Sunday, November 22, 2009

ಎರಡು ದಿಕ್ಕು -ಒಂದೇ ಯೋಚನೆ













ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ

ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು

Friday, October 30, 2009

ಎಲ್ಲಿದೆ ಪ್ರಳಯ...ಹೇಗೆ ಅಂತ್ಯ??? ಮಾಯನ್...ಮನು..?













ಹಿಂದೂ ಪುರಾಣಗಳ ಆಧಾರದ ಮೇಲೆ.....2012 ಕ್ಕೆ ಅರ್ಥ ಇಲ್ಲ??!!! ಹೇಗೆ?
(ಇದಕ್ಕೆ.. ಬಲ್ಲವರು ಪೂರಕ ಮಾಹಿತಿ ಕೊಡಬಹುದು)


"ಅರೆ ಇವನ ಇವನ ಪ್ರಳಯದ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬರಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.

ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...

ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??

ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...

ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!

Sunday, September 27, 2009

ಒಂದೆರಡು ಪಂಚು

ಬೀರಬಲ್
ಗುಂಡಾನೋ...
ಬೀರಬಲ್ಲ
ಬೀರನ್ನ ಬಿಟ್ರೆ
ಇನ್ನೇನನ್ನೂ ಬಲ್ಲ

ಕಣ್ಣ ಬಾಣ
ಕಣ್ಣಲ್ಲೇ ಬಾಣ
ಹುಬ್ಬು ಕುಣಿಸಿ
ಅದೇ ಬಿಲ್ಲು
ಅದಕ್ಕೇ ಹೇಳೋದು
ಹುಡ್ಗೀರ್ದೇ ದಿಲ್ಲು


ಬರ್ತ್ ಡೇ ಕೇಕು
ವೈಯ್ಯಾರಿ ಸೈಕಲ್ ಚಕ್ರ
ಸಗಣಿತೊಪ್ಪೆ ಕತ್ತರಿಸಿತ್ತು
ಬಿದ್ದಿದ್ದೊಂದು ಅಲ್ಲೇ ಹತ್ರ
ಹಿಂದೆ ನಿಂತ ಪಡ್ಡೇ ಹೈಕ್ಳು ಅಂದ್ರು
“ಹ್ಯಾಪಿ ಬರ್ತ್ ಡೇ ಟು ಯೂ”
ಕಿಲಾಡಿ ಹುಡ್ಗಿ
ಹಿಂತಿರುಗಿ ಹೇಳೋದೇ?
“ಪೂರ್ತಿ ಕೇಕ್ ಈಸ್ ಫ಼ಾರ್ ಯೂ”

ಐಸ್ ಕ್ರೀಮ್
ಅವಳಿಗೆ ಬಂತು
ಗುಂಡನ ಮೇಲೆ
ಅಚಾನಕ್ಕು ಪ್ರೇಮ
ಕರಗಿಬಿಟ್ಟ ಗುಂಡ
ತಿನ್ನೋಕೆ ಮುಂಚೆನೇ
ಅವಳು ಕೊಡ್ಸಿದ
ಐಸ್ ಕ್ರೀಮ

ವ್ಯತ್ಯಾಸ
ಮದ್ವೆಗೆ ಮುಂಚೆ
ಅವನದ್ದು ಪರ್ಸು
ಇಬ್ಬರದೂ –ಕೈ
ನಂತರವೂ..
ಅವನದ್ದೇ ..ಪರ್ಸು..
ಅವಳದ್ದೇ..ಕೈ

ಕಾರು ಬಾರು
ಗುಂಡ ಹೇಳ್ದ
ಇದೆ ನಂದೂ ದೊಡ್ಡ
ಕಾರುಬಾರು
ಮದುವೆಯಾಯ್ತು ಮಾವ ಕೇಳ್ದ
ತೋರಿಸ್ದ ತನ್ನ ಮುರುಕಲು ಕಾರು,
ಅದರಲ್ಲೇ ತುಂಬಿದ್ದ
ಬಾಟ್ಲು ಬ್ರಾಂದಿ-ಬೀರು
ಮಾಡಿ ಅದನ್ನೇ ಒಂದು ಬಾರು

ಕಣ್ಣೀರು
ಮಡುಗಟ್ಟಿದ ದುಃಖ
ಬೆಂಬಿಡದ ಶೋಕ
ಅವಡುಗಚ್ಚಿ ತಡೆದರೂ
ರೆಪ್ಪೆದೂಡಿ ಬರುವುದು
ಹನಿಯೊಂದು-ಕಣ್ಣೀರು

ಅವಿನಾಶ ಯಾರು ನಿನ್ನ
ವಿನಾಶಕ್ಕೆ ದೂಡಿದ್ದು?
ಕೇಳಿ- ಮನತುಂಬಿತ್ತು
ನನ್ನದೇ ಕರುಳಕುಡಿ
ವಿಜಯನಿಗೂ ಅದೇ ಗತಿ
ಯೋಚನೆ ಮಾತ್ರದಿ
ತಡೆಯಲಾರೆ ಬರುತಿರೆ
ಕಣ್ತುಂಬಿ - ಕಣ್ಣೀರು.

ಅವಿನಾಶ-ವಿಜಯರು
ಅವರೆಲ್ಲಿ ತಿರುಗಿ ಬರುವರು
ಬಂದರು ಹಲವರು
ಆಯುಕ್ತರು ಮಂತ್ರಿವರ್ಯರು
ಬಂತು ಹೊತ್ತು
ಲಕ್ಷಹೊತ್ತ ಅಧಿಕಾರಿಗಳ ಕವರು
ಲಕ್ಷ-ಕೋಟಿಗಳೂ ತಡೆಯಲಾರವು
ನೆನಪಹೊತ್ತು ಪದೇ ಪದೇ
ನಿಲ್ಲದೇ ಬರುವ-ಕಣ್ಣೀರು

Wednesday, September 2, 2009

ಮರಳಲ್ಲಿ-ಮರಳುಮಾಡುವ ಕೈಚಳಕ

ಬ್ಲಾಗು ಬಳಗಕ್ಕೆ, ಇದೊಂದು ಪೋಸ್ಟ್..ವೀಡಿಯೋ..ನಮ್ಮ ಚಿತ್ರಗ್ರಾಹಕ ಮಿತ್ರರಾದ, ಶಿವು, ಮಲ್ಲಿಕಾರ್ಜುನ್, ರಾಘವೇಂದ್ರ, ರೂಪಶ್ರೀ, ಪ್ರಕಾಶ್, ಅಗ್ನಿ, ಪ್ರಭು, ಗುರು, ಮತ್ತು ಇತರರಿಗೆ ಮೆಚ್ಚುಗೆ ಮತ್ತು ಇತರ ನನ್ನ ಬ್ಲಾಗು-ಬಳಗಕ್ಕೆ ಇಷ್ಟವಾಗುವುದೆಂದು ನನ್ನ ನಂಬಿಕೆ. ಚಿತ್ರ ರಚನೆ-ಕೈಚಳಕ ಎರಡನ್ನು ಒರೆಗಿಡುವ ಪ್ರಯತ್ನ.

Friday, August 28, 2009

Sunday, August 23, 2009

ಅದಲು-ಬದಲು

(ನನ್ನ ಬ್ಲಾಗ್ ಮಿತ್ರರ ಪ್ರತಿಕ್ರಿಯೆಯಿಂದ ಮಂಥಿತ ಕಾಂಪನ್ಸೇಷನ್ ಚುಟುಕದ ಎರಡನೇ ಭಾಗ)
ಎಂದಿನಂತೆ ಕೊಟ್ಟೆ ನನ್ನವಳಿಗೆ ಮುತ್ತು
ಜೊತೆಗೆ ಅವಳಮೂಗಿಗೊಂದು ನತ್ತು
ಗೊತ್ತಾಗಿಬಿಡ್ತು ನನ್ನ ಕಸರತ್ತು
ತೋರಿಯೇ ಬಿಟ್ಟಳಿವಳು ತನ್ನ ಗತ್ತು
ಬೇಡ ನನಗೆ ನತ್ತು ಸಾಕು ಒಂದೇ ಮುತ್ತು
ಅದಕೇ ಈಗ ಇಲ್ಲಿ ಮುತ್ತು
ಅಲ್ಲಿ ಮುತ್ತು ಮತ್ತು ನತ್ತು

Friday, August 21, 2009

ಎರಡು -ಕವನ ಚುಟುಕಗಳು

ಲೆಕ್ಕಾಚಾರ ಚಿಂದಿ
ಸೊಳ್ಳೆ ತಂತು ಮಲೇರಿಯಾ
ಆಮೇಲೆ ಡೆಂಗ್ಯೂ
ಜೊತೆಗೆ ಚಿಕನ್ ಗುನ್ಯಾ
ಈಗ ಎಲ್ಲಿ ನೋಡಿದರೂ
ಹಂದಿ-ಫೋಬಿಯಾ
ಬಂತು ಡಿ.ಡಿ.ಟಿ
ಎನ್ಡೋಸಲ್ಫಾನ್
ಸೊಳ್ಳೆಪರದೆ
ಟಾರ್ಟಾಯ್ಸ್ ಕಾಯಿಲ್
ಗುಡ್ ನೈಟ್ ಮ್ಯಾಟಿನ ಸೇಲ್
ಲಿಕ್ವಿಡೇಟರ್ ಗೂ ಕಾಲ್
ಅಮೇಲೆ ಕೋಳಿ ಸರದಿ
ತಂತು ಹಕ್ಕಿಜ್ವರದ ವರದಿ
ಈಗ ಸುದ್ದಿಯಲ್ಲಿದೆ ಹಂದಿ
ಜ್ವರ ಹರಡಿ ಮಾನವ ಬಂಧಿ
ರೋಗಗಳಿಗೆ ಇತಿಯಿಲ್ಲ
ಮಾಡಿವೆ ಮಾನವನ ಲೆಕ್ಕಾಚಾರ ಚಿಂದಿ.

ಮಳೆ-ಇಳೆ
ಮಳೆ
ಇಳೆಯತ್ತ
ಇಳಿದರೆ
ಬೆಳೆ
ಕಳೆ.
ಮಳೆ
ಬಂದರೆ
ಕೆರೆ ಹೊಳೆ
ನದಿ ನಾಲೆ

ಮಳೆ
ಆದರೆ ನೀರು
ಕುಡಿಯಲು
ಬೆಳೆಬೆಳೆಯಲು
ಕಳೆತೊಳೆಯಲು

ಮಳೆ
ಇಲ್ಲದಿರೆ
ಬತ್ತುವುದು ಸೆಲೆ
ತೊರೆವುದು ನೆಲೆ
ಕೆರೆ ನಾಲೆ
ಹಸಿರು ಎಲೆ
ಜೀವ ಕಾಣದು ಬೆಲೆ
ನಾಗರಿಕತೆಗದು ಬರಿ ಸೋಲೆ


ಮುತ್ತು
ಹತ್ತು-ಇಪ್ಪತ್ತು
ಮುತ್ತು ಸಿಕ್ಕಿತ್ತು
ಅದಕಿಲ್ಲ ಹೊತ್ತು ಗೊತ್ತು
ಬೇಡವೆನಲು ಆಪತ್ತು
ಯಾಕಂದ್ರೆ ಅದು ನಮ್ಮಿಬ್ಬರ ಸೊತ್ತು

ಕಾಂಪನ್ಸೇಷನ್
ಪ್ರಿಯೆಗೆ ಕೊಡಬೇಕು
ಕದ್ದು-ಮುಚ್ಚಿ ಮುತ್ತು
ಅದು ಗೊತ್ತಾಗದಿರಲು
ನನ್ನವಳಿಗೆ ಮುತ್ತು
ಜೊತೆಗೆ ಮುತ್ತಿನ ನತ್ತು