
ಭಾವ ಭಾವಕೆ ಬದುಕು
ಬದುಕ ಬದುಕಲಿ ಭಾವ
ಭಾವವಿಲ್ಲದ ನಾವು
ತಣ್ಣಗೆ ಬಿದ್ದಂತೆ ಕಾವು
ಮಂಥಿಸಿದರೆ ಕಥನ
ಮಂಥಿಸಿದರೆ ಕವನ
ಮಂಥಿಸಿದರೆ ಸ್ವಂತ
ರಂಜಿಸಲು ಜೀವನ
ಅಕ್ಕನ ಗಂಡ ಭಾವ
ಅವರಿಲ್ಲದಿರೆ ಅಭಾವ
ಆ ಭಾವಕ್ಕೆ ಈ ಭಾವ
ಒಬ್ಬರೊಳಗೊಬ್ಬರ ಜೀವ
ಇಹದ ಬದುಕು - ಭವ
ಬದುಕಿರಲು - ಅದೇ ಜೀವ
ತೊರೆದುಜೀವ- ನಿರ್ಜೀವ
ಭಾವ ಬೇಕು ಮರೆಯಲು ನೋವ
‘ಮನಸ‘ ಕದಡಿತು - ಮೂಡಿತು ಕವನ
ಕನಸ ಹೆಣೆಯಿತು - ಬೆಂಬಿಡದ ಮನನ
ಭಾವನ- ಮಂಥನ, ಕಥನ- ಕವನ
ಹೀಗಲ್ಲವೇ ಸಹಜ ನಿರಂತರ ಜೀವನ ?