ಜೊತೆ-ಜೊತೆ
ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ
ಗೆಣೆಯರ ಮಧ್ಯೆ
ಗೇಣೂ ಇಲ್ಲದ್ದು,
ಒಮ್ಮೆಗೇ ಹೀಗಾಯಿತೇಕೆ?
ಗೋಣು ಮುರಿದಂತೆ
ಗೋಳಾಡಿಸಿದ್ದು
ಎಲ್ಲದಕು ಅವನು
ಸಲ್ಲುವನು ಬಿಡನು
ಮೆಲ್ಲಮೆಲ್ಲಗೆ ಏಕೆ
ನಿಲ್ಲುವನು ದೂರ?
ಕಣ್ಣಂಚಿನ ಮಿಂಚನು
ಬೆಂಚಂಚಿನ ಸಂಚನು
ಇಂಚಿಂಚು ಅರಿತವನು
ಸಂಚಿಗೇಕೆ ಬಲಿಯಾದನು?
ಅವನ ಬಾಲ್ಯ ಜೊತೆ-ಜೊತೆ
ಕೌಮಾರ್ಯ ಜೊತೆ-ಜೊತೆ
ಶಾಲೆಯುದ್ದಕ್ಕೂ ಜೊತೆ
ಕಾಲೇಜಿನ ಕೀಟಲೆಗೂ ಜೊತೆ
ಬಾಳ ಬವಣೆಯಲೂ ಜೊತೆ
ಅಪಾರ್ಥವ ಅರ್ಥೈಸಿ ಸರಿಮಾಡಿ
ಮತ್ತೆ ಆಗಿ ಬಿಟ್ಟೆವು ಜೊತೆ-ಜೊತೆ
ಮನಸು ಮುದುಡಿದೆ
ಮನವ ಕಲಕಿದೆ
ಮನಮೆಚ್ಚಿದವ
ಮನಚುಚ್ಚಿದರೆ
ಗೆಣೆಯರ ಮಧ್ಯೆ
ಗೇಣೂ ಇಲ್ಲದ್ದು,
ಒಮ್ಮೆಗೇ ಹೀಗಾಯಿತೇಕೆ?
ಗೋಣು ಮುರಿದಂತೆ
ಗೋಳಾಡಿಸಿದ್ದು
ಎಲ್ಲದಕು ಅವನು
ಸಲ್ಲುವನು ಬಿಡನು
ಮೆಲ್ಲಮೆಲ್ಲಗೆ ಏಕೆ
ನಿಲ್ಲುವನು ದೂರ?
ಕಣ್ಣಂಚಿನ ಮಿಂಚನು
ಬೆಂಚಂಚಿನ ಸಂಚನು
ಇಂಚಿಂಚು ಅರಿತವನು
ಸಂಚಿಗೇಕೆ ಬಲಿಯಾದನು?
ಅವನ ಬಾಲ್ಯ ಜೊತೆ-ಜೊತೆ
ಕೌಮಾರ್ಯ ಜೊತೆ-ಜೊತೆ
ಶಾಲೆಯುದ್ದಕ್ಕೂ ಜೊತೆ
ಕಾಲೇಜಿನ ಕೀಟಲೆಗೂ ಜೊತೆ
ಬಾಳ ಬವಣೆಯಲೂ ಜೊತೆ
ಅಪಾರ್ಥವ ಅರ್ಥೈಸಿ ಸರಿಮಾಡಿ
ಮತ್ತೆ ಆಗಿ ಬಿಟ್ಟೆವು ಜೊತೆ-ಜೊತೆ
chennagide sir kavana...nimma jote nimma manasu ellavu jote jote..
ReplyDeleteಮೃದು ಮನಸು ಮೇಡಂ,
ReplyDeleteನಿಜ- ಸ್ನೇಹದಲ್ಲಿ ಸ್ವಲ್ಪ ಅಸಹಜತೆ ಸ್ವಲ್ಪ ವಿರಸ ಬಂದರೆ ಎಲ್ಲ್ವೂ ನೀರಸವೆನಿಸುತ್ತದೆ..ಈಗಲೂ..!!
ಅದು ಬಾಲ್ಯಕ್ಕಷ್ಟೇ ಅಲ್ಲ. Thanks for response