ಆಗಿದ್ದರೆ ಭೇಟಿ
ಆಗಿದ್ದರೆ ಒಂದುವೇಳೆ ಭೇಟಿ
ನಮಗಿರುತಿರಲಿಲ್ಲ ಸಾಟಿ
ಲೈಲಾ ಮಜನೂ ಸಲೀಂ ಅನಾರ್
ಪ್ರೇಮಪುಸ್ತಕ ಸೇರ್ತಿದ್ವು ಗಟಾರ್
ಲವ್ ಸ್ಟೋರಿ
ವೈನಾಗಿದ್ದ ನಮ್ಮ ಲವ್ ಸ್ಟೋರೀಲಿ
ಅಗ್ಬಾರ್ದಿತ್ತು ಖಳನಾಯಕ ನಿಮ್ಮಪ್ಪ
ಮೀಟಾಗ್ತಿರ್ಲಿಲ್ಲ ಹೀಗೆ ಬೇರೆ-ಬೇರೆ ದಾರೀಲಿ
ಆಗ್ತಿದ್ದೆ ಅಮ್ಮನ್ಗೆ ಸೊಸೆ ಮಾವ ನಮ್ಮಪ್ಪ
ಮಿಲ್ಟ್ರಿ-ಚೌಲ್ಟ್ರಿ
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ
ಸೂರ್ಯ ಗ್ರಹಣ
ಗುಂಡ ಹೋದ ಇಂಟರ್ ವ್ಯೂಹಕ್ಕೆ
ಬಿದ್ದ ಪುಂಖಾನುಪುಂಖ ಪ್ರಶ್ನೆ ಜಾಲಕ್ಕೆ
ಕೇಳಿದ್ರು, ಧರತಿ-ಸೂರ್ಯನ ಮಧ್ಯೆ
ಚಂದ್ರ ಬಂದರೆ ಏನಾಗುತ್ತೆ ಗುಂಡ..?
ಥಟ್ ಅಂತ ಕೊಟ್ಟ ಉತ್ರ ಗುಂಡ
ಆಗೋದೇನು..? ಚಂದ್ರನ್ನ ಧರತಿ
ಮದ್ವೆ ಆಗ್ತಾಳೆ, ಸೂರ್ಯಂಗೆ
ಗ್ರಹಣ ವಕ್ರಸ್ತೈತೆ....
ಆಜಾದ್,
ReplyDeleteಚುಟುಕು ಕವನಗಳು ಸೂಪರ್. ಅದರಲ್ಲೂ ಚಂದ್ರನ್ನ ಧರಿತಿ ಮದುವೆಯಾಗುವ ಕಲ್ಪನೆ ತುಂಬಾ ಚೆನ್ನಾಗಿದೆ...
ಚುಟುಕುಗಳು ಚೆನ್ನಾಗಿವೆ. ಮಿಲ್ಟ್ರಿ-ಚೌಲ್ಟ್ರಿ ತು೦ಬಾ ಇಷ್ಟವಾಯಿತು. ಬರಲಿ ಇನ್ನಷ್ಟು...
ReplyDeleteಜಲನಯನರ ಹನಿಗವನ
ReplyDeleteಓದುಗರಿಗೆ honey-ದವನ!
ಆಜಾದ್ ಸರ್,
ReplyDeleteಎಲ್ಲಾ ಚುಟುಕುಗಳೂ ಸೂಪರ್, ನಿಮ್ಮ ಕಲ್ಪನೆಗೆ ಸಾಟಿಯಿಲ್ಲ.....
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ
ಈ ಸಾಲುಗಳಂತೂ ನಗು ತರಿಸಿತು......
ಶಿವು, ಮೊದಲ ನಮನ, ಯಾಕಂದ್ರೆ ಇದು ಮೊದಲ ಪ್ರತಿಕ್ರಿಯೆ...ಗ್ರಹಣ ಸೂರ್ಯಂಗೇ ಅಲ್ಲವೇ..? ಧನ್ಯವಾದ
ReplyDeleteಸೀತಾರಾಂ ಸರ್, ಮಿಲ್ಟ್ರಿಗೆ ಹೋಗ್ಬೇಕಾದವನು ಚೌಲ್ಟ್ರೀಲಿ ಕಾಣಿಸ್ಕೊಂಡ...ಅಲ್ಲವಾ? ಧನ್ಯವಾದ
ReplyDeleteಸುನಾಥ ಸರ್, ಧನ್ಯ..ನಿಮ್ಮ ಮಾತು..ಟಾನಿಕ್ಕು
ReplyDeleteನಮಗೆಲ್ಲಾ ಕೊಡುವುದು ಬರವಣಿಗೆಗೆ ಕಿಕ್ಕು....ಹಹಹ
ದಿನಕರ್ ನಿಮ್ಮ ಪ್ರತಿಕ್ರಿಯೆಗೆ ನನ್ನಿ, ಸೀತಾರಂ ಅವ್ರಿಗೂ ಈ ಚುಟುಕ ಇಷ್ಟವಾಯ್ತಂತೆ...
ReplyDeletesuper sir....
ReplyDeletemathashtu barali....
ಮಹೇಶಣ್ಣ...
ReplyDeleteದನ್ಯವಾದಾನಣ್ಣ...ಗುಂಡನ್ಗೆ ನಿಮ್ಮ ಸುಬಾಸಯ ತಿಳ್ಸಿಬುಡ್ತೀನಿ...ಬುಡಿ...ಅಂಗೇಯಾ...
ಸೂಪರ್ ಸರ್
ReplyDeleteಚೆನ್ನಾಗಿದೆ ಚುಟುಕುಗಳು
Thank Guru..for your encouragement.
ReplyDeletehaha enta chutukugaLu, nannge ondu anumaana neevu officenalli kelasa maadteero ilvo anta (heege kelokke aa nimma gunda helida haha)
ReplyDeleteಮನಸುಮೇಡಂ...ನಾನು ಆಫೀಸಿನಲ್ಲಿ ಕೆಲ್ಸ ಮಾಡೊಲ್ಲ..ಲ್ಯಾಬ್ ನಲ್ಲಿ ಕೆಲ್ಸ...ಅಫೀಸಿನಲ್ಲಿ..ಬರೀ ರಿಪೋರ್ಟ್ ಅದು-ಇದು...
ReplyDeleteನಾನು ಈ ರೀತಿ ಬರೆಯೋದು ಇಷ್ಟ ಇಲ್ಲವಾ ..? ನೇರವಾಗಿ ಹೇಳಿಬಿಡಿ...ಬೇರೆ ತರಹ ಬರೀತೀನಿ..ಗುಂಡಂಗೆ ಮಾತ್ರ ಹೇಳ್ಬೇಡಿ..ಅವ್ನು ಅಂದ್ರೆ ಹೆದ್ರಿಕೆ ನನಗೆ....ಎಡ್ವಟ್ ಮಾಡ್ಬಿಡ್ತಾನೆ..ಹಹಹ.........ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ...
ista aithu sir :) heege bareyiri :)
ReplyDeleteಮಂಜುಶ್ವೇತೆಗೆ ಧನ್ಯವಾದ...ನಿಮ್ಮ ಪ್ರೋತ್ಸಾಹವಿದ್ದರೆ ಖಂಡಿತ ಮುಂದೂ ಬನ್ನಿ...
ReplyDelete