ಬೀರಬಲ್
ಗುಂಡಾನೋ...
ಬೀರಬಲ್ಲ
ಬೀರನ್ನ ಬಿಟ್ರೆ
ಇನ್ನೇನನ್ನೂ ಬಲ್ಲ
ಕಣ್ಣ ಬಾಣ
ಕಣ್ಣಲ್ಲೇ ಬಾಣ
ಹುಬ್ಬು ಕುಣಿಸಿ
ಅದೇ ಬಿಲ್ಲು
ಅದಕ್ಕೇ ಹೇಳೋದು
ಹುಡ್ಗೀರ್ದೇ ದಿಲ್ಲು
ಬರ್ತ್ ಡೇ ಕೇಕು
ವೈಯ್ಯಾರಿ ಸೈಕಲ್ ಚಕ್ರ
ಸಗಣಿತೊಪ್ಪೆ ಕತ್ತರಿಸಿತ್ತು
ಬಿದ್ದಿದ್ದೊಂದು ಅಲ್ಲೇ ಹತ್ರ
ಹಿಂದೆ ನಿಂತ ಪಡ್ಡೇ ಹೈಕ್ಳು ಅಂದ್ರು
“ಹ್ಯಾಪಿ ಬರ್ತ್ ಡೇ ಟು ಯೂ”
ಕಿಲಾಡಿ ಹುಡ್ಗಿ
ಹಿಂತಿರುಗಿ ಹೇಳೋದೇ?
“ಪೂರ್ತಿ ಕೇಕ್ ಈಸ್ ಫ಼ಾರ್ ಯೂ”
ಐಸ್ ಕ್ರೀಮ್
ಅವಳಿಗೆ ಬಂತು
ಗುಂಡನ ಮೇಲೆ
ಅಚಾನಕ್ಕು ಪ್ರೇಮ
ಕರಗಿಬಿಟ್ಟ ಗುಂಡ
ತಿನ್ನೋಕೆ ಮುಂಚೆನೇ
ಅವಳು ಕೊಡ್ಸಿದ
ಐಸ್ ಕ್ರೀಮ
ವ್ಯತ್ಯಾಸ
ಮದ್ವೆಗೆ ಮುಂಚೆ
ಅವನದ್ದು ಪರ್ಸು
ಇಬ್ಬರದೂ –ಕೈ
ನಂತರವೂ..
ಅವನದ್ದೇ ..ಪರ್ಸು..
ಅವಳದ್ದೇ..ಕೈ
ಕಾರು ಬಾರು
ಗುಂಡ ಹೇಳ್ದ
ಇದೆ ನಂದೂ ದೊಡ್ಡ
ಕಾರುಬಾರು
ಮದುವೆಯಾಯ್ತು ಮಾವ ಕೇಳ್ದ
ತೋರಿಸ್ದ ತನ್ನ ಮುರುಕಲು ಕಾರು,
ಅದರಲ್ಲೇ ತುಂಬಿದ್ದ
ಬಾಟ್ಲು ಬ್ರಾಂದಿ-ಬೀರು
ಮಾಡಿ ಅದನ್ನೇ ಒಂದು ಬಾರು
ಕಣ್ಣೀರು
ಮಡುಗಟ್ಟಿದ ದುಃಖ
ಬೆಂಬಿಡದ ಶೋಕ
ಅವಡುಗಚ್ಚಿ ತಡೆದರೂ
ರೆಪ್ಪೆದೂಡಿ ಬರುವುದು
ಹನಿಯೊಂದು-ಕಣ್ಣೀರು
ಅವಿನಾಶ ಯಾರು ನಿನ್ನ
ವಿನಾಶಕ್ಕೆ ದೂಡಿದ್ದು?
ಕೇಳಿ- ಮನತುಂಬಿತ್ತು
ನನ್ನದೇ ಕರುಳಕುಡಿ
ವಿಜಯನಿಗೂ ಅದೇ ಗತಿ
ಯೋಚನೆ ಮಾತ್ರದಿ
ತಡೆಯಲಾರೆ ಬರುತಿರೆ
ಕಣ್ತುಂಬಿ - ಕಣ್ಣೀರು.
ಅವಿನಾಶ-ವಿಜಯರು
ಅವರೆಲ್ಲಿ ತಿರುಗಿ ಬರುವರು
ಬಂದರು ಹಲವರು
ಆಯುಕ್ತರು ಮಂತ್ರಿವರ್ಯರು
ಬಂತು ಹೊತ್ತು
ಲಕ್ಷಹೊತ್ತ ಅಧಿಕಾರಿಗಳ ಕವರು
ಲಕ್ಷ-ಕೋಟಿಗಳೂ ತಡೆಯಲಾರವು
ನೆನಪಹೊತ್ತು ಪದೇ ಪದೇ
ನಿಲ್ಲದೇ ಬರುವ-ಕಣ್ಣೀರು
ಜಲನಯನ ಸರ್,
ReplyDeleteಚುಟುಕು ಕವನಗಳು ಖುಷಿಕೊಡುತ್ತವೆ...ಅದರಲ್ಲೂ
ಭರ್ತ್ ಡೇ ಕೇಕ್ ಪದ್ಯ ಸಕ್ಕತ್ತಾಗಿದೆ...
ಚುಟುಕಗಳು,
ReplyDeleteಮುದ ನೀಡುವ
ಗುಟುಕುಗಳು
ಹದವಾಗಿದ್ದರೆ...ಇಲ್ಲ
ಕಹಿ ಹನಿಗಳು
ತಲೆಗೆ ಪದೇ-ಪದೇ
ಮೊಟಕುಗಳು
ಶಿವು ಈ ಚುಟುಕದ ಬಗ್ಗೆ ಏನಂತೀರಿ?? ಹಹಹ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ಅಝಾದಣ್ಣ,
ReplyDeleteಚುಟುಕಗಳು,
ಮುದ ನೀಡುವ
ಗುಟುಕುಗಳು...
ಸೂಪರಾಗಿದೆ ಎಲ್ಲ ಹನಿಗಳು....
ಇನ್ನಷ್ಟು ಬರಲಿ....
nice
ReplyDeleteಬಾರಿ ಚೆಂದ ಇದೆ ಸರ್ ಚುಟುಕುಗಳು... ಏನು ಕಾರ್ ನಲ್ಲು ಬಾರ್ ಇಡಬಹುದು ಅಂತ ಗೊತ್ತಾಯ್ತು ಹಹಹ... ಸೂಪರ್ ಪಂಚ್ ಹಹಹ್
ReplyDeleteಸರ್ ಊರಲ್ಲೆಲ್ಲಾ ಸಂಚಾರಿ ಗ್ರಂಥಾಲಯ ಎಲ್ಲ ಇರುತ್ತಲ್ಲ ಹಾಗೆ ಸಂಚಾರಿ ಬಾರ್ ಮಾಡಬಹುದು ಅಲ್ವ ಮನೆಗಳ ಹತ್ತಿರನೇ ಹೋಗಿ ಎಲ್ಲರಿಗೊ ಮನೆ ಮಂದಿಗೆಲ್ಲ ಕುಡಿಸಿ ಬರಬಹುದು ಹೇಗಿರುತ್ತೆ ಈ ಬಿಸಿನೆಸ್ ಹಹಹಹ.......ನಿಮ್ಮ ಚುಟುಕಿಂದ ಈ ಐಡಿಯಾ ಬಂತು ಹಹಹ..
ಮಹೇಶಣ್ಣ ಯಾಕೋ...ನಿಮ್ಮ ಊರಿಗೆ ಹೋಗೋ ದಿನಗಳನ್ನ ನಿರ್ಧರಿಸೋ ಉಪಾಯ ನಾನೇ ನಿಮ್ಮ ಮನೆಯವರಿಗೆ ಹೇಳಿಕೊಟ್ಟಹಾಗಿದೆ ಅವರು ನನ್ನ ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರೋ ರೀತಿ ನೋಡಿದ್ರೆ...ಹುಷಾರಾಗಿ ಊರಲ್ಲಿ ಹಳೇ ಹಡಾಸ್ ಕಾರ್ ಇದ್ರೆ ಮಾರಿಬಿಡಿ..ಆಮೇಲೆ ನನ್ನನ್ನ ಬೈಬೇಡಿ...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteಧನ್ಯವಾದ ಸಿತಾರಂ ಸರ್, ಇದು ಅದೇನೋ ಹೇಳ್ತಾರಲ್ಲ ಅಳ್ಳಿ ನಾಟ್ಕ್ ದಾಗೆ...."ಎಲ್ಲಿ ಒಸಿ ಒಗಿ ಒಂದ್ಪದ್ಯ ಅಂಗೇಯ.." ಅನ್ನೋಥರ ಒಂದು ಕವನದ ಸರಣೀನ ಒಗ್ದೆ..ಅಷ್ಟೆ...
ReplyDeleteಏನು ಹೇಳಲಿ...
ReplyDeleteನಗಿಸಲು ನೀನು ನಗುವೆನು ನಾನು....
ಆಮೇಲೆ ನಿಮ್ಮ ಪ್ಲಾನ್ work out ಆದ್ರೆ...
ಕುಡಿಸಲು ನೀನು ಕುಡಿಯುವೆ ನಾನು
ಅಂತ ಮಹೇಶಣ್ಣಂಗೆ ಜನಾ ಹೇಳ್ತಾರೆ....ಹಹಹಹ....
ಧನ್ಯವಾದ
ಸರ್ , ಸಕ್ಕತ್ತಾಗಿದೆ ಹನಿಗಳೆಲ್ಲ ..
ReplyDelete" ವ್ಯತ್ಯಾಸ " ಮಾತ್ರ ಸೂಪರ್ :P
Very good punches!
ReplyDeleteರಂಜಿತಾ, ನಿಮ್ಮ ನನ್ನಾk ನಂತರ ಏನೂ ಕಾಣಲಿಲ್ಲ..ಬ್ಯುಸಿನಾ ಹೇಗೆ...??
ReplyDeleteನಿಮ್ಮ ಬ್ಯುಸಿ ಶೆಡ್ಯೂಲ್ ನಲ್ಲೂ ನನ್ನ ಪಂಚ್ ಗೆ ಒಂದು ಇಂಚ್ ಹಾಕಿದ್ರಲ್ಲಾ ಕಾಮೆಂಟ್ ಧನ್ಯವಾದ...
ಸುನಾಥ್ ಸರ್,
ReplyDeleteನಿಮ್ಮ ಕಾಲಾವಕಾಶ ಪಡೆಯೋಕ್ಕೆ ನನ್ನ ಬ್ಲಾಗುಗಳು ಪುಣ್ಯಮಾಡಿರಬೇಕು..ನನ್ನ ಪಂಚ್ ಗಿಂತ ನಿಮ್ಮ ಪಂಚ್ ಜೋರಿದೆ ಒಂದೇ ಮಾತಲ್ಲಿ ಪ್ರತಿಕ್ರಿಯೆ ನೀಡಿದರೆ..ಎಲ್ಲಾ ನಮಗೇ ಬಿಟ್ಟದ್ದು ಅಲ್ಲವೇ..? ತುಂಬಾ ಧನ್ಯವಾದಗಳು...ಈ ಕಾಮೆಂಟಿಗಲ್ಲ ..ತಪ್ಪದೇ ಎಲ್ಲ ಪೋಸ್ಟ್ ನೋಡಿ ಪ್ರೋತ್ಸಾಹಿಸುತ್ತೀರ ಅದಕ್ಕೆ...
ಭಾವಮಂಥನ ಮಾಡಿ ಒಳ್ಳೆ "ಪಂಚ್"ಅಮೃತವನ್ನೇ ಹೊರತೆಗೆದಿದ್ದೀರಿ ಸರ್.
ReplyDeleteಬೀರಬಲ್, ಕಣ್ಣಬಾಣ ಬಹಳ ಇಷ್ಟವಾದವು, ಹೀಗೆ ಬರೀತಿರಿ.
ಕವನದ ಪಂಚ್ ಚೆನ್ನಾಗಿದೆ,
ReplyDeleteಒಳ್ಳೆಯ ಕವನಗಳು
ಪ್ರಭು..ನಿಮ್ಮ ನನ್ನಾk ಮೇಲೆ ನೀವೂ ಪ್ರಯತ್ನಿಸಿ...ಖಂಡಿತ ನಿಮ್ಮ ಪಂಚು ಇನ್ನೂ ಚನ್ನಾಗಿರುತ್ತೆ...ಧನ್ಯವಾದ..ನಿಮ್ಮ ..ಪ್ರೋತ್ಸಾಹಕ್ಕೆ
ReplyDeleteಗುರು, ನಿಮ್ಮ ಪ್ರತಿಕ್ರಿಯೆ...ಬಹಳ ದಿನಗಳ ನಂತರ...ತುಂಬಾ ಧನ್ಯವಾದಗಳು
ReplyDeleteಚುಟುಕುಗಳಲ್ಲಿ ಒಳ್ಳೆಯ ಪಂಚ್ ಇದೆ.....
ReplyDeleteದಿನಕರ್, ಭಾವಮಂಥನದಿ ದಿನಕರನ ಕಿರಣ ಧನ್ಯವಾಯಿತು ಮಂಥನ ಧನ್ಯ ಕವನ
ReplyDelete