Wednesday, January 20, 2010

ಎರಡು ಕವನಗಳು - ಚಿಂತನೆಗೆ

ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ..?
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ,
ಮಾನವತೆಯನೇ ಮರೆತರು

20 comments:

  1. ಚೆನ್ನಾಗಿದೆ ಕವನ ಭೈಯ್ಯ ..
    ಪ್ರಳಯ ಅಂತ ಯಾವಾಗಲು ಹೇಳ್ತಾನೆ ಇರ್ತಾರೆ ಯಾವಾಗ ಆಗತ್ತೋ ಗೊತ್ತಿಲ್ಲ
    ಅನ್ನ ನೀರು -ಸೂರು ಇಲ್ದೆ ಇರೋರ್ಗೆ ಪ್ರಳಯನು ಒಂದೇ ಸುವರ್ಣ ಯುಗನು ಒಂದೇ ಅಲ್ವಾ ?

    ReplyDelete
  2. nimma kavanada vichaara chennagite, haridu barali intaha lahari!

    ReplyDelete
  3. ಅಜಾದ್ ಸರ್,
    ಮನೆಮಂದಿಯೆಲ್ಲಾ ಕೊಚ್ಚಿಹೋದರೆ
    ತೋರದೇ ಒಂದೂ ಉಪಾಯ
    ಅಳಿಸಿ ಹೋದರೆ ಮನೆತನದ ಹೆಸರೇ
    ಅದೇ ಅಲ್ಲವೇ ಅವರಿಗೆ ಪ್ರಳಯ..?
    ಸೂಪರ್ ಸಾಲುಗಳು ಸರ್..... ಎರಡೂ ಕವನ ಚೆನ್ನಾಗಿವೆ .......

    ReplyDelete
  4. ಪ್ರಳಯಾ೦ತಕರು ನಡೆಸಿರುವ ರಾಜಕೀಯ ಪ್ರಳಯ- ಮಾನವತೆ, ಸತ್ಯ, ಧರ್ಮ, ನ್ಯಾಯ, ನಿಷ್ಠೇ, ಮಾನ, ಮರ್ಯದೆ ಇತ್ಯದಿ ಗುಣಗಳನ್ನು ತಿ೦ದು ವೈಚಾರಿಕತೆಯೆ ನೆಲೆಗಟ್ಟೇ ನಾಶವಾಗುತ್ತಿರುವಾಗ, ಒ೦ದೊ೦ದರ೦ತೆ ನಾಶವಾಗುವ ಬೌತಿಕ ದೇಹ, ಕಾಲ ಕಾಲಕ್ಕೆ ಬದಲಾಗುವ ಭೌಗೋಳಿಕತೆ -ಪ್ರಳಯದ ಹೆಸರಲ್ಲಿ ಒಮ್ಮೇಲೆ ನಾಶವಾದರೇ ತೊ೦ದರೆಯೇನಿಲ್ಲ ಬಿಡಿ.

    ReplyDelete
  5. ಚಿಂತನೆಗೆ ತೊಡಗಿಸುವ ಕವನಗಳು.

    ReplyDelete
  6. ಅಜಾದ್ ಸರ್,

    ಪ್ರಳಯದ ಬಗ್ಗೆ ಬರೆದ ಕವನ ನನಗೆ ತುಂಬಾ ಇಷ್ಟವಾಯಿತು. ಅದರಲ್ಲಿ ನೀವು ಬಳಸಿರುವ ಪದಗಳು ಚೆನ್ನಾಗಿದ್ದು ತುಂಬಾ ಅರ್ಥ ಕೊಡುತ್ತಿವೆ...
    ಧನ್ಯವಾದಗಳು.

    ReplyDelete
  7. ರಂಜು ಇಲ್ಲೂ ನಂಬರ್ ಒನ್ ಆಗಿಬಿಟ್ಟೆಯಲ್ಲಾ.. ಬಹಳ ಅಭಿನಂದನೆಗಳು...
    ಮತ್ತೆ..ನಿನ್ನ ಬ್ಲಾಗ್ ಯಾಕೋ ಬಣಗುಡ್ತಾಇದೆ.....ಹೌದು ನಮ್ಮವರು ಯಾವಾಗ ಕಲಿಯೋದು...

    ReplyDelete
  8. ದಿನಕರ್ ಹೌದಲ್ಲವೇ..? ಪ್ರಳಯ ನಾವು ಜಗತ್ತಿನ ಪರಿಧಿಯಲ್ಲಿ ಯಾಕೆ ವಿಶ್ಲೇಷಿಸಬೇಕು...ನಮ್ಮದೆಲ್ಲವೂ ನಾಶವಾದರೆ ನಮಗೆ ಅದೇ ಅಲ್ಲವೇ ಪ್ರಳಯ...ಇದನ್ನು ಅರಿತರೆ ಒಬ್ಬ ಮತ್ತೊಬ್ಬನ ಕೇಡು ಬಗೆಯುವುದು, ಕೊಲ್ಲುವುದು, ಕೊಲ್ಲಿಸುವುದು...ಎಲ್ಲಾ ಎಲ್ಲಿರುತ್ತವೆ? ಅಲ್ಲವೇ

    ReplyDelete
  9. ಬಾಲು, ಕವನದ ಸಾಲುಗಳು ಮನದೊಳಗೆ ಕಾವಿಟ್ಟಭಾವಗಳು ಅವುಗಳ ಹೊರ ಹೊಮ್ಮುವಿಕೆಗೆ ನೆಪ ಬೇಕು ಅಷ್ಟೇ...ಅಂತಹ ನೆಪ ಪ್ರವಾಹ ಪೀಡಿತರ ಬಗ್ಗೆ ಕೇಳಿ ಆದದ್ದು ಒಂದುಭಾಗವಾದರೆ ನಮ್ಮ ನಾಯಕರ ದುರ್ವರ್ತನೆ ನೋಡಿ ಮೂರು ಭಾಗ.

    ReplyDelete
  10. ಸೀತಾರಾಂ ಸರ್, ನಿಜ ಮೌಲ್ಯ ಕಳೆದುಕೊಂಡಿರುವ ರಾಜಕಾರಣ ಮಾನವತೆಯನ್ನು ಯಾವತ್ತೋ ಗಾಳಿಗೆ ತೂರಿ ಆಯ್ತು. ಇವರ ನೆಚ್ಚಿ ಕುಂತರೆ...ಕಲ್ಲಿನ ಕೋಳಿ ಕೂಗುತ್ತೆ..ಹಹಹ

    ReplyDelete
  11. ಸುನಾಥ್ ಸರ್, ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  12. ಶಿವು, ನಿಮ್ಮ ಮಾತಿಗೆ ನನ್ನ ಅನುಮೋದನೆ. ಪ್ರಳಯದಲ್ಲಿ ಪ್ರಣಯ ತೋರುವ ಜನ ನಮ್ಮ ರಾಜಕಾರಣಿಗಳು... ಅಲ್ಲವೇ?

    ReplyDelete
  13. ಅಜಾದ್ ಅವರೇ...
    ಊರ್ ಮೇಲೆ ಊರ್ ಬಿದ್ರು ಏನಂತೆ.. ನಮ್ಮ ಜೇಬು ತುಂಬುತ್ತದೆಯೆಲ್ಲ... ನಮ್ಮನ್ನು ಅಳುವ ಸರಕಾರದ ಮಾತು...(ಯಾರ ಬಂದ್ರು ಒಂದೇ ಹಣೆಬರಹ)....ಅಲ್ವ...?
    ನಾಳೆಯ ಚಿಂತೆ ಬಿಟ್ಟು ನಡೆದರೆ ಇಂದು ನೆಮ್ಮದಿಯಿಂದ ಇರಬಹುದು....
    ನಿಮ್ಮವ,
    ರಾಘು.

    ReplyDelete
  14. ಎರಡೂ‌ ಚೆನ್ನಾಗಿವೆ, ಅಜಾದ್ ಸರ್

    ReplyDelete
  15. chennagide sir eradu kavanagalu....
    last line super sir :)

    ReplyDelete
  16. ರಾಘು, ಚಿಂತೆ ಮಾಡದಿದ್ದವನಿಗೆ ಸಂತೆಯ ಜನಜಂಗುಳಿ ಗಲಾಟೆಯಲ್ಲೂ ಸುಖನಿದ್ರೆ ಬರುತ್ತದಂತೆ...ಹಹಹ..ಇನ್ನು ರಾಜಕಾರಣಿ ಬಿಡಿ ಎಲ್ಲರ ನಿದ್ರೆ ಕೆಡಿಸಲೇ ಹುಟ್ಟಿರುವುದು...

    ReplyDelete
  17. ಮಂಜುಶ್ವೇತೆ (ಸ್ನೋ ವೈಟ್) ನಿಮ್ಮ ಪರಿಚಯ ಕೊಡೀಪಾ...ಹೀಗೇ ಎಷ್ಟು ದಿನ..ಅಪರಿಚಿತರಂತೆ...?? ನಿಮ್ಮ ಪ್ರತಿಕ್ರಿಯೆಗೆ ನಮನ...
    ನನ್ನ ಮೈಲ್ ಐಡಿ. azadis@hotmail.com

    ReplyDelete
  18. ಆನಂದ್, ನಿಮ್ಮ ತಪ್ಪದೇ ಬರುವ ಪ್ರತಿಕ್ರಿಯೆಗೆ ನಾನು ಋಣಿ, ನಮ್ಮ ಒಡೆದು ಆಳುವ ರಾಜಕಾರಣಿ ಎಲ್ಲ ಸಮಯದಲ್ಲೂ ಸುಖಿ ಅಲ್ಲವೇ...? ಧನ್ಯವಾದ ಪ್ರತಿಕ್ರಿಯೆಗೆ.

    ReplyDelete
  19. 'ಜಲನಯನ' ಅವರೇ..,

    ''ಪ್ರಳಯ''ದ ಬಗ್ಗೆ ಬರೆದಿರೋದು ಅಧ್ಬುತವಾಗಿದೆ..

    ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

    ReplyDelete
  20. ಮನಸಿನ ಮನೆಯೊಡೆಯನೇ..ನಿಮ್ಮ ಹೆಸರು ತಿಳ್ಸಿಪಾ...ಧನ್ಯವಾದ ನಿಮ್ಮ ಭೇಟಿಗೆ..ಮತ್ತು ಪ್ರತಿಕ್ರಿಯೆಗೆ.

    ReplyDelete