ಚಿತ್ರ: ಅಂತರ್ಜಾಲ ಕೃಪೆ
ಧರೆಗೆ ನೀ ಹನಿಯೆ
**************
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.
ಕಣ್ಣುಮುಚ್ಚಾಲೆಯಾಡಿ
ಅನ್ನದಾತನ ಕಾಡುವೆ
ನಿನದಾವ ಪರಿಯೇ?
ಬಿದ್ದೊಂದೊಂದು
ಹನಿಯಲೂ
ಮುತ್ತಿಡುವರು ಅಲ್ಲಿ
ಬೀಳದಿರೆ ಭಯವಿಲ್ಲ
ತೈಲಸಿರಿ ನಾಡಲ್ಲಿ.
ಬಂದು ಬಿಡು ಬಂದು ಬಿಡು
ಕಾಲ ಕಾಲಕೆ ಅಲ್ಲಿ
ಉಪ್ಪನಿಲ್ಲಿ ತೆಗೆದು
ಸಿಹಿನೀರ ಕಸಿದು
ಹರಿಯುವುದು ನಲ್ಲಿ.
ಎಂದಿನಂತಿಲ್ಲ ಹಸಿರು
ಕಟ್ಟಿದೆ ಭೂತಾಯಿಯುಸಿರು
ಬೇಕು ದಯೆ ಕೃಪೆ
ನಮಗೆ ಅಲ್ಲಿ
ನಮ್ಮವರ ನಗು
ಹೊಲ ಹಸಿರ ಸೊಬಗು
ತುಂಬಿರಲಿ ಅನ್ನದಾನಕೆ
ರೈತನಾವಲ್ಲಿ.
ಮೋಡದಲಿ ಮೈಮರೆತು
ಮಲಗಿರುವ ಹನಿಯೇ
ಬಾಯಾರಿ ಬಾಯ್ಬಿಟ್ಟ
ಧರೆಗೆ ನೀ ಹನಿಯೆ.
ಭಾವಪೂರ್ಣವಾದ, ನಾಡಪ್ರೇಮದಲ್ಲಿ ತೊಯ್ದಂತಹ ಸುಲಲಿತ ಕವನ. ಮೋಡಗಳಿಗೆ ಈ ಅರ್ದ್ರ ಪ್ರಾರ್ಥನೆ ತಲುಪುವದೆಂದು ಹಾರೈಸುವೆ.
ReplyDeleteಸುನಾಥಣ್ಣ ಧನ್ಯವಾದ... ನಿಮ್ಮಲ್ಲಿ ಮಳೆ ಆಗಿದೆಯಾ..?? ಬೇಗ ಬರಲಿ
ReplyDeleteಬೀಳದಿರೆ ಭಯವಿಲ್ಲ
ReplyDeleteತೈಲಸಿರಿ ನಾಡಲ್ಲಿ.
ಬಂದು ಬಿಡು ಬಂದು ಬಿಡು
ಕಾಲ ಕಾಲಕೆ ಅಲ್ಲಿ - ಎಂಥಾ ಮಾತು! ನಿಮ್ಮ ಮಾತೃ ಭೂಮಿ ಪ್ರೇಮ ಎದ್ದು ಕಾಣುತ್ತಿದೆ... ಜೈ ಹೋ ಆಜ಼ಾದಣ್ಣಾ!
ಪ್ರದೀಪಾ...ಹಹಹ ನನ್ನ ನಾಡಿನ ಕಾಳಜಿ ನನ್ನದು-ನಿಮ್ಮದು ನಮ್ಮೆಲ್ಲರದು....ಧನ್ಯವಾದ
ReplyDelete