Wednesday, July 17, 2013

ಹಾಯ್ಕು-ಕಾಯ್ಕು (ಜೀವ ಪರಿಸರ)


ಕತ್ತಲು, ಅಂಧಃಕಾರ ಬೇಸರವಿಲ್ಲ ಗೂಗೆ ಬಾವಲಿಗೆ
ಜೀವನವೇ ನಡೆ ಹರಿತ್ತು ಎಲೆಗೆ, ಸೂರ್ಯ ಬೇಕಿಲ್ಲ ಅಣಬೆಗೆ ಹಂಗಿಲ್ಲ
ಪರಿಸರ, ಜೀವಜಾಲ, ಕುತ್ತು, ಆಪತ್ತು, ಆಹಾರ, ಬಲಿ

ಜಲ, ಬಿಲ, ನೆಲ, ಹೊಲ, ಬೀಜಕೆ ಸಾಕು
ವಿಶಾಲ ಆಕಾಶ, ಗಹನ ಸಾಗರ ಮೋಡ ಆದರೆ ಹನಿ ತುಣುಕು
ಪಸೆಗೆ, ಕಿಸೆಗೆ, ಹೂಹಣ್ಣು ಬಳ್ಳಿಗೆ ಬೇಕು

ಮರಿ, ತಾಯಿ ದಿಟ ಅಪ್ಪ ಶಾಶ್ವತ ಅಲ್ಲ
ಜಲದಿ(ಧಿ), ಹೊಲದಿ, ಕಾಡು ಮೇಡು ನಾಡು ಬೇರೇನು
ನಿಸರ್ಗ ನಿಯಮ ಹಾರಿದರೂ ಸಾಕು ಪರಾಗ


ಮೊಟ್ಟೆ ರೇತ್ರ ಹೊರ ಒಳ ಗರ್ಭ ನೀರಲ್ಲಿ
ಅವತಾರ ವಿಷ್ಣುವಿಗೆ ಜಗಕೆ ಜೀವಜಾಲ ಕೊಂಡಿ ಪರಿಚಯ
ಮೀನಾಯ್ತು ಎಲ್ಲಾ ಜಾಲದ ಬಿಡದ ಬಾಲ

4 comments:

  1. ಜೀವ ಪರಿಸರ ತುಂಬಾ ಚೆನ್ನಾಗಿ ಮೂಡಿಬಂದಿದೆ ಸರ್... ಸಾಲುಗಳು ವಿಭಿನ್ನರೀತಿಯಲ್ಲಿವೆ.

    ReplyDelete
  2. ಜೀವ ಪರಿಸರವನ್ನು ಅದ್ಭುತವಾಗಿ ವರ್ಣಿಸಿದ್ದೀರಿ!

    ReplyDelete
  3. ಪ್ರತಿ ಜೀವಿಗೂ ಅದರದೇ ಬದುಕಿನಲ್ಲಿ priority ಎಂದು ಎಷ್ಟು ಅದ್ಭುತವಾಗಿ ಹಾಯ್ಕಿಸಿದ್ದೀರಾ ದೊರೆ! ನನಗೆ ಬೇಕಿದ್ದು ಯಾರಿಗೋ ಬೇಕಿಲ್ಲದಿರಬಹುದು, ಸುಮ್ಮನೆ ಕೊಬ್ಬುತ್ತೇವೆ ತಿರಸ್ಕರಿಸಿ ಅವರನ್ನು!

    ReplyDelete
  4. prakrutiya pratiphalana kavanadalli
    sogasaagi bimbitavaagide.dhanyavaadagalu.

    ReplyDelete