ಹೀಗೂ ಒಂದು ಪ್ರೇಮ-ಕಥೆ
ಬಂದು ನಿಂದವಳು ಮನದಲ್ಲಿ
ಅಂದು ಕೊಂದವಳು ಕಣ್ಣಲ್ಲಿ
ಹುಬ್ಬ ಬಿಲ್ಲಿನೆದೆಗೆ
ನೋಟ, ಬಾಣವು ಗುರಿಗೆ
ಕಾಡಿ ಆಡಿಸಿ ನಾಟಿತ್ತು
ಮನದ ಬೇಗೆಯ ಕದಡಿತ್ತು
ಮಂದಸ್ಮಿತೆ..ಆಳ ಕುಳಿಗೆನ್ನೆ
ಕೆಂದುಟಿ ಮನೋಹರಿ ಮನದನ್ನೆ
ಕಣ್ಣು-ಕಣ್ಣು ಹಲವೊಮ್ಮೆ ಕೂಡಿದ್ದವು
ತುಟಿಬಿಚ್ಚದೇ ಮಾತನಾಡಿದ್ದವು
ನಾವಾಗಲಿಲ್ಲ ರೋಮಿಯೋ-ಜೂಲಿಯಟ್ಟು
ಆಗಲಿಲ್ಲ ಲೈಲಾ-ಮಜನೂ, ತಲೆಕೆಟ್ಟು
ಕಳೆದಿವೆ ವಸಂತಗಳು ಮುವತ್ತು
ನಡೆದಿದೆ ನಂನಮ್ಮ ಸಂಸಾರದ ಕಸರತ್ತು
ಈಗಲೂ ಯಾವಾಗಲಾದರೂ ಅಪರೂಪಕ್ಕೆ
ಅವಳ-ನಾನು, ನನ್ನ-ಅವಳು ಕಂಡರೆ
ತನ್ನಷ್ಟಕ್ಕೆ ಮೂಡುವುದು ಕಣ್ಣುಗಳಲಿ
ಕಾತುರತೆ-ಹೊಳಪು
ನಿಷ್ಕಲ್ಮಷ ಮನಗಳಲಿ
ಕಾಣುವುದು ಹೊಸ ಹುರುಪು
ತಿಳಿದಿತ್ತು ಅಂದೂ -ಇದು ನನಸಾಗದ ಕನಸೆಂದು
ಕನಸಕಾಣಲು ಯಾವ ಕಟ್ಟುಪಾಡುಗಳೂ ಇಲ್ಲವೆಂದು
ಮುದನೀಡುವ ನೆನಪುಗಳು, ಕನಸಕಾಣುವ ಮನಸುಗಳು
ಆಗ ಬೇಕಿಲ್ಲ ಎಲ್ಲರ ಕಾಡುವ ವ್ಯಥೆಗಳು
ನಮಗೆ ತಿಳಿದಿದೆ ..ನಿಮಗೂ ತಿಳಿದಿರಲಿ
ಹೀಗೂ ಹುಟ್ಟಬಹುದು ಪ್ರೇಮ ಕಥೆಗಳು.
chenagide sir kavana
ReplyDelete"ತಿಳಿದಿತ್ತು ಅಂದೂ -ಇದು ನನಸಾಗದ ಕನಸೆಂದು" ಈ ಸಾಲು ಮನಕ್ಕೆ ಬಹಳ ಹಿಡಿಸಿತು... ತಿಳಿದೂ ತಿಳಿದೂ ಕನಸು ಕಾಣುತ್ತೇವೆ ನನಸಾಗದಿದ್ದರೂ ಸರಿಯೆಂದು.. ನನಸಾದರೆ ಹಗಲುಗನಸಿಗೆ ಅರ್ಥವಿಲ್ಲವಲ್ಲ ಹಾಗೆ... ಹರೆಯದ ಹುಚ್ಚು ಕನಸುಗಳೇ ಹಾಗೆ... ಹೀಗೆ ಬರೆಯುತ್ತಿರಿ...
ReplyDeleteಕನಸಕಾಣಲು ಯಾವ ಕಟ್ಟುಪಾಡುಗಳೂ ಇಲ್ಲವೆಂದು
ReplyDeleteಮುದನೀಡುವ ನೆನಪುಗಳು, ಕನಸಕಾಣುವ ಮನಸುಗಳು
ii Salugalu tumba idisidavu...
ಜ್ಞಾನ,
ReplyDeleteನನ್ನೊಡನೆ ಭಾವನೆಗಳ ಹಂಚಿಕೆಗೆ ಧನ್ಯವಾದಗಳು,
ನಮ್ಮಲ್ಲಿ, ನನಸಾಗುವ ಕನಸುಗಳು ಸಾವಿರಕ್ಕೆ ಒಂದೋ ಎರಡೋ ಅಲ್ಲವೇ..?
Thanks for responding...
ಮನಸಿನ ಮೂಲಕ
ReplyDeleteನಿಮ್ಮೆಲ್ಲರ ಪರಿಚಯವಾಗುತ್ತಿದೆ, ಧನ್ಯವಾದಗಳು,ಪ್ರಭು, ಜ್ಞಾನ, ಮತ್ತೆಲ್ಲರಿಗೂ
ಇಲ್ಲಿ ಒಂದು ಕನ್ನಡದ ಗೀತೇನ ಹೀಗಂದ್ರೆ ಹೇಗೆ...
ಬ್ಲಾಗೋಣ ನಾವು ನೀವು
ಎಲ್ಲಾ ಭಾಷೆ ಬ್ಲಾಗೇನು..?
ನೋಡಿ ನಮ್ಮ ಬ್ಲಾಗಿನಂದ
ಚಂದಾ ಮಾಮ ಬ್ಲಾಗಿಬಂದ...
.............ಹಹಹ
ನಮಸ್ತೆ ಸರ್,
ReplyDeleteಬರಹ ಬ್ಲಾಗನಲ್ಲಿ ಚಂದ
ನೀವು ಬರೆದರೆ ನಮಗೆಲ್ಲ ಆನಂದ
ಭಾಷೆ ಎಲ್ಲ ಯಾಕಣ್ಣ .....?
ನೀವು ಬರೆದರೆ ನಮಗೆ ಅದುವೇ ಸಾಕಣ್ಣ ...
ಜ್ಞಾನ
ReplyDeletethanks for your words...lets not be formal..
ಇಂಗ್ಲೀಷರ ಸರ್ ಗಿರ್ ಎಲ್ಲ ಬೇಡ..
ನೇರ ಜಾಲ-ಸಂಭಾಷಣೆ..ಇರಲಿ, ಧನ್ಯವಾದಗಳು..