Tuesday, December 29, 2009

ಗಾನ ಗಾರುಡಿಗನಿಗೆ ನಮನ

ಲಾಭ-ನಷ್ಟ
ತರವಲ್ಲ ತಂಬೂರಿ ತಂತಿ ಹರಿಯಿತು
ಇಹವಲ್ಲ ಪರಕೆ ಪ್ರಾಣಪಕ್ಷಿ ಹಾರಿತು
ನಿಮ್ಮಾಗಮನ ಸ್ವರ್ಗದಿ ಲಾಭವಲ್ಲಿ
ಕಳೆದುಕೊಂಡ ನಮಗೆ ಆಯಿತು ನಷ್ಟವಿಲ್ಲಿ.

ಹಾರಿತ್ತು ಪ್ರಾಣ ಪಕ್ಷಿ
ಕೋಡಗ ಆಗಲಿಲ್ಲ ಕೋಳಿಗೆ ತುತ್ತು
ಆನೆ ಹೊಗಲಿಲ್ಲ ಆಡಿಗಿಲ್ಲ ಹೊತ್ತು
ಮೋಡ ಮಳೆಗರೆಯದೆ ಹೋದದ್ದು
ಜಟಕದ ಕುದುರೆ ಸುಮ್ಮನೆ ನಡೆದದ್ದು
ನೀಲಾಕಾಶಕೆ, ಸಾಬಿಗೆ ಆಗದಾಯ್ತು ಗೊತ್ತು
ಯಾರಿಗೂ ತಿಳಿಯಲೇ ಇಲ್ಲ
ಹುಟ್ಟುಹಬ್ಬದಂದೇ ಪ್ರಾಣಪಕ್ಷಿ ಹಾರಿತ್ತು.


ಇನ್ನಿಲ್ಲದ ಗಾಯನ ಗಾರುಡಿಗ
ಮನಬಿಚ್ಚು-ಮುಕ್ತ ಕಂಠದ ಭೋರ್ಗರೆವ ಹಾಡು
ನೇಗಿಲಯೋಗಿ ಮಣ್ಣವಾಸನೆ ಬಂತಲ್ಲಿಗೆ ಬೀಡು
ಏನೋ ತವಕ, ಎಂತಹ ಚಿಮ್ಮುವ ಹುರುಪು ನೋಡು
ಗಾಯನ ಗಾರುಡಿಗನ ಕಳೆದುಕೊಂಡಿತು ನಮ್ಮ ನಾಡು

12 comments:

  1. ಕವನಗಳ ಸಾಲುಗಳು ತುಂಬಾ ಚೆನ್ನಾಗಿವೆ ಸರ್, ಸುಗಮ ಸಂಗೀತ ಪ್ರಪಂಚಕ್ಕೆ ಹೊಸ ಅಲೆಯನ್ನೇ ಎಬ್ಬಿಸಿದ್ದರು...ನಿಜಕ್ಕೂ ಕನ್ನಡ ಸಾಹಿತ್ಯಸಂಗೀತಕ್ಕೆ ತುಂಬಲಾರದ ನಷ್ಟ

    ReplyDelete
  2. ನಾವು ತುಂಬಾ ಇಷ್ಟಪಡೋರು, ನಮಗೆ ಪರಿಚಯವಿಲ್ಲದಿದ್ದರೂ, ಇನ್ನಿಲ್ಲ ಎಂದಾಗ ತುಂಬಾ ಸಂಕಟವಾಗುತ್ತೆ.

    ReplyDelete
  3. ದೇವರು ಅವರ ಆತ್ಮಕ್ಕೆ ಚಿರಶಾಂತಿ ಮತ್ತು ಅವರ ಕುಟುಂಬಕ್ಕೆ ನೆಮ್ಮದಿ ಮತ್ತು ಸಾಂತ್ವನ ಕೊಡಲಿ

    ReplyDelete
  4. ಅಜಾದ್ ಸರ್,
    ನಿಜಕ್ಕೂ ಬಿಟ್ಟು ಹೋಗಿ ನಮ್ಮನ್ನೆಲ್ಲಾ ಅನಾಥರನ್ನಾಗಿ ಮಾಡಿ ಹೋಗಿದ್ದಾರೆ ....... ಅವರ ಸ್ವರ ನಮ್ಮ ಕಿವಿಯಲ್ಲಿ ಯಾವಾಗಲೂ ಇರಲಿ.... ಇರುತ್ತದೆ....

    ReplyDelete
  5. ದೇವರು ಅವರೇ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸುವೆ ಸರ್

    ReplyDelete
  6. ದಿನಕರ್ ನಾನು ಈ ಪ್ರತಿಕ್ರಿಯೆಗಳಿಗೆ ಪ್ರತ್ಯುತ್ತರ ನೀಡುವಾಗಲೇ ಇನ್ನೊಂದು ಮಹಾನ್ ತಾರೆ ಅಸ್ತಂಗತವಾಗಿದೆ...ಶಬ್ದಗಳ ಬರ ಇದೆ..ಏನೂ ಹೇಳಲಾರೆ.

    ReplyDelete
  7. ಮನಸು ಮೇಡಮ್ ನಾಡು ಸಜ್ಜನರಿಂದ ತುಂಬಿತ್ತು ವಿಷ್ಣು, ಅಶ್ವತ್ ಆ ಗಣಿಯ ಲೋಪವಾದ ಸಂಪತ್ತು...ಪರದಲ್ಲಿ ಅವರಿಗೆ ಚಿರ ಶಾಂತಿಗೆ ಪ್ರಾರ್ಥಿಸೋಣ.

    ReplyDelete
  8. ಆನಂದ್ ನಿಮ್ಮಂತೆ ಹಲವರು ನೋವುಂಡ ವರ್ಷದ ಅಂತ್ಯ ದಿನಗಳಿವು...ಅಗಲಿದ ಆತ್ಮಕ್ಕೆ ಶಾಂತಿಯ ಕೋರಿಕೆ ಮತ್ತು ಅವರ ಆತ್ಮೀಯರಿಗೆ ಸಾಂತ್ವನದ ಹೇಳಿಕೆ ಅಷ್ಟೇ ನಮ್ಮಿಂದ ಸಾಧ್ಯ.

    ReplyDelete
  9. ನಿಶಾ ಟೀವಿಯನ್ನು ಬೆಳಿಗ್ಗೆ ನೋಡಿದಾಗ..ಚಿವುಟಿಕೊಂಡೆ..ನಿದ್ದೇನಾ ಅಂತ...ಅಲ್ಲ..ಕರಾಳ ವಾಸ್ತವ ಬಲು ಬೇಸರದ ಎರ್ಡನೇ ದಿನ

    ReplyDelete
  10. ಮಂಜುಶ್ವೇತ ನಿಮ್ಮ ಮಾತು ನಿಜ ಅವರ ಆತ್ಮಕ್ಕೆ ಶಾಂತಿ ಕೋರುವುದು ನಮಗುಳಿದ ಕೆಲಸ

    ReplyDelete
  11. ತುಂಬಾ ನಾಟುವ ಸಾಲುಗಳು
    ಗಾನ ಗಂಧರ್ವನಿಗೆ ನಮ್ಮ ನಮನ

    ReplyDelete
  12. ಗುರು ಧನ್ಯವಾದಗಳು...ಅಶ್ವಥ್ ಹಾಡು ಕೇಳಿದ ಮೇಲೂ ದನಿ ಪ್ರತಿಧ್ವನಿಸುತ್ತದೆ ಬಹಳ ಸಮಯದವರೆಗೆ.

    ReplyDelete