ಅವ್ವಾ..ಯವ್ವಾ.. ನನ್ನವ್ವಾ
ನಿನ್ನೇ ನೋಡೋಕ್ಬಂದೆ ಯವ್ವಾ
ನೀನ್ ಅಂದ್ರೆ ನಂಗೆ ದೇವ್ರವ್ವಾ
ಹ್ಯಾಂಗಿದ್ದೀಯವ್ವಾ..?? ಮಕ್ಳೂ ಮರಿ
ಇಡೀ ದೇಸದ್ದುಸಾಬರಿ ಕಣೇ ಅವ್ವಾ
ಅದ್ಕೇಯ ನಾಕ್ ವರ್ಸ ಬರಾಕಾಗ್ನಿಲ್ಲ
ಈ ದಪ ನಾನೇ ಯೋಳ್ತೀನಿ, ನಂಗೆ
ಮಿನಿಸ್ಟ್ರ ಕೆಲ್ಸ ಬ್ಯಾಡ ಜನ್ಸೇವೆ ಮಾಡ್ತೀನಿ ಅಂತಾ
ನಮ್ಮೂರು, ನಮ್ಜಿಲ್ಲೆ ಉದ್ದಾರ, ಕಲ್ಯಾಣ
ಎಲ್ಲಾ ಮಾಡುಮಾ ಅಂತ ಇವ್ನಿ
ಈ ದಪ ನಿಮ್ಮೆಲ್ಲಾರ್ ಓಟ್ಕೊಡ್ಸೇ ಯವ್ವಾ
ಆಟು ಮಾಡಿ ನಿನ್ನೀ ಮಗನ್ನ ಅರ್ಸು ಸಾಕು
-----------೦೦೦೦---------
ಅಮ್ಮಾ, ತಾಯಿ, ಮುಕ್ಯ ಮಂತ್ರ್ಯಮ್ಮಾ
ಓದ್ದಪಾ..ಮಳೆನೇ ಇಲ್ಲ.. ಈ ದಪ ಮಳೇನೋ
ಯಾಕೇಳನೇ ಮನೆ ಮಟ ಅಸ ಕರ ಏನೂ..
ನನ್ನಮ್ಮಗ್ಳೇ ಕೊಚ್ಕೊಂಡೋದ್ಲು ಪರ್ವಾದಾಗೆ
ನಾವೋಟ್ ಕೊಟ್ಟೋರ್ ಬರ್ನೇ ಇಲ್ಲ..
ಕೇಳೇ ಯಮ್ಮಾ ನಿನಾದ್ರೂ ನಮ್ಗೋಳು...
----೦೦೦೦೦೦--------
ತಾಯವ್ವ..ಏನ್ಮಾಡನೇ ಯಮ್ಮಾ..??
ಈ ದಪ ನನ್ ಕುರ್ಚಿನೇ ಕೊಚ್ಕೊಂಡೋಯ್ತು
ಗೆಲ್ಸಿದ್ರೇ ನೀವೆಲ್ಲಾ ನಮ್ ಪಾರ್ಟಿನಾ ?..
ಈವಾಗಿರೋ ಸರ್ಕಾರ್ದೋರ್ ಕಣ್ಣಿಟ್ಟವ್ರೆ
ಮನ್ಯಾಗ್ ಸುಮ್ ಕುಂತಿದ್ರೇ ಕ್ಷೇಮ ನಮ್ಗೆ..
ಮುಂದಿನ್ಸಲ ಗೆಲ್ಸಿ ನಮ್ಮನ್ನ ..
ಆವಾಗ ನೋಡುಮಾ ಏನಾದಾದೋ...