ಹಿಂದೂ ಪುರಾಣಗಳ ಆಧಾರದ ಮೇಲೆ.....2012 ಕ್ಕೆ ಅರ್ಥ ಇಲ್ಲ??!!! ಹೇಗೆ?
(ಇದಕ್ಕೆ.. ಬಲ್ಲವರು ಪೂರಕ ಮಾಹಿತಿ ಕೊಡಬಹುದು)
"ಅರೆ ಇವನ ಇವನ ಪ್ರಳಯದ ಸಂಶಯ ನಿವಾರಿಸಿ ಮೂರುದಿನ ಆಗಿಲ್ಲ ಇನ್ನೊಬ್ಬರನ್ನ ಕರೆತರ್ತಾ ಇದ್ದಾನಲ್ಲ...ಇವರೇನಾದ್ರೂ ಅವರ್ದ್ದೇ ತರ್ಕ ತಂದರೋ ಹೇಗೆ..? ಎ0ಮ್ದು ಕೊಳ್ಳುತ್ತಾ ರಾಮಣ್ಣ ತನ್ನ ಮನೆಕಡೆ ಬರುತ್ತಿದ್ದ ಗೋಪಾಲ ಮತ್ತು ಅವರ ಜೊತೆಯಿದ್ದವರನ್ನು ಬರ ಮಾಡಿಕೊಳ್ಳುತ್ತಾ...‘ಬರಪ್ಪಾ ಗೋಪಲ...ಬನ್ನಿ ಒಳಗ್ಬನ್ನಿ....ಅಂದಹಾಗೆ ಇವರು ಯಾರು ಗೊತ್ತಾಗಲಿಲ್ಲ..?‘
ರಾಮು ಇವರು ನಮ್ಮ ವೇದ ಪುರಾಣಗಳನ್ನು ಅಧ್ಯಯನ ಮಾಡ್ತಿರೋರು..ಇವರು ನಿನ್ನ ಮಾತು ಒಪ್ತಾರೆ..ಅಷ್ಟೇ ಅಲ್ಲ..ನಮ್ಮ ವೇದ ಪುರಾಣಗಳ ಪ್ರಕಾರ ಇದು ಕೇವಲ ಯುಗದ ಪ್ರಾರಂಭ ಆಗಿರೋಕೆ ಸಾಧ್ಯ ಅನ್ತಿದ್ದಾರೆ...ಅದೂ ನಮ್ಮ ಯುಗದ್ದಲ್ಲ..ಮಾಯನ್ ಯುಗದ್ದು..ನಮ್ಮ ಪ್ರಕಾರ ಯುಗ ಮುಗಿಯೋಕೆ...ಇನ್ನೂ ದೂರ ಇದೆ...ಪ್ರಳಯ ಹಾಗಿರ್ಲಿ...ಅಂತಾರೆ....ಅಂದಹಾಗೆ ಇವರು ವಿದ್ವಾನ್ ಸಿದ್ಧರಾಮ್. ಎಂದು ತನ್ನ ಜೊತೆಯಿದ್ದವರನ್ನು ರಾಮಣ್ಣನಿಗೆ ಪರಿಚಯಿಸಿದ.
ಸರ್ ನೀವೊಬ್ಬ scientist ಅಂತ ಹೇಳಿದ್ರು ಗೋಪಾಲ್ ..ಹಾಗೇ ಇವರ ಪ್ರಳಯದ ಬಗ್ಗೆ ಎದ್ದಿರುವ ಊಹಾ ಪೋಹಾ ನಿಜವಲ್ಲ ಅಂತ ಹೇಳಿದ್ದಿರಂತೆ...ಎಂದರು ವಿದ್ವಾನ್
ನೋಡಿ ನನ್ನ ಅಧ್ಯಯನ ಈಗಷ್ಟೇ ಪ್ರಾರಂಭವಾಗಿದೆ ನನಗೆ ತಿಳಿದಿರುವುದನ್ನು ಹೇಳ್ತೇನೆ...
ನಮ್ಮ ವೇದ-ಪುರಾಣಗಳ ಪ್ರಕಾರ...ಬ್ರಹ್ಮ ನಮ್ಮ ಸೃಷ್ಠಿಕರ್ತ...ಇಡೀ ಬ್ರಹ್ಮಾಂಡದ ಸೃಷ್ಠಿಕರ್ತ ಎಂದೇ ಹೇಳಬೇಕು. ಅಲ್ಲವೇ?
ಹೌದು...ಎಂದು ಗೋಣು ಹಾಕಿದರು ರಾಮಣ್ಣ ಮತ್ತು ಗೋಪಾಲ್ ..
ಮುಂದುವರಿದ ವಿದ್ವಾನರು...
ಮಾಯನ್ ಪ್ರಕಾರ ಅವರ ಪಂಚಾಂಗ 2012 ಕ್ಕೆ ಕೊನೆಯಾದರೆ ಬೇರೆ ಯುಗ ಪ್ರಾರಂಭವಾಗಬೇಕು...ಅದು ಪ್ರಳಯ ಅನ್ನುವುದಾದರೆ...ಮನುಕುಲದ ಸಮಾಪ್ತಿ ಎಂದಾಯಿತು...ಆದರೆ ಹಿಂದೂ ಪುರಾಣಗಳ ಪ್ರಕಾರ ಇದು ಅಸಾಧ್ಯ..ಇದು ಕೇವಲ ಒಂದು ಯುಗದ (ಮಾಯನ್) ಅಂತ್ಯ ಮತ್ತು ಮತ್ತೊಂದರ ಪ್ರಾರಂಭ...!!!
ಹೇಗೆ??
ಇದರ ಪ್ರಕಾರ ಬ್ರಹ್ಮನ ಆಯಸ್ಸು 100 ಭ್ರಹ್ಮ ವರ್ಷಗಳು. ಬ್ರಹ್ಮನ ವರ್ಷದ ಒಂದುದಿನವನ್ನು ‘ಕಲ್ಪ‘ ಎನ್ನುತ್ತೇವೆ...ಇದರ ಅವಧಿ 4.32 ದಶಕೋಟಿ ವರ್ಷಗಳು (ಇದು ಪೃಥ್ವಿಯ ಆಯಸ್ಸಿಗೆ ಸಮ). ಪ್ರತಿ ಕಲ್ಪದಲ್ಲಿ (ಆತನ ಒಂದು ದಿನ) ಬ್ರಹ್ಮ ಹದಿನಾಲ್ಕು ಮನು ವಂಶಗಳನ್ನು ಸೃಷ್ಠಿಸುತ್ತಾನಂತೆ. ಒಂದು ಮನು ವಂಶ (ಮನ್ವಂತರ) ಎಪ್ಪತ್ತೊಂದು ಚತುರ್ಯುಗಗಳನ್ನು ಹೊಂದಿರುತ್ತದಂತೆ...ಚತುರ್ಯುಗಗಳು ಅಂದರೆ ಸತ್ಯ, ತ್ರೇತ, ದ್ವಾಪರ ಮತ್ತು ಕಲಿ.
ಸತ್ಯಯುಗ - 1,728,000 ಮಾನವ ವರ್ಷಗಳ ಅವಧಿ ಹೊಂದಿರುತ್ತೆ
ತ್ರೇತ ಯುಗ- 1,296,000 ಮಾ.ವ.
ದ್ವಾಪರ ಯುಗ- 864,000 ಮಾ.ವ.
ಕಲಿಯುಗ - 432,000 ಮಾ.ವ.
ನಮ್ಮ ಆರ್ಯಭಟನ ಪ್ರಕಾರ ಕಲಿಯುಗ ಪ್ರಾರಂಭವಾಗಿದ್ದು 3102 ಕ್ರಿಸ್ತ ಪೂರ್ವ ಅಂದರೆ 3102+2009=5111 ವರ್ಷ ಕಳೆದಿದೆ. ಅಂದರೆ ಕಲಿಯುಗದ 432,000 ವರ್ಷ ಅವಧಿಯಲ್ಲಿ ನಾವು ಕಳೆದಿರುವುದು ಕೇವಲ 5111 ವರ್ಷ ಅಂದರೆ ಯುಗಾಂತ್ಯಕ್ಕೆ ಇನ್ನೂ 427,889 ವರ್ಷ ಇದೆ ನಂತರ ಒಂದು ಚತುರ್ಯುಗ ಮುಗಿದಂತೆ. ಈಗ ನಡೆಯುತ್ತಿರುವ ಮನು ವಂಶ ಏಳನೇ ಮನುವಂಶ ಇದಕ್ಕೆ ವೈಸ್ವತ್ ಮನುವಂಶ ಎನ್ನುತ್ತಾರೆ. ಹೀಗೆ ಹದಿನಾಲ್ಕು ಮನು ವಂಶಕಾಲ ಮುಗಿದ ಮೇಲೆ ಪ್ರಳಯ...!!!! ಅಂದ್ರೆ ಕಲಿಯುಗದ ಉಳಿದಿರುವ 427,889 ವರ್ಷದ ನಂತರ ಇನ್ನೂ ಏಳು ಮನುವಂಶಗಳು ಉಳಿದಿವೆ..ಪ್ರತಿ ಮನು ವಂಶಕ್ಕೆ 71 ಚತುರ್ಯುಗಗಳು ಅಂದರೆ 71 x 7 = 497 ಚತುರ್ಯುಗಗಳು. ಒಂದು ಚತುರ್ಯುಗ = 4,320,000 ವರ್ಷ ಅಂದರೆ ಉಳಿದಿರುವ 497 ಚತುರ್ಯುಗಕ್ಕೆ ತಗಲುವ ಅವಧಿ 2,147,040,000 ವರ್ಷ...!!!!! ಅಲ್ಲಿಗೆ ಬ್ರಹ್ಮನ ಒಂದು ದಿನ (ಕಲ್ಪ) ಮುಗಿಯುತ್ತೆ ಅಂದರೆ ಪ್ರಳಯ, ಬ್ರಹ್ಮ ನಿದ್ರಿಸುತ್ತಾನೆ..ಬೆಳಗೆದ್ದು ಮತ್ತೊಂದು ಸೃಷ್ಠಿ ಅಂದರೆ 14 ಮನುವಂಶಗಳು...ಹೀಗೆ ಬ್ರಹ್ಮನ ೧೦೦ ವರ್ಷ..ಒಬ್ಬ ಬ್ರಹ್ಮನ ಪತನ ಮತ್ತೊಬ್ಬನ ಉಗಮ...
ಯಾವುದಕ್ಕೆ ಅಂತ್ಯ? ಯಾರದ್ದು ಅಂತ್ಯ? ವಿಚಾರ ವೈಶಾಲ್ಯತೆಯ ಆಧಾರಕ್ಕೆ ಬಂದರೆ 2012..ಅಂದರೆ ಇನ್ನು ಉಳಿದಿರುವ ಮೂರು ವರ್ಷ...ಉಳಿದಿರುವ ಕಲಿಯುಗದ ಅವಧಿಯಲ್ಲಿ ತೃಣಮಾತ್ರ!!!
ಮನುಕುಲದ ಅ೦ತ್ಯದ ಬಗ್ಗೆ ಎದ್ದಿರುವ ಗೊ೦ದಲಗಳನ್ನು ಈ ಮೊದಲು ವೈಜ್ಞಾನಿಕವಾಗಿ ತೆರೆ ಎಳೆದಿರಿ ಹಾಗು ಮಾಯನ್ ಕ್ಯಾಲೆ೦ಡರ ನ ರಹಸ್ಯ ಬಿಡಿಸಿದಿರಿ. ಈಗ ಹಿ೦ದೂ ಪುರಾಣಗಳ ಹಾಗೂ ಖಗೋಳ ಶಾಸ್ತ್ರದ ಅಧಾರದಿ೦ದ ಅಲ್ಲಗಳೆದಿದ್ದಿರಾ! ತಮ್ಮ ಪ್ರಯತ್ನ ಶ್ಲಾಘನೀಯ. ಎರಡನ್ನು ಬೆರೆಸಿ ಯಾವದಾದರೂ ಪತ್ರಿಕೆಗೆ ಕಳಿಸಿ.
ReplyDeleteಮಾಹಿತಿಗೆ ಧನ್ಯವಾದಗಳು.
ಸರ್,
ReplyDeleteನಿನ್ನೆ ರಾತ್ರಿ ಇದರ ಬಗೆ ಮಾತಾಡಿದ್ವಿ...ಬೆಳ್ಳಗೆ ಆಗಲೆ ಬ್ಲಾಗಲ್ಲಿ ಎಲ್ಲ ವಿವರವಾಗಿ ಬರೆದಿದ್ದೀರಾ....
ಮಾಯನ್ ಕ್ಯಾಲೆ೦ಡರ್, ಹಿ೦ದೂ ಪುರಾಣ, ಖಗೋಳ ಶಾಸ್ತ್ರ ಎಲ್ಲವನ್ನು ವಿವರವಾಗಿ ನೀಡಿದ್ದೀರಾ......
ಮಾಹಿತಿಯುಕ್ತ ಲೇಖನಕ್ಕೆ ಅಭಿನಂದನೆಗಳು....
ಸೀತಾರಾಂ ಸರ್, ನನಗೂ ಇದೇ ವಿಷಯ ಸ್ವಲ್ಪ ಕನ್ಫ್ಯೂಶನ್...ನಿಮ್ಗೆ ತಿಳಿದಿದ್ರೆ ನೀವೂ ಇದಕ್ಕೆ ಪೂರಕ ಮಾಹಿತಿ ಹಾಕಿ...ನಾನು ವಿದೇಶದಲ್ಲಿದ್ದೇನೆ..ಇದನ್ನು ನಾನು ಪ್ರಕಟಿಸಲು ಸಾಧ್ಯವೇ..? ನಿಮ್ಮ ಅನಿಸಿಕೆ ಹಾಗೂ ಪ್ರೋತ್ಸಾಹಕ್ಕೆ ಧನ್ಯವಾದಗಳು...
ReplyDeleteಮಹೇಶ್-ಸುಗುಣ ನಿಮ್ಮ ಜೊತೆ ಮಾತನಾಡಿದ ಮೇಲೆ ಏಕೆ ಇದನ್ನು ಪೋಸ್ಟ್ ಮಾಡಬಾರದು ಅನ್ನಿಸಿತು ...ನಿಮ್ಗೆ ಹೇಗೆ ಅನ್ನಿಸಿತು ಲೇಖನ..? ಇದಕ್ಕೆ ಪೂರಕ ಮಾಹಿತಿ ನಿಮ್ಗೂ ಸಿಕ್ಕರೆ ಹಂಚಿಕೊಳ್ಳಿ..ಥ್ಯಾಂಕ್ಸ್ ನಿಮ್ಮ ಕಾಮೆಂಟ್ಸ್ ಗೆ..
ReplyDeleteನೀವು ವೀದೇಶದಲ್ಲಿದ್ದೂ ಇದನ್ನು ಪ್ರಕಟಿಸಬಹುದು ಪತ್ರಿಕೆ ಮುಖಾ೦ತರ. ಶ್ರೀವತ್ಸ ಜೋಶಿ ಯನ್ನುವವರು ಅ೦ಕಣ ಬರೆಯುತ್ತಾರೆ ಪ್ರತಿ ವಾರ -ವಿಜಯ ಕರ್ನಾಟಕದಲ್ಲಿ.
ReplyDeleteತಾವೇಕೆ ಈ-ಪೇಪರ್ ನಲ್ಲಿ ಮೈಲ್ ಹಾಕಿ ನೋಡಿ. ವಿಕ ಸ೦ಪಾದಕ ವಿಶ್ವೇಶ್ವರ ಹೆಗ್ಡೆ ಯವರಿಗೆ ತಿಳಿಸಿ ಈ ಬಗ್ಗೆ.
ಧನ್ಯವಾದ ಸೀತಾರಾಂ ಸರ್, ಪ್ರಯತ್ನಿಸ್ತೇನೆ...ಸಲಹೆಗೆ ನನ್ನಿ..
ReplyDeleteಸರ್,
ReplyDeleteಯುಗಾಂತ್ಯದ ಬಗ್ಗೆ ಎಷ್ಟೋಂದು ವಿಭಿನ್ನವಾದ ಹಾಗೂ ಲೆಕ್ಕಾಚಾರದ ವಿವರಗಳನ್ನು ಕೊಟ್ಟಿದ್ದೀರಿ. ಎಲ್ಲವನ್ನು ಓದಿದ ಮೇಲೆ ತಲೆಸ್ವಲ್ಪ ಬಿಸಿಯಾಗಿಬಿಡ್ತು. ಏನಪ್ಪ ಇದು 4,320,000 ವರ್ಷ ಅಂದ್ರೆ ಅಂತ. ಕೊನೆಗೆ ನಾವಿನ್ನೂ ಪ್ರಾರಂಭದಲ್ಲಿದ್ದೀವಿ ಅಂತ ಸಮಾಧಾನವಾಯ್ತು. ಮತ್ತೆ ನಾನು ಏನೇನೋ ಮಾಡಬೇಕು ಅಂತ ಕನಸು ಕಾಣ್ತ ಇದ್ದೀನಿ ಸರ್. ಅದಕ್ಕೆ ಪ್ರಳಯವಾಗಬಾರದು ಅನ್ನೋದು ನನ್ನ ಬಯಕೆ ನೀವೇನಂತೀರಿ ಸರ್?
ಕನ್ನಡ ರಾಜ್ಯೋತ್ಸವದ ಶುಭಾಷಯಗಳು
ReplyDeleteಶಿವು, ಏನೇನೂ ಚಿಂತೆ ಬೇಡ ಎಲ್ಲದಕ್ಕೂ ನಿಮ್ಮ ಯೋಜನೆ ರೆಡಿಮಾಡಿ...ಏನೂ ಆಗೋದಿಲ್ಲ ...ನನ್ನ ಕಡೆಯಿಂದ ಇನ್ನೂ ೫೦೦-೬೦೦ ವರ್ಷದ ಗ್ಯಾರಂಟಿ ನಿಮಗೆ...ಹಹಹಹ
ಅಝಾದಣ್ಣ,
ReplyDeleteಏನು ಬಾರಿ ಹುಳುನೇ ಬಿಟ್ಟೀರಿ ತಲೆನಲ್ಲಿ ಹಹಹ... ಎಷ್ಟು ದಿನ ಇರ್ತೀವೋ ಅಷ್ಟುದಿನ ಒಬ್ಬರಿಗೆ ಒಳ್ಳೆದಾಗೋ ರೀತಿ ಇದ್ದರೆ ಆಯ್ತು ಅದೊ ಆಗಿಲ್ಲ ಅಂದರೆ ನಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗದೇ ಇರೋಹಾಗಿದ್ದರೆ ಒಳ್ಳೆಯದು ಅಲ್ಲವೆ..?
ನೀವು ಇಷ್ಟು ಕೊಲಂಕುಶವಾಗಿ ತಿಳಿಸಿಬಿಟ್ಟಿದ್ದೀರಿ ಮತ್ತೆ ನಮ್ಮ ಹತ್ತಿರ ಇನ್ನೆಂತ ಮಾಹಿತಿ ಇರುತ್ತೆ ಹೇಳಿ... ಬಹಳ ಚೆನ್ನಾಗಿ ತಿಳಿಸಿದ್ದೀರಿ ನೀವು ಮಹೇಶ್ ಜೊತೆ ಶುಕ್ರವಾರ ಮಾತನಾಡಿ ಮಲಗಿಲ್ಲ ಅನ್ನಿಸುತ್ತೆ ಹಹಹ ಈ ಬ್ಲಾಗಿಗೆ ಬರಹ ತರಲು ಬಲು ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು
ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಮನಸು...
ಮನಸಿಗೆ, ಸವಿಗನಸಿಗೆ...ಸ್ವಲ್ಪ ಇನ್ನೂ ಸಾಂತ್ವನ ಕೊಡೋಣ ಅನ್ನಿಸ್ತು ಅದಕ್ಕೆ ಕೆದಕಿ ತೆಗೆದೆ...ಮಾಹಿತೀನ..ಲಕ್ಕಿಲಿ ಒಂದೇ ಕಡೆ ಸಿಕ್ತು ಎಲ್ಲಾ..
ReplyDeleteಆ ದಿನ ಹೀಗೇ ತೇಜಸ್ವಿನೀನೂ ಏನೋ ಕೇಳಿದ್ದರು ಅದಕ್ಕೆ ನಾನು ಏನು ಹೇಳಿದ್ದು ಗೊತ್ತೆ,,,,ಕೆದಕಿಲ್ಲ ಇನ್ನೂ..ನೀವು ಹೇಳಿದ್ರಲ್ಲಾ..ಮುಗೀತು..ಇನ್ನು ಕೋಳಿ ತಿಪ್ಪೇಗೆ ಹೋಗೋಕೆ ಹೆಚ್ಚು ಸಮಯ ಬೇಡ ಅಂತ...ಅವ್ರಿಗೋ ನಗು... ಧನ್ಯವಾದ..ನಿಮ್ಮ ಬೆನ್ನು ತಟ್ಟಿಂಗಿಗೆ....ಹಹಹಹ
ಗುರುಗಳೇ,
ReplyDeleteನಿಮ್ಮ ಹಾಗು ಬೇರೆಯವರ ಲೇಖನಗಳಲ್ಲಿ ನಾನು ಕಾಣುವ major ವ್ಯತ್ಯಾಸ ಇದೇ ಇರಬಹುದು.. facts n figures! ಪ್ರತಿಯೊಂದು ವಿಷಯಕ್ಕೂ ಸಂಪೂರ್ಣ ಮಾಹಿತಿ ಒದಗಿಸಿ, ಅರ್ಥವಾಗುವಂತೆ ಬಿಡಿಸಿ ತಿಳಿಸುವಿರಿ. ತುಂಬಾ thanks :))
ಮತ್ತೊಂದು ವಿಷಯ.. ಹಬ್ಬದ ವೇಳೆ ಸಂಕಲ್ಪದಲ್ಲಿ "ವೈವಸ್ವತ ಮನ್ವನ್ತರೆ..." ಅಂತ ಕೇಳುವಾಗ ಅದರ ಅರ್ಥ ತಿಳಿಯುತ್ತಿರಲಿಲ್ಲ!! ಈಗ ತಿಳಿಯಿತು.. ಧನ್ಯವಾದಗಳು :)
ರೂಪಶ್ರೀ, ನಿನ್ನ ಸೂಕ್ಷ್ಮಗಳನ್ನು ಗಮನಿಸುವ ಕಾರಣ ಮತ್ತು ಬಯೋಟೆಕ್ ಕ್ಷೇತ್ರ ನಿವಾಸಿ..(ಹಹಹ) ಅದಕ್ಕೇ ಹೀಗೆ ಅನಿಸುತ್ತೆ...ಎಲ್ಲದಕ್ಕೂ ಅಂಕಿ ಅಂಶ ಇಲ್ಲದಿದ್ದರೆ..ನಂಬೋದು ಹೇಗೆ..??..ಇಲ್ಲಿ ಇನ್ನೊಂದು ಅಂಶ ಗಮನಿಸಿದ್ದೀಯಾ? ಸತ್ಯಯುಗದ ಬರೋಬ್ಬರಿ ಅರ್ಧ ಮಾತ್ರ ದ್ವಾಪರ...ಇದನ್ನ ಮುಂದುವರೆಸಿ ಈ ಬ್ಲಾಗ್ ಗೆ ಪೂರಕ ಹಾಕ್ತೇನೆ ನೋಡೋಣ..ಎಲ್ಲರೂ ಏನು ಪ್ರತಿಕ್ರಿಯೆ ಕೊಡ್ತಾರೋ ನೋಡೋಣ
ReplyDeletehmmm.. kaayuttene :)
ReplyDeleteರೂಪಶ್ರೀ...ಜಲನಯನದಲ್ಲಿ ಹಾಕಿದ್ದೇನೆ..ಇದನ್ನೇ ಒಂದು ಚಿಕ್ಕ ತರ್ಕ ನನ್ನದೇ ..ಸೇರಿಸಿದ್ದೇನೆ...ನೋಡಿ ಪ್ರತಿಕ್ರಿಯೆ ಹಾಕು...
ReplyDeletepralaya anno taleyalli bidda hulakke samanjasa tarkadondige uttara nediddeeri dhanyavaadalalu bhayya ..
ReplyDeletehmm an illuminating post replete with facts and figures
ReplyDeletebtw tomorrow night going to watch the moive 2012.
thankyou
:-)
malathi S
ರಂಜು, ಇದನ್ನ ಜಲನಯದಲ್ಲೂ ಹಾಕಿದ್ದೇನೆ..ಅಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆನೂ ಇದೆ..ಎರಡನ್ನೂ ತರ್ಕಿಸಿ ನೋಡಿ ಮತ್ತೆ ಮಿಂಚೆ ಕಳುಹಿಸು ಆಯ್ತಾ?
ReplyDeleteಮಾಲ್ತಿಯವರಿಗೆ ೨೦೧೨ ರ ಶುಭವೀಕ್ಷಣೆ ಹಾರೈಕೆ...ನಾನೂ ನೋಡಬೇಕು...ತರ್ಕ ಏನು ಅನ್ನೋದನ್ನ ತಿಳ್ಕೊಳ್ಳೋ ತವಕ
ReplyDelete