Friday, August 21, 2009

ಎರಡು -ಕವನ ಚುಟುಕಗಳು

ಲೆಕ್ಕಾಚಾರ ಚಿಂದಿ
ಸೊಳ್ಳೆ ತಂತು ಮಲೇರಿಯಾ
ಆಮೇಲೆ ಡೆಂಗ್ಯೂ
ಜೊತೆಗೆ ಚಿಕನ್ ಗುನ್ಯಾ
ಈಗ ಎಲ್ಲಿ ನೋಡಿದರೂ
ಹಂದಿ-ಫೋಬಿಯಾ
ಬಂತು ಡಿ.ಡಿ.ಟಿ
ಎನ್ಡೋಸಲ್ಫಾನ್
ಸೊಳ್ಳೆಪರದೆ
ಟಾರ್ಟಾಯ್ಸ್ ಕಾಯಿಲ್
ಗುಡ್ ನೈಟ್ ಮ್ಯಾಟಿನ ಸೇಲ್
ಲಿಕ್ವಿಡೇಟರ್ ಗೂ ಕಾಲ್
ಅಮೇಲೆ ಕೋಳಿ ಸರದಿ
ತಂತು ಹಕ್ಕಿಜ್ವರದ ವರದಿ
ಈಗ ಸುದ್ದಿಯಲ್ಲಿದೆ ಹಂದಿ
ಜ್ವರ ಹರಡಿ ಮಾನವ ಬಂಧಿ
ರೋಗಗಳಿಗೆ ಇತಿಯಿಲ್ಲ
ಮಾಡಿವೆ ಮಾನವನ ಲೆಕ್ಕಾಚಾರ ಚಿಂದಿ.

ಮಳೆ-ಇಳೆ
ಮಳೆ
ಇಳೆಯತ್ತ
ಇಳಿದರೆ
ಬೆಳೆ
ಕಳೆ.
ಮಳೆ
ಬಂದರೆ
ಕೆರೆ ಹೊಳೆ
ನದಿ ನಾಲೆ

ಮಳೆ
ಆದರೆ ನೀರು
ಕುಡಿಯಲು
ಬೆಳೆಬೆಳೆಯಲು
ಕಳೆತೊಳೆಯಲು

ಮಳೆ
ಇಲ್ಲದಿರೆ
ಬತ್ತುವುದು ಸೆಲೆ
ತೊರೆವುದು ನೆಲೆ
ಕೆರೆ ನಾಲೆ
ಹಸಿರು ಎಲೆ
ಜೀವ ಕಾಣದು ಬೆಲೆ
ನಾಗರಿಕತೆಗದು ಬರಿ ಸೋಲೆ


ಮುತ್ತು
ಹತ್ತು-ಇಪ್ಪತ್ತು
ಮುತ್ತು ಸಿಕ್ಕಿತ್ತು
ಅದಕಿಲ್ಲ ಹೊತ್ತು ಗೊತ್ತು
ಬೇಡವೆನಲು ಆಪತ್ತು
ಯಾಕಂದ್ರೆ ಅದು ನಮ್ಮಿಬ್ಬರ ಸೊತ್ತು

ಕಾಂಪನ್ಸೇಷನ್
ಪ್ರಿಯೆಗೆ ಕೊಡಬೇಕು
ಕದ್ದು-ಮುಚ್ಚಿ ಮುತ್ತು
ಅದು ಗೊತ್ತಾಗದಿರಲು
ನನ್ನವಳಿಗೆ ಮುತ್ತು
ಜೊತೆಗೆ ಮುತ್ತಿನ ನತ್ತು

14 comments:

  1. Compensation???!!!!
    ಒಳ್ಳೆ ಐಡಿಯ!
    :-)
    ಮಾಲತಿ ಎಸ್.

    ReplyDelete
  2. ಮಾಲತಿ, ನಿಮ್ಮ ಬರೋಣವನ್ನು ಸ್ವಾಗತಿಸಿ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳನ್ನು ತಿಳಿಸಿ, ನನ್ನ ಇನ್ನೆರಡು ಬ್ಲಾಗ್ ಗಳನ್ನೂ ಸ್ವಲ್ಪ ಅವಲೋಕಿಸಿ ಎಂದು ವಿನಂತಿಸಲೇ..???

    ReplyDelete
  3. ಸಕ್ಕತ್ idea ಸಾರ್ ಚೆನ್ನಾಗಿದೆ ಹನಿ -ಕವನಗಳು .. ನಿಮ್ಮಾಕೆ ಬ್ಲಾಗ್ ನೋಡದಂತೆ ಎಚ್ಚರ ವಹಿಸಿ :)

    ReplyDelete
  4. ಜಲನಯನ ಸರ್,

    ಏನ್ ಸರ್ ಎರಡು ದೊಡ್ಡ ಕವನಗಳು, ಮತ್ತೆರಡು ಚುಟುಕವನಗಳು. ಕೊನೆಯ ಚುಟುಕಿನ ವಿಚಾರ ನಿಮ್ಮ ಮನೆಯವರಿಗೆ ಗೊತ್ತಾ ಸಾರ್...

    ReplyDelete
  5. ರಂಜಿತ ನಿಮ್ಮ ಚುಟುಕಗಳ ಕುಟುಕನ್ನು ಮೀರುವಂತಹುದೇನಲ್ಲ ನನ್ನ ಚುಟುಕದ ಗುಟುಕು...ನನ್ನಾಕೆ ಬ್ಲಾಗ್ ನೋಡುವುದೇ..?? ಅಡ್ಡಿಯಿಲ್ಲ..ನೋಡಲಿ..ನಮ್ಮಲ್ಲಿ ಎರಡನೇ, ಮೂರನೇ ಮದುವೆಗೆ ಫ್ರೀಡಂ ಇದೆ....ಹಹಹ.....ಜೋಕಿಗೆ ಹೇಳಿದೆ ನಾನು ಏಕಪತ್ನೀ ವ್ರತಸ್ಥ....ನನ್ನ ಕವಿತ್ವದ ಹುಚ್ಚಿನ ಬಗ್ಗೆ ಅವಳಿಗೆ ಗೊತ್ತಿದೆ. ಆತಂಕ ಬೇಡ.

    ReplyDelete
  6. ಶಿವು ನಿಮಗೂ ಇದೇ ಶಂಕೇನಾ..?? ರಂಜಿತಾರಿಗೂ...anyway..ನನ್ನ ಬ್ಲಾಗ್ ನನ್ನ ಖಾಸಗಿ ಜೀವನ ಬೇರೆ-ಬೇರೆ ಹಳಿಯಮೇಲೆ ನೆಡೆವ ಒಂದೇ ಬಂಡಿಯ ಚಕ್ರಗಳು...ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  7. ನಿಮ್ಮ ಬ್ಲಾಗ್ನ ನೋಡಿಯೇ ನಿಮಗೆ ನನ್ನ ಬ್ಲಾಗ್ನ ನೋಡಲು ಹೇಳಿದೆ ಜಲ ಮೇಡಂ.....ನಿಮ್ಮ ಎರಡು ಬ್ಲಾಗ್ಗಳು ಮನೋಗ್ನವಾಗಿವೆ...ಈಶ್ ಎಂದು ಕರೆದರೇನು ಬೇಸರವಿಲ್ಲ....

    ReplyDelete
  8. ಈಶ್
    ವಂದನೆಗಳು ನನ್ನ ಬ್ಲಾಗ್ ಗೆ ಬಂದುದಕ್ಕೆ ಮತ್ತು ಪ್ರೋತ್ಸಾಹಿಸಿದ್ದಕ್ಕೆ.
    ನನ್ನ ಪ್ರೊಫೈಲ್ ಒಮ್ಮೆ ನೋಡಿಬಿಡಿ ಕೆಲವು ಸೈದ್ಧಾಂತಿಕ ಕನ್ಫ್ಯೂಶನ್ ಗಳು ಕ್ಲಿಯರ್ ಆಗಬಹುದು

    ReplyDelete
  9. hahaha sir ella chutukugaLu chennagive compensation super!!! hahha

    ReplyDelete
  10. ಮುತ್ನಿನ ಬಗ್ಗೆ ಮುತ್ತಿನಂತಾ ಕವನಾ ಬರೆದಿದ್ದೀರಿ ಸರ್... ನನ್ನಾಕೆ ಓದಿ ನನಗೂ ನತ್ತು ಬೇಕೆಂದು ತುತ್ತು ಅನ್ನ ಕೂಡ ತಿನ್ನದೇ ಕೂತಿದ್ದಾಳೆ, ಏನ್ ಮಾಡ್ಲಿ, ಎಲ್ಲಾ ನೀವೇ ತಂದ ಆಪತ್ತು :)

    ReplyDelete
  11. ಮೊದಲ ಕವನಕ್ಕೆ ಇದ್ದ ಲೆಕ್ಕಾಚಾರ ಕೊನೆ ಚುಟುಕಕ್ಕೆ ಇಲ್ವಾ ಸ್ವಾಮಿ.....
    ಎಲ್ಲವೂ ಚೆನ್ನಾಗಿದೆ.....

    ReplyDelete
  12. ನಗಿಸು- ಧನ್ಯವಾದಗಳು, ನಿಮ್ಮ ಬ್ಲಾಗಿನಲ್ಲಿ ಹೊಸದೇನೂ ಇಲ್ಲವೇ..?

    ReplyDelete
  13. ಪ್ರಭು, ಹುಷಾರಾಗಿರಿ, ಅವರು ಮುತ್ತು ಮತ್ತು ನತ್ತು ಕೇಳಿದರೆ ಯಾವುದಾದ್ರೂ ಒಂದೇ ಒಮ್ಮೆಗೆ ಅನ್ನಿ...ಇಲ್ಲ ಲೆಕ್ಕಾಚಾರ ಎಡವಟ್ಟಾಗಬಹುದು..

    ReplyDelete
  14. ಮೊದಲನೇದಕ್ಕೆ ಎರಡನೇದು ಸಂಬಂಧಿಸಿಲ್ಲ...
    ಲೆಕ್ಕ ಇಟ್ಟು ಮುತ್ತು ನೀಡೋದು ಕೆಲವುಸಲ ಸಾಧ್ಯ ಇಲ್ಲ ಅಲ್ವೇ?
    ಧನ್ಯವಾದ ಪ್ರತಿಕ್ರಿಯೆಗೆ

    ReplyDelete