Friday, January 20, 2012

ಅಂಗೇ ಒಸಿ ಅನ್ಸಿದ್ದು....


(ಚಿತ್ರ ಆಗಸ್ಟ್ ೨೦೧೦ ;ನಯನ ಸಭಾಂಗಣದ ಮುಂದೆ ತೆಗೆದದ್ದು...)

ಇವ್ರನ್ನ ನೋಡ್ರಿ, ಎಂಗನ್ನಿಸ್ತದೆ
ಕುಡಿಯಾಕ್ ಬರ್ದೋರ್ಗೆ ಪ್ಯಾಲ
ಕೊಟ್ರೆ ಅದರ ತಳದ ಬಟ್ಲಿಗೆ
ಸಾರಾಯಿ ಉಯ್ದಂಗೆ ಅನ್ಸೊಲ್ವಾ?
ಯಾವ ಡೈರೆಕ್ಸನ್ನಾಗ್ನೋಡಿದ್ರೂ
ಯಾವತ್ತಾದ್ದಾರೂ ಬೀಡಿ ಸಿಗ್ರೇಟ್
ಅಚ್ಚಿರ್ತಾರಾ ಇವ್ರು...??
ಬಟ್ರು ಕಂಪೂಟರ್ ಪೆಶಲಿಸ್ಟು
ಡಾಕುಟ್ರು ಕಿವಿ, ಗಂಟ್ಲು ಬಾಯಿಗೆ ಬೆಸ್ಟು...
ಇವ್ರ ಕೈಗೆ ಬೆಂಕಿ ಪೊಟ್ನ ಬೀಡಿ
ನಮ್ ಪರ್ಕಾಸಾ... ಅದೇ ಕಣ್ರೀ ಪಕ್ಕುಮಾಮ
ಕೊಟ್ಟಿದ್ದು ತಮಾಸೆ ನೋಡಾಕೆ, ವೇಸ್ಟು..
ಬಟ್ರು ಒಂದಮ್ಮೂ ಎಳ್ದಿರ್ನಿಲ್ಲ ಕೆಮ್ಮೋ ಕೆಮ್ಮು
ಡಾಕಟ್ರಿಗೆ ಬೀಡಿ ಅತ್ಸಾಕೇ ಆಗ್ನಿಲ್ಲ..
ಔಡ್ ಡೋರ್, ಎಲ್ಲಾರೆದ್ರು, ನಯನ-ಮುಂದೆ
ಎಂಗದಾದು ಅತ್ಸಾಕೆ ಎಂಗಳೆಯರ್ಮುಂದೆ?
ಪುಸ್ಕ ಬಿಡ್ಗಡೆ ಕಾರಿಕ್ರಮ ಒಂಥರಾ ಆದ್ರೆ
ಆಮೇಲೆ ನಡ್ದಿದ್ ಇಂಗೆ...
ಬ್ಲಾಗ್ನಾಗೆ ಮೀಟಾದ್ವಿ,
ನಯನದ್ ಮುಂದೆ ಒಂದಾದ್ವಿ
ಯಾಕೋ ಏನೋ.. ಈ ಬಜ್ಜು, ಎಫ್ಬಿ
ನಮ್ ಬ್ಲಾಗ್ ಬರ್ಹಗಾರ್ಗೆ ತೊಡಕಾಯ್ತಾ ??
ಬರೆಯೋದ್ ಬಿಟ್ರು ಕೆಲವ್ರು, ಬರ್ದರೂ
ಆಕ್ಲೇ ಇಲ್ಲಾ ಬ್ಲಾಗಾಗೆ ಇನ್ಕೆಲವ್ರು
ಬ್ಲಾಗ್ ನಿಮ್ಮ ಖುಷಿ ಅಂಚ್ಕಳ್ಳಾಕೆ
ಸ್ನೇಹಿತ್ರಿಗೆ ಮಾಯಿತಿ ಕೊಡಾಕೆ
ಬರವಣ್ಗೆ ಒಸಿ ಒರೆ ಅಚ್ಕಳ್ಳಾಕೆ
ಎಲ್ಲಾದ್ಕೂ ಎಲ್ಪ್ ಆಗ್ತಿದ್ದೋ.. ಆ ಪೋಸ್ಟ್ಗಳು
ಬಜ್ ಬಂದ್ ಆಯ್ತು, ಎಫ್ಬಿ ನೂ ಕ್ಲೋಸ್ ಆಗ್ಲಿ
ಮತ್ತೆ ಬ್ಲಾಗ್ ಬಳಗ, ಲೇಕ್ನ, ಬರ್ಲಿ... 

24 comments:

 1. hahaha good one!!
  yaare Odlee biDlee naanantu nanna blog na every week update maaDteeni!!
  :-)
  malathi S

  ReplyDelete
 2. ಮಾಲತಿ... ಈ ಬಡವನ ಕಡೆ ದೃಷ್ಟಿ ಬಿದ್ದದ್ದು..ಸಂತೋಷ ಆದ್ರೆ ಅದು ಫೇಸ್ಬುಕ್ ಮೂಲಕ ಅನ್ನೋದೇ ದುಃಖ...ಹಹಹ ಒಟ್ನಲ್ಲಿ ಪ್ರತಿಕ್ರಿಯೆ ಸಿಕ್ತು ಧನ್ಯವಾದ....

  ReplyDelete
 3. ಆರ್ಕುಟ್ ಮಲಗಿ ಬಜ್ಜು ಸತ್ತು ಫೇಸ್ಬುಕ್ ಆತು ಪ್ರಾಣಾ
  ನಮ್ಕೈಗೆಲ್ಲಾ ಬೀಡೀಕೊಟ್ಟು ಯಾಕೀಂಗಾಡ್ತೀರಣ್ಣ ?
  ನಿಮ್ಗೇನ್ಗೊತ್ತು ನಮ್ಮಾ ಕಷ್ಟಾ ಎಳೆದೊತ್ಗೆ ಅರ್ಧ ದಮ್ಮು
  ಉಸ್ರೇ ನಿಂತಂಗಾಗೋಯ್ತಣ್ಣಾ ನಿಲ್ದು ಹಾಳಾದ್ ಕೆಮ್ಮು
  ಏನಾರಾಗ್ಲಿ ಬಿಡಾಕಿಲ್ಲ ಬ್ಲಾಗ್ ಮಿತ್ರರ್ ಸಂಗ
  ನಡಿಲೇಬೇಕು ಸಂದಾಕಿದ್ದ ಮಿತ್ರೋರ್ದ್ ನ್ಯೂ ಪರಸಂಗ !

  ReplyDelete
 4. ಹಹಹಹ ವಿ.ಆರ್.ಬಿ. ಸರ್... ಧನ್ಯವಾದ.. ನನಗೆ ನೀವು ದಮ್ ಎಳಿಯೋವಾಗ ಮುಖ ಮಾಡಿದ್ದು ಈಗ್ಲೂ ನೆನಪಿದೆ... ಎಂಥ ಮಧುರ ಕ್ಷಣಗಳು... ಮತ್ತೊಮ್ಮೆ ಸೇರೋಣ.. ಆ ದಿನ ಬೇಗ ಬರಲಿ ಎಂದೇ ನನ್ನ ಹಾರೈಕೆ...

  ReplyDelete
 5. super sir
  skata photoge sakat kavana
  bhatru, doctoru combination chennagide

  ReplyDelete
 6. sooper kavana....sakkat foto....
  bombaat nenapugalu....

  ReplyDelete
 7. ಜಲನಯನ,
  ನೀವು ಭಾರೀ ಬಲೆಗಾರರು ಕಣ್ರೀ!

  ReplyDelete
 8. ಹ್ಹ ಹ್ಹ :) ಬೀಡಿ ಸೇದಿ ಹೊಗೆಯ ಬಿಡಿ.. ನಿಮ್ಮ ಕವನ ಚೆನ್ನಾಗಿದೆ ಸರ್ :)

  ReplyDelete
 9. ಗುರು ಧನ್ಯವಾದ...ನಿಮ್ಮ ವಧು ಪರೀಕ್ಷೆ ಓದಿದೆ...ಸಕ್ಕತ್ತಾಗಿದೆ...

  ReplyDelete
 10. ಧನ್ಯವಾದ ಮಹೇಶ್...

  ReplyDelete
 11. ಸುನಾಥಣ್ನ ನಿಮ್ಮನ್ನ ಮಿಸ್ ಮಾಡ್ಕೊಂಡ್ವಿ ನಾವು ಆಗ... ನಮ್ಮಲ್ಲಿ ಒಮ್ಮೆ ನೀವೂ ಬೆರೆತ್ರೆ ಚನ್ನಾಗಿರುತ್ತೆ...ಧನ್ಯವಾದ ನಿಮ್ಮ ಅನಿಸಿಕೆಗೆ

  ReplyDelete
 12. ಈಶ್ವರ್ ಸಾರ್... ಭಟ್ಟರಿಗೆ ಈಗ್ಲೂ ಕೆಮ್ಮು ಕಡಿಮೆ ಆಅಗಿಲ್ವಂತೆ...ಹಹಹಹ ಧನ್ಯವಾದ.

  ReplyDelete
 13. ಹ್ಹಹ್ಹಹ್ಹಾ...

  ನಾನಾದ್ರೂ ಬಂದಿದ್ರೆ ಬೀಡಿ ಬೆಂಕಿ ಪೊಟ್ನ ಕಸ್ಕೊತಿದ್ದೆ!

  ದೊರೆ, ಫೇಸ್ ಬುಕ್ಕು ಮತ್ತು ಇನ್ನಿತರೇ ಸಾಮಾಜಿಕ ತಾಣಗಳು ಬರಹಗಾರರ ದಿಶೆ ತಪ್ಪಿಸುತ್ತಿವೆ ಅಂತ ಸರಳವಾಗಿ ನಿರೂಪಿಸಿದ್ದೀರಾ.

  ReplyDelete
 14. hahaaaahaaaa :) super photo jote kavana

  ReplyDelete
 15. ಬದರಿ ಧನ್ಯವಾದ... ಬೀಡಿ ಬೆಂಕಿ ಪೊಟ್ನ...ಈಸ್ಕೋತಿದ್ರಾ ಕಸ್ಕೋತಿದ್ರಾ?? ಹಹಹ

  ReplyDelete
 16. ಮಂಜು ಧನ್ಯವಾದ....

  ReplyDelete
 17. ವಾಣಿಶ್ರೀ.. ನೀವು ಮಿಸ್ ಆದ್ರಿ ಆ ದಿನ...ಬಹಳ ಬ್ಲಾಗಿಗಳು ಬಂದಿದ್ರು....

  ReplyDelete
 18. ಮಜವಾಗಿದೆ ಸರ್
  Swarna

  ReplyDelete
 19. ಸ್ವರ್ಣ, ನಿಮ್ಮ ಪ್ರತಿಕ್ರಿಯೆ ಮತ್ತು ನನ್ನ ಬ್ಲಾಗ್ ಪ್ರವೇಶಕ್ಕೆ ಸ್ವಾಗತ..ಧನ್ಯವಾದ...

  ReplyDelete
 20. chennagide... haudu bariyodilla andru ...ododo bidudilla

  ReplyDelete
 21. ಆಶಾವ್ರೇ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ...

  ReplyDelete
 22. Ajad sir...hahaha...chennagide....nanu idde alli...

  ReplyDelete