ್




Un-ರೀಚಬಲ್ಲು
ಕ್ಲಿಂಟನ್ನು ಮಾವ
ಲ್ಯಾಡನ್ನು ಭಾವ
ಲಾಲು ಅವ್ರಪ್ಪ
ಶನಿ, ರಾಹು, ಕೇತು
ಎಲ್ಲಾ ಇದ್ದಕಡೆ
ನಾನು ಹ್ಯಾಗೆ ಹೋಗಲಪ್ಪ

19 comments:

  1. ಆಜಾದ್ ಸರ್,
    ಚೆನ್ನಾಗಿದೆ ಹೊಸ ಹೊಸ ಪ್ರಯೋಗ.....
    ಕಲಿತವ ಉಳೀತಾನೆ
    ಇಲ್ಲದವ ಅಲೀತಾನೆ
    ಅವ ಆಗ್ತಾನಲ್ಲೇ ಪ್ರೊಫೆಸರು
    ಇವ ಬರೋರ್ಗೆಲ್ಲಾ ಸೀನಿಯರು.
    ಈ ಸಾಲುಗಳು, ನಿಮ್ಮ ಗುಂಡನ ಕಥೆ ನೆನಪಿಗೆ ತಂತು..... ಅವರ ಮೇಲೇನೆ ಬರೆದಿದ್ದಾ...... ಒಟ್ಟಾರೆ ಚೆನ್ನಾಗಿದೆ....

    ReplyDelete
  2. ದಿನಕರ್, ಧನ್ಯವಾದ...ಹಹಹ..ಅಲ್ಲ ಗುಂಡ..ಪಾಠಕಲ್ತ ಲೇಟಾಗಿಯಾದರೂ...ಅದರೆ ಕೆಲವರು ..ಊಹೂಂ...ಕಲಿಯೊಲ್ಲ...ಕ್ಲಾಸಿನಲ್ಲೂ ಜೀವನದಲ್ಲೂ...ಹಹಹಹ

    ReplyDelete
  3. ಭೈಯ್ಯ ನಿಮ್ಮ ಪ್ರಯೋಗಗಳು ಒಂದಕ್ಕಿಂತ ಒಂದು ಸೂಪರ್ ಆಗಿ ಬರ್ತಾ ಇವೆ ..
    ನಿಮ್ಮ ಹೊಸತನ ನನಗೂ ಸ್ಪೂರ್ತಿಯಾಗಿ .. ಹೊಸತನ್ನ ಬರೆದು ಬಿಡಬೇಕು ಅನ್ನಿಸ್ತಿದೆ :)

    ReplyDelete
  4. ಕಚಗುಳಿಯಿಡುವ ಚುಟುಕವನಗಳು. Carry on, plz!

    ReplyDelete
  5. ಅಜಾದಣ್ಣ,
    ಎಲ್ಲವೂ ಸೂಪರ್...
    ಕಾಲ್-ಏಜು ಬಹಳ ಚೆನ್ನಾಗಿದೆ...
    ಮುಂದುವರೆಸಿ....

    ReplyDelete
  6. ಅವ ಆಗ್ತಾನಲ್ಲೇ ಪ್ರೊಫೆಸರು
    ಇವ ಬರೋರ್ಗೆಲ್ಲಾ ಸೀನಿಯರು....
    ee eradu saalugalu tumba ista aithu..
    mooru kavanagalu chennagide sir :)

    ReplyDelete
  7. ಅಜಾದ್,

    ಚುಟುಕುಗಳಲ್ಲಿ ಹೊಸ ಪ್ರಯೋಗವನ್ನು ಮಾಡುವುದರಲ್ಲಿ ನೀವು ಸಿದ್ದಹಸ್ತರು. ಕಾಲೇಜು ಹೋಗಿ ಕಾಲ್-ಏಜ್ ಆಗಿದ್ದು ಹೊಸತು. ಮುಂದುವರಿಸಿ.

    ReplyDelete
  8. ರಂಜು..ಥ್ಯಾಂಕ್ಸ್..ನಿನಗೆ ನಿನ್ನ ಚುಟುಕಗಳತ್ತ ಬರಲು ನನ್ನ ಚುಟುಕ ಪ್ರಚೋದನೆ ನೀಡ್ತವೆ ಅಂದ್ರೆ...ಎಲ್ಲಿ..ಬರಲಿ..ಹೊಳೆ ಹರಿದು,..ಬಹಳ ದಿನದಿಂದ ನಿನ್ನ ಚುಟ್ಕ-ಗುಟ್ಕ ಸಿಗ್ತಿಲ್ಲ...

    ReplyDelete
  9. ಸುನಾಥ್ ಸರ್..ನನ್ನ ಪ್ರಯತ್ನಗಳಿಗೆ ಪ್ರತಿಕ್ರಿಯೆ ಪ್ರೋತ್ಸಾಹದ ನಿಮ್ಮ ಸಾಥ್..ಧನ್ಯ...ನಿಮ್ಮ ಪ್ರೋತ್ಸಾಹ ಹೀಗೇ ಇದ್ದರೆ ಖಂಡಿತಾ ತ.ತಿ. ಮುಂದುವರೆಸುತ್ತೇನೆ (ಅಂದಹಾಗೆ...ತ.ತಿ. ..ತಲೆ ತಿನ್ನೋದು...ಹಹಹ)

    ReplyDelete
  10. ಮಯೇಸಣ್ಣ...ಚುಟುಕದಲ್ಲಿ ಗುಟುಕನ್ನು ಸ್ವೀಕರಿಸಿ..ಪ್ರತಿಕ್ರಿಯೆ ನೀಡಿದ್ದಕ್ಕೆ ಥ್ಯಾಂಕು...

    ReplyDelete
  11. ಮಂಜು ಶ್ವೇತೆಗೆ ಧನ್ಯವಾದ..ನಿಮ್ಮ ತಪ್ಪದ ಪ್ರೋತ್ಸಾಹಕ ಎರಡು ಸಾಲುಗಳು ಇರುತ್ತವೆ ನನ್ನ ಪ್ರತಿ ಪೋಸ್ಟ್ ಗೆ thanks

    ReplyDelete
  12. ಶಿವು, ಅಯ್ಯೋ ಹಾಗೆಲ್ಲ ಇಲ್ಲಪ್ಪ ಏನೋ ತೋಚಿದ್ದು ಗೀಚುವ ಹಸ್ತ ಅಷ್ಟೇ...ಇದನ್ನು ಪ್ರೋತ್ಸಾಹಿಸೋ ನಿಮ್ಮಂತಹ ಮಿತ್ರರು ಇರುವಾಗ..ಬರೆಯಲು ನಮಗೆ ಸ್ಪೂರ್ತಿಯೇ...ಧನ್ಯವಾದ

    ReplyDelete
  13. ಗೌತಮವ್ರೇ..ಧನ್ಯವಾದ ಸಾರ್, ನಿಮ್ಮ ಪ್ರತಿಕ್ರಿಯೆಗೆ ಮತ್ತು ಪ್ರೋತ್ಸಾಹಕ್ಕೆ...

    ReplyDelete
  14. 'ಜಲನಯನ' ಅವ್ರೆ..,

    ಕಾಲೇಜಿಗೆ ಸೇರಿದಮೇಲೆ.. 'heart ನ not reachable ಮಾಡ್ಕೊಂಡ್ರೆ ಚೆನ್ನ...

    Blog is Updated:http://manasinamane.blogspot.com

    ReplyDelete
  15. ಅಜ್ಹಾದ್ ಸರ್
    ಅದೇನು ಸಾಲುಗಳು ಸರ್
    ತುಂಬಾ ಮುದ ನೀಡಿತು

    ReplyDelete
  16. ಗುರುದೆಸೆ...ನಿಮ್ಮ ಹೆಸರು ಹೀಗೇ ಬರೀ ಬೇಕಾಗುತ್ತೆ ಯಾಕಂದ್ರೆ ನಮ್ಮ ಸಾಫ್ಟಿ ಗುರು ಮತ್ತು ನಮ್ಮ ಸೈಂಟಿಸ್ಟ್ ಗುರುಮೂರ್ತಿ ಮದ್ಧ್ಯೆ ನಿಮ್ಮನ್ನ ಗುರುತಿಸೋದೂ ಹೀಗೇ ಸಾಧ್ಯ....ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ.

    ReplyDelete
  17. ಗುರು, ಧನ್ಯವಾದ ....ನಮ್ಮ education ಸಮಯದಲ್ಲಿ ವೆಟರಿನರಿ ಮತ್ತು ಫಿಶರೀಸ್ ಪದವಿಗಳಲ್ಲಿ ಕೆಲವರಿಗೆ ಹೀಗೆ ಆಗಿದ್ದುಂಟು ಏಳೆಂಟು ವರ್ಷ ಆದರೂ ೪-೫ ವರ್ಷದ ಕೋರ್ಸ್ ಮುಗಸ್ತಾಇರ್ಲಿಲ್ಲ ಕೆಲ ಭೂಪರು...ಅದರ ನೆನಪು..ಈ ಕವನಕ್ಕೆ ಸ್ಪೂರ್ತಿ.

    ReplyDelete
  18. ತುಂಬಾ ಒಳ್ಳೆ ಸಾಲುಗಳು ಆಜಾದ್ ಸರ್ ....ಕಾಲ್ ಎಜು ..ಸಾಲುಗಳಂತೂ ಮಸ್ತ್ ...ಹ ಹ ಹ....!! ಎಲ್ಲ ಕವಿತೆಗಳೂ ಚೆನ್ನಾಗಿವೆ...:))

    ReplyDelete