Thursday, October 24, 2013

ಯೌವನ



ಮತ್ತೊಂದು ಕರವೋಕೆ ಗೀತೆ, ಚಿತ್ರ: ವಖ್ತ್,

ಗಾಯಕ: ಮನ್ನಾ ಡೆ

ಯೌವನ

ಓ ನನ್ನ ಮನದನ್ನೆ

ಅರಿವಿಲ್ಲ ನಿನಗೆ ಚನ್ನೆ

ನೀನಿನ್ನೂ ತರುಣಿಯು ನಾ ತರುಣನಾಗಿಹೇ..

ಕೇಳಿ ನೋಡು ಜೀವವನೇ ಕೊಟ್ಟು ಬಿಡುವೆನೇ..

                        II ಓ ನನ್ನ ಮನದನ್ನೇ II


ಈ ಶೋಕಿ ವೈಯಾರ ಗೆಳತಿಯೇ..ss

ನಿನ್ನಲ್ಲಿಯೇ ಬೇರೆಲ್ಲಿದೇ.. II2II

ಮನವನ್ನೇ ಕದಿಯೋ ಕಲೆಯದು

ನಿನದಲ್ಲದೇ ಬೇರಾರದು..

ಓ ನಿನ್ನ..ಓ ನಿನ್ನ ಕಣ್ಣಲೇ ಕಂಡೆ ನಾ ಮೂಜಗ.. II2II

                        II ಓ ನನ್ನ ಮನದನ್ನೇ II


ಸಿಹಿ ನುಡಿಯನೆರಡು ಗೆಳತಿಯೇ

ನಸುನಕ್ಕು ನೀ ನುಡಿದರೆ.. II2II

ಎದೆ ಆಳದಲ್ಲಿ ಬಡಿತಹೆಚ್ಚಿಸಿ

ನಶೆಯೇರಿಸಿ ಕುಣಿಸುವೆ..

ಓ ಸಖಿ..ಓ ಸಖಿ ಇಂದಿಗೂ ನಾನಿನ್ನ ಪ್ರಿಯ ಸಖ


                        II ಓ ನನ್ನ ಮನದನ್ನೇ II

8 comments:

  1. ಚಂದಾ ಚಂದ ...ಇಷ್ಟವಾಯ್ತು ಅಜ಼ಾದ್ ಜಿ .

    ಯೌವನದ ಭಾವವೇ ಹಾಗೇನೋ ..ಇಷ್ಟವಾಗಲೇ ಬೇಕು ಭಾವಗಳೆಲ್ಲಾ

    ReplyDelete
  2. ಜಲನಯನ,
    ಮನ್ನಾ ಡೇ ಅವರ ಮಧುರ ಗೀತೆಗಳಲ್ಲಿ ಇದು ಒಂದಾಗಿದೆ. ಅವರಿಲ್ಲವಾದ ಈ ದಿನದಂದು ಅವರ ಗೀತೆಯನ್ನು ಕೇಳಿಸಿದ್ದಕ್ಕಾಗಿ ಹಾಗು ಸಮರ್ಥವಾದ ಕನ್ನಡೀಕರಣಕ್ಕಾಗಿ ನಿಮಗೆ ಅನೇಕ ಧನ್ಯವಾದಗಳು.

    ReplyDelete
    Replies
    1. ಸುನಾಥಣ್ಣ ನನಗೆ ನಿಮ್ಮ ನಿರಂತರ ಪ್ರೋತ್ಸಾಹ ಒಂಥರಾ ಟಾನಿಕ್ಕು...ಧನ್ಯವಾದ.

      Delete
  3. Wah! wah! Kya baat!! Kya baat hai!! haage imagine madkonde... video song nalli neeve kulitu bhabiji ge ee song haadta iro thara... ha ha ha super!

    ReplyDelete
    Replies
    1. ಪ್ರದೀಪ್...ಥ್ಯಾಂಕ್ಸ್... ನಿಮ್ಮ ಊಹೆ ನಿಜ ಬರೆಯುವಾಗ ನನ್ನ ಬೀವಿ ಕೇಳಿದ್ದಕ್ಕೆ ಹಾಡಿ ತೋರಿಸಿದೆ...ಚನ್ನಾಗಿದೆ ಅಂದ್ಲು..ಒಂದೇ ಪದದಲ್ಲಿ... ಹಹಹ

      Delete
  4. tumba chennagide sir... manna de avara geetegaLu endoo mareyalaradantavu

    ReplyDelete
    Replies
    1. ಹೌದು ಸುಗುಣಾ... ಅದ್ರಲ್ಲೂ ಪ್ರಾಣ್ ಗಾಗಿ ಅವ್ರು ಹಾಡಿದ್ರಲ್ಲಿ ಪ್ರಾಣ್ ಪ್ರಾಣಾನೇ ಇತ್ತು ಅನ್ನೋ ಮಾತಿದೆ. ಧನ್ಯವಾದ

      Delete