Wednesday, April 30, 2014

ಧರೆಗೆ ನೀ ಹನಿಯೆ



ಚಿತ್ರ: ಅಂತರ್ಜಾಲ ಕೃಪೆ


ಧರೆಗೆ ನೀ ಹನಿಯೆ
**************
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.
ಕಣ್ಣುಮುಚ್ಚಾಲೆಯಾಡಿ
ಅನ್ನದಾತನ ಕಾಡುವೆ
ನಿನದಾವ ಪರಿಯೇ?
ಬಿದ್ದೊಂದೊಂದು
ಹನಿಯಲೂ
ಮುತ್ತಿಡುವರು ಅಲ್ಲಿ
ಬೀಳದಿರೆ ಭಯವಿಲ್ಲ
ತೈಲಸಿರಿ ನಾಡಲ್ಲಿ.
ಬಂದು ಬಿಡು ಬಂದು ಬಿಡು
ಕಾಲ ಕಾಲಕೆ ಅಲ್ಲಿ
ಉಪ್ಪನಿಲ್ಲಿ ತೆಗೆದು
ಸಿಹಿನೀರ ಕಸಿದು 
ಹರಿಯುವುದು ನಲ್ಲಿ.
ಎಂದಿನಂತಿಲ್ಲ ಹಸಿರು
ಕಟ್ಟಿದೆ ಭೂತಾಯಿಯುಸಿರು
ಬೇಕು ದಯೆ ಕೃಪೆ
ನಮಗೆ ಅಲ್ಲಿ
ನಮ್ಮವರ ನಗು
ಹೊಲ ಹಸಿರ ಸೊಬಗು
ತುಂಬಿರಲಿ ಅನ್ನದಾನಕೆ
ರೈತನಾವಲ್ಲಿ.
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.



Friday, January 3, 2014

ಹೃದಯ


Sunday, December 22, 2013

ನಿಂಗಿ-ಭಂಗಿ

(Source:Rashichaturvedi.blogspot.com)
ನಿಂಗಿ-ಭಂಗಿ
ಹರಿವಾಣ ಹೊತ್ತವ್ಳೆ
ನೀರನ್ನ ತತ್ತಾವ್ಳೆ
ನಿಂಗಿ ಬೋ ರಿಮಿ ರಿಮಿ
ಉದ್ದಕ್ಕೆ ಹಾವ್ನಂಗೆ
ಓಲಾಡೋ ಜಡ್ಯಾಗೆ
ತಾಳ ಆಕಿದ್ರೆ ತಕ ಧಿಮಿ
ವೈನಾಗೆ ನಡುವೈತೆ
ಬಳ್ಯಂಗೆ ಬಳ್ಕೈತೆ
ಕೊಡ ಕುಂತ್ರೆ ಏನ್ಪರಿ
ನಡ್ಯೋದು ಕುಲ್ಕುತ್ತಾ
ರಸಗುಲ್ಲಾ ಕಲ್ಕಾತ್ತಾ
ಕಾಡ್ತಾಳೆ ಕನ್ಸಾಗೆ ಪರಿ ಪರಿ
ತಲೆ ಮ್ಯಾಲೊಂದು
ಮತ್ತೆ ಕಂಕ್ಳಾಗೊಂದು
ನವಿಲೂನು ಕಲಿತೈತೆ ನಡ್ಗೆ
ನಿಂಗೀಯ ಚಲುವೀಗೆ
ಮೋಡಕೂ ಯಾಮೋಹ
ಕೆಳಗಿಳಿದು ಕಣ್ಣಾಯ್ತು ತಂಪ್ಗೆ

Thursday, October 24, 2013

ಯೌವನ



ಮತ್ತೊಂದು ಕರವೋಕೆ ಗೀತೆ, ಚಿತ್ರ: ವಖ್ತ್,

ಗಾಯಕ: ಮನ್ನಾ ಡೆ

ಯೌವನ

ಓ ನನ್ನ ಮನದನ್ನೆ

ಅರಿವಿಲ್ಲ ನಿನಗೆ ಚನ್ನೆ

ನೀನಿನ್ನೂ ತರುಣಿಯು ನಾ ತರುಣನಾಗಿಹೇ..

ಕೇಳಿ ನೋಡು ಜೀವವನೇ ಕೊಟ್ಟು ಬಿಡುವೆನೇ..

                        II ಓ ನನ್ನ ಮನದನ್ನೇ II


ಈ ಶೋಕಿ ವೈಯಾರ ಗೆಳತಿಯೇ..ss

ನಿನ್ನಲ್ಲಿಯೇ ಬೇರೆಲ್ಲಿದೇ.. II2II

ಮನವನ್ನೇ ಕದಿಯೋ ಕಲೆಯದು

ನಿನದಲ್ಲದೇ ಬೇರಾರದು..

ಓ ನಿನ್ನ..ಓ ನಿನ್ನ ಕಣ್ಣಲೇ ಕಂಡೆ ನಾ ಮೂಜಗ.. II2II

                        II ಓ ನನ್ನ ಮನದನ್ನೇ II


ಸಿಹಿ ನುಡಿಯನೆರಡು ಗೆಳತಿಯೇ

ನಸುನಕ್ಕು ನೀ ನುಡಿದರೆ.. II2II

ಎದೆ ಆಳದಲ್ಲಿ ಬಡಿತಹೆಚ್ಚಿಸಿ

ನಶೆಯೇರಿಸಿ ಕುಣಿಸುವೆ..

ಓ ಸಖಿ..ಓ ಸಖಿ ಇಂದಿಗೂ ನಾನಿನ್ನ ಪ್ರಿಯ ಸಖ


                        II ಓ ನನ್ನ ಮನದನ್ನೇ II

Wednesday, September 11, 2013

ಗೋಂದಲ ಎಲ್ಲಿ? ಏಕೆ??

ಸ್ನೇಹಿತರೇ ಬಹಳ ದಿನಗಳ ನಂತರ ಭಾವ-ಮಂಥನದಲಿ ಮಂಥನ ಮಾಡುವ ಇಂಧನ ಕೊಟ್ಟ ಬದರಿ ಪಲವಳ್ಳಿಗೆ ಆಭಾರ ವ್ಯಕ್ತಪಡಿಸುತ್ತಾ..ಕೆಲ ಸಾಲುಗಳು...ಈ ದಿನದ ನಮ್ಮ ಗೋಂದಲಮಯ (ಗೊಂದಲಕ್ಕೆ ಅಂಟಿಕೊಂಡ ಎನ್ನುವ ಪ್ರಯೋಗ) ಸಮಾಜದ ಪರಿಸ್ಥಿತಿಯನ್ನು ಕವನಿಸಿದ್ದೇನೆ.....

ಗೋಂದಲ ಎಲ್ಲಿ? ಏಕೆ??

ಕಥೆಯಾಳದ ಕಮರಿಯಲ್ಲಿ ಮುಳುಗಿ
ಕಳೆದು ಹೋಗುವುದು ಪಾತ್ರದ ವ್ಯಥೆ
ಶಾಯಿಯ ಬಣ್ಣ ಬಿಳಿ ಹಾಳೆಯನಾಳಿ
ಎಲ್ಲರೂ ಹಾಯಿ, ಬಡವಗೆ ಮಾತ್ರ ವ್ಯಥೆ

ಕಾರಿರುವರಿಗೆ ಪೆಟ್ರೋಲ್ ಚಿಂತೆಯೇ
ತಿಂದು ಚಲ್ಲಾಡುವಗೆ ಗ್ಯಾಸ್ ಭಯವೇ
ಕಟ್ಟಿಗೆಗೆ ಕಾಡಿಲ್ಲ ಉರಿಸಲೂ ಸೀಮೆಣ್ಣೆ
ಗುಡಿಸಿಲ ಬವಣೆ ಮಹಲಿಗಿಲ್ಲ ಕರುಣೆ

ಮುಖವಾಡ ಕಾಣುವುವು ಕಾಳಜಿತೋರಿ
ಸುಖವಾದ ಅವರದು ಬೇಯ್ಸಿ ಕೊಳ್ಳಲು
ಇವರಿಗವರನು ಅವರಿಗಿವರನು ಬಳಸಿ
ಕೆಲ ಮಂದಿಗೆ ಇದುವೇ ದಿನದ ದಿನಸಿ

ಗಾಂಧಿ ಹೆಸರಲಿ ಖಾದಿ ತೊಟ್ಟವರು
ನ್ಯಾಯವಾದ ಕರಿಕೋಟ ಉಟ್ಟವರು
ಗೃಹ ರಕ್ಷಕನೂ ಆಗಿಬಿಟ್ಟರೆ ಭಕ್ಷಕ ಹೀಗೆ
ಸಾಮಾನ್ಯನು ಬಾಳುವುದಾದರೂ ಹೇಗೆ?

ರಾಮ ತಾನೂ ಕಾಣದಾದ ರಾಮ ರಾಜ್ಯ
ಸೀತೆಗೂ ಬವಣೆ ಆಗಲಿಲ್ಲವೇ ಆವಳೂ ತ್ಯಾಜ್ಯ?
ಗಾಂಧಿ ಕೊಟ್ಟ ಮಂತ್ರ ಆಳುವವಗೆ ಅಂದು
ಶ್ರೀರಕ್ಷೆ ಆಗಿದೆ ಗೋಳು ಹುಯ್ಯಲು ಇಂದು

Wednesday, July 17, 2013

ಹಾಯ್ಕು-ಕಾಯ್ಕು (ಜೀವ ಪರಿಸರ)


ಕತ್ತಲು, ಅಂಧಃಕಾರ ಬೇಸರವಿಲ್ಲ ಗೂಗೆ ಬಾವಲಿಗೆ
ಜೀವನವೇ ನಡೆ ಹರಿತ್ತು ಎಲೆಗೆ, ಸೂರ್ಯ ಬೇಕಿಲ್ಲ ಅಣಬೆಗೆ ಹಂಗಿಲ್ಲ
ಪರಿಸರ, ಜೀವಜಾಲ, ಕುತ್ತು, ಆಪತ್ತು, ಆಹಾರ, ಬಲಿ

ಜಲ, ಬಿಲ, ನೆಲ, ಹೊಲ, ಬೀಜಕೆ ಸಾಕು
ವಿಶಾಲ ಆಕಾಶ, ಗಹನ ಸಾಗರ ಮೋಡ ಆದರೆ ಹನಿ ತುಣುಕು
ಪಸೆಗೆ, ಕಿಸೆಗೆ, ಹೂಹಣ್ಣು ಬಳ್ಳಿಗೆ ಬೇಕು

ಮರಿ, ತಾಯಿ ದಿಟ ಅಪ್ಪ ಶಾಶ್ವತ ಅಲ್ಲ
ಜಲದಿ(ಧಿ), ಹೊಲದಿ, ಕಾಡು ಮೇಡು ನಾಡು ಬೇರೇನು
ನಿಸರ್ಗ ನಿಯಮ ಹಾರಿದರೂ ಸಾಕು ಪರಾಗ


ಮೊಟ್ಟೆ ರೇತ್ರ ಹೊರ ಒಳ ಗರ್ಭ ನೀರಲ್ಲಿ
ಅವತಾರ ವಿಷ್ಣುವಿಗೆ ಜಗಕೆ ಜೀವಜಾಲ ಕೊಂಡಿ ಪರಿಚಯ
ಮೀನಾಯ್ತು ಎಲ್ಲಾ ಜಾಲದ ಬಿಡದ ಬಾಲ

Wednesday, July 3, 2013

ಸೋಲು-ಗೆಲುವು

 
Picture: From Internet
 
 
ಸೋಲು-ಗೆಲುವು
ಸೋಲಿನಲ್ಲೂ ಸುಖ ಸಿಗುವುದೆಂದು
ತಿಳಿದಂದಿನಿಂದ ನನ್ನವಳೊಡನೆ
ಸೋಲುವುದು.. ಈಗೀಗ ನನಗೆ
ಚಟವಾಗಿ ಬಿಟ್ಟಿದೆ....
ಗೆದ್ದರೂ ಸೋತಷ್ಟೇ ಸುಖವೆಂದು
ತಿಳಿದವಳು ನನ್ನೊಂದಿಗೆ ಗೆದ್ದೇ
ಗೆಲುವೆನೆನ್ನುವ ಅವಳದು ಈಗೀಗ
ಹಟವಾಗಿಬಿಟ್ಟಿದೆ........
ನನ್ನ ಮೇಲವಳ ಅವಳಮೇಲೆನ್ನ
ಎತ್ತಿಕಟ್ಟಿ, ಪುಸಲಾಯಿಸಿ ಕೆಣಕಿ
ನಮ್ಮಾಟ ವಿನೋದ ಮಗಳಿಗೀಗ
ದಿಟವಾಗಿಬಿಟ್ಟಿದೆ.......