Friday, April 3, 2009

(ಅ)ರಾಜಕಾರಣಿ

ರಾಜಕಾರಣಿ.. ರಾಜಕಾರಣಿ ಓಟು ಬೇಕೆ..?
ಓಟು ಕೊಂಡು ನಮ್ಮ-ನಮ್ಮೊಳಗೇ ತಂದಿಡಬೇಕೆ..?

ರಾಜಕಾರಣಿ ಓಟು ಕೊಂಡು ಏನು ಮಾಡುವೆ ?
ಕುರ್ಚಿಗಂಟಿ ರಕ್ತಹೀರಿ ಸ್ವಿಸ್ಸುಬ್ಯಾಂಕಿನಲ್ಲಿ ಕೋಟಿಮಾಡುವೆ

ರಾಜಕಾರಣಿ ಕುರ್ಚಿ ಸಿಗದೆ ಹೋದರೆ ಏನು ಮಾಡುವೆ..?
ಅನ್ನವಿಟ್ಟ ತಟ್ಟೆಯಲ್ಲಿ holeಉ ಮಾಡುವೆ

ರಾಜಕಾರಣಿ ನಿನ್ನನೆಚ್ಚಿ ಓಟುಕೊಟ್ಟರೆ
ಬಡವ ತನ್ನ ಒಳಿತಿಗಾಗಿ ಧಣಿಯ ನೆಚ್ಚಿಕುಂತರೆ
ರೈತ ತನ್ನ ಸಾಲ ಹೊರೆಯ ಹೊತ್ತು ಕುಂತರೆ
ಸ್ಕೂಲು ಮಕ್ಕಳೆಲ್ಲ ಓದಲು ಕತ್ತಲು ಕಳೆವುದೆಂದುಕೊಂಡರೆ
ಹೆಮ್ಮಕ್ಕಳು ತಮಗೂ ಮೀಸಲಾತಿ ಅರಸಿ ನೆಡೆದಿರೆ
ಹೇಳು ಎಲ್ಲರಾಸೆ ನೆರವೇರಲು ಏನು ಮಾಡುವೆ..?

ನನ್ನ ಮಗ, ಅಳಿಯ, ಹೆಂಡ್ತಿಗಾಗಿ ಒಂದೊಂದು ಛೇರು
ಸ್ವಿಸ್ಸ್ ನಲ್ಲಿ ಜಮಾವಣೆ, ಬಂಗ್ಲೆ ಬಂಡಿ ಜಮೀನು ಚೂರು
ನಮ್ಮವರೆಲ್ಲರ ಹೆಸರಲ್ಲೊಂದು ನೂರೋ ಇನ್ನೂರೋ ಶೇರು
ಆದಮೇಲೆ...ನನ್ನವರಿಗೆ ನೌಕರಿ, ನನ್ನ ಜಾತಿಯವರ ಚಾಕರಿ
ಅಧಿಕಾರಿಗಳಿಗೆ ಬಢೋತರಿ, ಪುಢಾರಿಗಳಿಗೆ ಛೋಕರಿ...
ಹೀಗೆಲ್ಲ ಪಟ್ಟಿರುವೆ ಈ ಐದು ವರ್ಷದಲ್ಲಿ ಎಷ್ಟೊಂದು ಬವಣೆ
ಓಟುಕೊಟ್ಟವನ ನೆನಪಾಗುವುದರಲ್ಲಿ ಬಂದೇ ಬಿಡ್ತು ಚುನಾವಣೆ

ಅದಕ್ಕೆ ಈಗ ಬಂದಿರುವೆ ನಿಮ್ಮೆಲ್ಲರ ಮುಂದೆ
ಬಾಕಿ ಇರುವ ಕೆಲಸವನ್ನು ಪೂರೈಸೋಣವೆಂದೇ
ಅಮ್ಮ, ಅಪ್ಪ, ಅಕ್ಕ ಆಣ್ಣಗಳಿರಾ ಕೊಡಿ ನಿಮ್ಮ ಅಮೂಲ್ಯ ಓಟು
ಈ ಬಾರಿ ಪೂರೈಸುವೆ ಆಶ್ವಾಸನೆ, ತರುವೆ ನಿಮ್ಮ ಮನೆಗೆ ಲೈಟು.

ಆಶ್ವಾಸನೆಗಳ ಶ್ವಾನವಿದು,
ನಾಯಿಹೆಸರಿಗೆ ಅಪಚಾರವಿದು,
ಅದು ಅನ್ನ ತಿಂದು ಮನೆಕಾಯ್ವದು
ಇದು ತಿಂದ ಮನೆಗೇ ಕನ್ನ ಕೊರೆವುದು.



6 comments:

  1. ha ha ha ha ee rajakeeyada ellapariyannu moodisideeri

    olle saalugaLu

    ReplyDelete
  2. ಏನ್ ಸರ್ ಚುನಾವಣೆ ಹತ್ತಿರ ಬರುತ್ತಿದೆ ಅಂತ ಈ ತರನ ರಾಜಕಾರಣಿಗಳ ಬಗ್ಗೆ ಹೇಳೋದು:-)

    ಅಭಿನಂದನೆಗಳು..

    ಸತ್ಯ ಹೇಳಿದಕ್ಕೆ ...

    ReplyDelete
  3. ಮನಸು ಅವರೇ,
    ಇದು ನನ್ನದಲ್ಲ ರೋಸಿಹೋದ ಸಾಮಾನ್ಯ ಮತದಾರ...ಅಲ್ಲಲ್ಲ...ತನ್ನ ಆಶೋತ್ತರಗಳನ್ನು ಈಡೇರಿಸುವರೆಂದು ಈ ಪುಢಾರಿಗಳನ್ನು ನಂಬಿ ಕೂತ ಜನಸಾಮಾನ್ಯನ "ಮನಸು" ಹೇಳುವ ಮಾತು.

    ReplyDelete
  4. ಜ್ಞಾನ
    ಇದು ನನ್ನ ಜ್ಞಾನ, ನಿಮಗೆ ಅಲ್ಲಿದ್ದೇ ಹೆಚ್ಚು ತಿಳಿದಿದೆ ನಮ್ಮವರ (ಬಡ ಮತದಾರನ..ಸಾಮಾನ್ಯ ಜನದ) ಅಜ್ಞಾನ.
    ನೋಡ್ತೀರಲ್ಲ ದಿನನಿತ್ಯ...ಬರೀ ಕುರ್ಚಿ ಆಸೆ ಈ ಮಂಗಗಳಿಗೆ..ಇಲ್ಲ ಅಂದ್ರೆ..ಸಿದ್ಧಾಂತ..ಜನಸೇವೆ ಬರೀ ಸೋಗು...ಅಲ್ಲವೇ..??

    ReplyDelete
  5. ಲೋಕಸಭೆ ಚುನಾವಣೆಗೆ ರಾಜಕಾರಣಿಗಳ ನೆನಪಾಗಿದ್ದರಲ್ಲಿ ಸಂಶಯವಿಲ್ಲ, ಆಗಲೇ ಅಲ್ವೆ ಅವರು ಓಟು ಅಂತ ಓಟಕ್ಕಿಳಿಯೊದು, ಕವನ ಚೆನ್ನಾಗಿತ್ತು

    ReplyDelete
  6. Dear Prabhu..
    Really we feel sorry for the gen public...they cast their vote to get looted...why not they think and vote..? yea..its a hard choice..between the worse and the worst...
    thanks for repsonse

    ReplyDelete