Sunday, August 23, 2009

ಅದಲು-ಬದಲು

(ನನ್ನ ಬ್ಲಾಗ್ ಮಿತ್ರರ ಪ್ರತಿಕ್ರಿಯೆಯಿಂದ ಮಂಥಿತ ಕಾಂಪನ್ಸೇಷನ್ ಚುಟುಕದ ಎರಡನೇ ಭಾಗ)
ಎಂದಿನಂತೆ ಕೊಟ್ಟೆ ನನ್ನವಳಿಗೆ ಮುತ್ತು
ಜೊತೆಗೆ ಅವಳಮೂಗಿಗೊಂದು ನತ್ತು
ಗೊತ್ತಾಗಿಬಿಡ್ತು ನನ್ನ ಕಸರತ್ತು
ತೋರಿಯೇ ಬಿಟ್ಟಳಿವಳು ತನ್ನ ಗತ್ತು
ಬೇಡ ನನಗೆ ನತ್ತು ಸಾಕು ಒಂದೇ ಮುತ್ತು
ಅದಕೇ ಈಗ ಇಲ್ಲಿ ಮುತ್ತು
ಅಲ್ಲಿ ಮುತ್ತು ಮತ್ತು ನತ್ತು

8 comments:

  1. ಅಹಾಹ...ಮಾಡಿದುಣ್ಣೋ ಮಹರಾಯ....

    ReplyDelete
  2. ಚೆನ್ನಾಗಿದೆ....
    ಮುತ್ತಿನ ಗಮತ್ತು

    ReplyDelete
  3. ಮನಸು ಮೇಡಂ
    ಇದು ಬರಿ ಕವನ ಆಷ್ಟೆ, ಮತ್ತೆ ಅನುಮಾನ ಬೇಡ...
    ಏನೇ ಆದರೂ ನತ್ತು ಪ್ರತಿದಿನ ತರುವುದಾದರೆ...ಆಡ್ಡಿಯಿಲ್ಲ ಅಲ್ಲವಾ...ಹಹಹ...

    ReplyDelete
  4. ಸ್ವಾಮಿ, ಹಗಲುಗನಸಲಿ ತೇಲಾಡಬೇಡಿ...ಹಾಗೆ ನೋಡಿದ್ರೆ ನಿಮ್ಮ ಗುಟ್ಟನ್ನು ಬಯಲು ಮಾಡಿದ್ದೀನಿ ಹುಷಾರಾಗಿರಿ ಮುಂದಿನ ಸರ್ತಿ ನಿಮ್ಮವಳಿಗೆ ಮುತ್ತಿನ ನತ್ತು ತಂದಾಗ...!!!

    ReplyDelete
  5. ಕೆನ್ನೆ ಮೇಲೆ ಮುತ್ತಿನು೦ಗುರ.
    ಮೂಗ ಮೇಲೆ ನತ್ತಿನು೦ಗುರ
    ಸುಪರ್ ಆಗಿದೆ,

    ReplyDelete
  6. ಸೀತಾರಾಂ ಸರ್
    ನಮಸ್ತೆ, ಧನ್ಯವಾದ
    ನನ್ನ ಬ್ಲಾಗ್ ಗೆ ಭೇಟಿ ಕೊಟ್ಟದ್ದಕ್ಕೆ ಮತ್ತು ನಿಮ್ಮ ಛಾಪು ಪ್ರತಿಕ್ರಿಯೆ ಬಿಟ್ಟದ್ದಕ್ಕೆ

    ReplyDelete
  7. ಬಚಾವಾಯ್ತೆ ನಿಮ್ಮ ಕತ್ತು ???!!!!
    :-)
    ಮಾಲತಿ ಎಸ್.

    ReplyDelete