ನಾಳೆ ಚಿಂತೆ ಬಿಡು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ
ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು
ಭವಿತಕೆ ಹೇಳಿಬಿಡು
ಚಿಂತೆ ಮಾಡದಿರು
ಸೂತ್ರವಾಗಲಿದು ಎಂದೂ
ಮರೆತುಬಿಡು
ನೋಡದಿರು
ಕನ್ನಡಿಯನ್ನೆಂದೂ
ತೊರೆದುಬಿಡು
ನಿಟ್ಟುಸಿರು
ಕಾಡಬೇಡೆಂದು
ನಿಂತು ನಟ್ಟ ನಡು
ನಾಳೆ ಎನ್ನದಿರು
ಸುಖಪಡುವೆ ಎಂದೆಂದೂ
ಪ್ರಳಯ
ಎಲ್ಲಿ ಪ್ರಳಯ?
ಎಲ್ಲ ಸುಳ್ಳಯ್ಯ
ಆಕರ್ಷಿಸಲೊಂದು ನೆಪ
೨೦೧೨, ಓಡದಿದ್ದರೆ
ಪಾಪರ್ ಆಗುವರೇ ಪಾಪ!!
ಕೊಚ್ಚಿ ಹೋದವು ಊರು
ಕಳಚಿ ತಲೆಮೇಲಿನ ಸೂರು
ಅನ್ನ-ವಸ್ತ್ರವಿಲ್ಲದ ಪರದಾಟ
ಅವರ ಕೇಳಿ ಏನೆಂದು ವಿಧಿಯಾಟ
ಮನೆಮಂದಿಯೆಲ್ಲಾ ಕೊಚ್ಚಿಹೋದರೆ
ತೋರದೇ ಒಂದೂ ಉಪಾಯ
ಅಳಿಸಿ ಹೋದರೆ ಮನೆತನದ ಹೆಸರೇ
ಅದೇ ಅಲ್ಲವೇ ಅವರಿಗೆ ಪ್ರಳಯ
ಅಲ್ಲಿ ಅನ್ನ-ಸೂರಿಗೆ ಚೀರಾಟ
ಇಲ್ಲಿ ಪದವಿ-ಛೇರಿಗೆ ಜಗ್ಗಾಟ
ತಮ್ಮವರ ಅಗಲಿ ಕೋಡಿ ಕಣ್ಣೀರು
ಇಲ್ಲಿ ಮೊಸಳೆ ಕಣ್ಣಲಿ ಹುಸಿನೀರು
ನೆರೆಗೆ ಹೋದವರು ಕೆಲವರು
ಬರಿದೇ ಸತ್ತವರು ಹಲವರು
ಪದವಿ-ಅಧಿಕಾರದಾಸೆಯ ನಮ್ಮವರು
ಅನ್ನ-ನೀರುಬಿಡಿ, ಮಾನವತೆಯನೇ ಮರೆತರು
ತುಂಬಾ ಚೆನ್ನಾಗಿದೆ, ನಿಜ ನಾಳೆ ಎಂದರೆ ಮುಗಿತು ಹಹಹ ಬರಿ ನಾಳೆಯ ದಿನದಬಗ್ಗೆ ತಲೆಕೆಡಿಸಿಕೂಂಡು ಕೂರಬೇಕು... ಇಂದಿನದನ್ನು ವ್ಯವಸ್ಥಿತವಾಗಿ ಮುಗಿಸಿದರೆ ಸಾಕು ಜೀವನ ಸುಖವಾಗಿರುತ್ತೆ.
ReplyDeleteಪ್ರಳಯ ಬರೋದು ಬಂತು ಅದರ ಹೆಸರಲ್ಲಿ ಹಣ ಪಡೆಯೋರು ಪಡೆದರು ಅದು ಮುಟ್ಟಬೇಕಾದವರಿಗೆ ತಲುಪಿತೋ ಇಲ್ಲವೋ ಕೊಚ್ಚಿಹೋಯಿತೋ ಕಾಣೆ ಹಹಹ.. ಒಟ್ಟಲ್ಲಿ ಪರದಾಡುವವರು ಪರಿತಪಿಸುತ್ತಲಿದ್ದಾರೆ...ಇತ್ತ ರಾಜಕೀಯ ಮಂತ್ರಿಗಳು ಬೇರೆಯವರ ಕಾಲೆಳೆಯುತ್ತಾ ಕಚ್ಚಾಡುತ್ತಲಿದ್ದಾರೆ..ದುಡ್ಡು ಮಾಡಿಕೂಳ್ಳುತ್ತಲಿದ್ದಾರೆ.. ಹುಚ್ಚನ ಮದುವೇಲಿ ಉಂಡವನೇ ಜಾಣ ಎನ್ನುವಂತೆ ಹಹ ಅಲ್ಲವೆ..?
ಅಝಾದಣ್ಣ,
ReplyDeleteಬೋ ಪಸಂದಾಗಿ ಬರೆದಿದ್ದೀಯಣ್ಣ.....
ಒಬ್ರು ತಿನ್ನೋಕೆ ಅನ್ನ ಸೂರಿಗೆ ಚೀರಾಟ
ಇನ್ನೊಬ್ರು ಪದವಿ ಛೇರಿಗೆ ಜಗ್ಗಾಟ...
ಸಂದಾಗಿ ಹೇಳಿದ್ದೀಯ ಕಣಣ್ಣ.......
ತುಂಬಾ ಚೆನ್ನಾಗಿ ಹೇಳಿದ್ದಿರ ಸರ್,
ReplyDeleteಪ್ರಳಯವನ್ನು ಬಹುಷ ನಮ್ಮ ಮನಸ್ಸಿನಿಂದ ಓಡಿಸುವ ಹಠ ತೊಟ್ಟಿದ್ದಿರ ಅನಿಸುತ್ತದೆ
ಪದೇ ಪದೇ ಅದರ ಬಗೆಗಿನ ಮಾಹಿತಿಗಳು ಮುದ ನೀಡುತ್ತಿವೆ
ನಿಮ್ಮ ಮಾತು ಮನಸು ಮೇಡಮ್, ಹಿಂದು ಹಿಂದಿಗೆ ನಾಳೆ ನಾಳೆಗೆ ಇಂದು ನಮ್ಮದೇ ಚಿಂತೆ ಏತಕೆ? ಹಾಡಿನ ಸಾಲು ನೆನಪಾಗುತ್ತೆ.
ReplyDeleteಈಗಲೂ ನೆರೆಸಂತ್ರಸ್ಥರು ಪರದಾಡುತ್ತಿದ್ದಾರೆ... ನಿಜ ಕಾಳಜಿ ನಮ್ಮ ಸರ್ಕಾರದಲ್ಲಿ ಕಾಣಿತ್ತಿಲ್ಲ......ನಮ್ಮ ಹಲವಾರು ಸಂಘಟನೆಗಳಿಗೆ ಧನ್ಯವಾದ ಹೇಳಬೇಕು...
ಮಯೇಸಣ್ಣ ಒಪ್ದೆ ಕಣಣ್ಣ ನಿನ್ನ ಮಾತ...ಅಲ್ಲ ಯಾ ಪಾಟಿ ಕಿತ್ತಾಡ್ತಾವ್ರೆ..?? ನಂದು ಕುರ್ಚಿ, ನಂಗೆ ಅದ್ಕಾರ..ಅಂತ...ಅಲ್ಲಿ ನಮ್ಮಜನ ಸೂರಿಲ್ದೇ ಒದ್ದಾಡ್ತಾವ್ರೆ..
ReplyDeleteಇವ್ರಿಗೆ ಏನ್ ಯೋಳಾನೆ..?
ಗುರು, ಇಲ್ಲಿ ಕುವೈತ್ ನಲ್ಲಿಯೂ ನನ್ನ ಸ್ನೇಹಿತರು ಈ ೨೦೧೨ ಪ್ರೊಫೆಸಿ ಬಗ್ಗೆ ಕೇಳಿದರು, ಅವರಿಗೆ ಮಾಯನ್ ಬಗ್ಗೆ ವಿವರಿಸಿದಾಗ..ಹೌದಲ್ಲ .??!! ಅಂದಿದ್ದು ನೊಡಿದರೆ..ಸುಮ್ನೇ ಗಾಳೀಲೇ ಸುದ್ದಿ ಹಬ್ಬಿಸಿ ಕ್ಯಾಷ ಮಾಡಿಸಿಕೊಳ್ಳೋ ಲೆಕ್ಕಾಚಾರದ ಬಹಳ ನಿಗೂಢ ಸಂಚೇ ನಡೆದಿದೆ...ಈಗ ೨೦೧೨ ಫಿಲ್ಮ್ ಬಗ್ಗೆನೇ ನೋಡಿ.... ಎಷ್ಟೊಂದು ಪ್ರಚಾರ ಪ್ರಳಯ ಅದಿ-ಇದು ಅಂತ.....ಪಿಲ್ಮ್ ನಡೀಬೇಕಲ್ಲ ..??!!! ...
ReplyDeleteಸರ್ ಇದರಲ್ಲಿ ನಮ್ಮಗಳ ತಪ್ಪು ತುಂಬಾ ಇದೆ ಅಲ್ವ ?.. ನಾವುಗಳೇ ತಾನೆ ಇಂಥಹ ರಾಜಕಾರಿಣಿಗಳನ್ನು ಬೆಳಸಿದ್ದು... ನಾವು ತಾನೆ ಇಂಥಹ ಅಧಿಕಾರಿಗಳನ್ನು ಬೆಳಸಿದ್ದು... ನಮ್ ಕೆಲಸ ಆಗಬೇಕೆಂದು ಅಲಲ್ಲಿ ಹಣ ಕೊಟ್ಟು ರುಚಿ ಹಿಡ್ಸಿದ್ದು.. ನಾವು ತಾನೇ ಕೆಲವು ಬಾರಿ ಅವಸರ ಅವಸರವಾಗಿ ಸಿಗ್ನಲ್ ಬ್ರೇಕ್ ಮಾಡಿ ಟ್ರಾಫಿಕ್ ಪೋಲಿಸ್ ಗೆ ಫೈನ್ ಬೇಡ ಅಂತ ೫೦ ರೂ ಗಳ 'ಕಾನೂನು' ಬೆಳಸಿದ್ದು... ನಾವು ತಾನೇ ವೋಟು ಹಾಕಬೇಕಾದ ಟೈಮ್ನಲ್ಲಿ ಒಂದು ರಜಾ ಸಿಕ್ಕಿತು ಅಂತ ಆರಾಮವಾಗಿ ಕೂರೋದು... ವೋಟು ಆದಮೇಲೆ ನಮ್ಮಗಳ ಮದ್ಯೇನೆ ಜಗಳ ತಂದಿಟ್ಟು ಎಲ್ಲರನ್ನು ಸಮಾದಾನ ಮಾಡುವ ಕಲೆ ಅವರಿಗೆ ತಾನೆ ಗೊತ್ತಿರೋದು .. ನಾವ್ ತಾನೆ ಪಕ್ಕದಮನೇಲಿ ಏನೆ ಅದ್ರು ಗೊತ್ತು ಗೊತ್ತಿಲ್ಲದೇ ಇರುವವರು... ನಾವು ತಾನೆ ರಸ್ತೆನಲ್ಲಿ ಯಾರಿಗದ್ರು ಆಕ್ಸಿಡೆಂಟ್ ಅದ್ರು ಮಾನವೀಯತೆ ತೋರ್ಸಿಲಿಕ್ಕು ಹಿಂದೆ-ಮುಂದೆ ನೋಡುವವರು... ನಾವ್ ತಾನೆ ನಮ್ಮ ರಾಜಕಾರಿಣಿಗಳು ಅಪರೂಪಕ್ಕೆ ಒಮ್ಮೆ ಒಳ್ಳೆ ಕೆಲಸ ಮಾಡಿದ್ರೆ ಏನೋ ತಪ್ಪು ಮಾಡಿದವರಹಾಗೆ ಕಾಲ್ ಎಳಿಯೋದು... ನೋಡಿ ಎಲ್ಲಿಗೆ ಬಂದು ಮುಟ್ಟಿದೆ ಪರಿಸ್ಥಿತಿ...
ReplyDeleteಮೊದ್ಲು ನಮ್ಮ ಪಾರ್ಲಿಮೆಂಟ್ನಲ್ಲಿ ಮಾತು ಆಗ್ತಾ ಎಲ್ಲರೂ ಕಿವಿಗೊಟ್ಟು ಕೇಳ್ತಾ ಇದ್ದರು... ಇಗಲೂ ನೆನಪಿದೆ ನಮ್ಮ ತಂದೆ ಎಸ್ಟೋ ಬಾರಿ ಹೇಳಿದ್ರು ಹೊರಗಡೆ ಹೋಗಿ ಅದ್ಕೋ ಗಲಾಟೆ ಮಾಡಬೇಡ.. ಪಾರ್ಲಿಮೆಂಟ್ನ ಚರ್ಚೆ ಕೇಳಬೇಕು ಅಂತ... ಈಗ ಲೈವ್ ಬರುತ್ತೆ ಅಂತ ನಮ್ಮಗೆ ಹೆಸರು ಬರುತ್ತೆ ಅಂತ ಹೊಡೆದಾದ್ಕೊಲಿಕ್ಕೆ ಸುರು.. ಹ್ಹ ಹ್ಹ ಹ್ಹ.. ಏನ್ ವಿಪರ್ಯಾಸ... ಹೇಳೋವರಿಲ್ಲ ಕೇಳುವವರಿಲ್ಲ.. ನೋಡಿ ಅಂದು ಜುಲೈ ೨೬ ನಮ್ಮ ವೀರ ಯೋದರು ಕರ್ಗಿಲ್ನಿಂದ ನಮ್ಮ ಶತ್ರುಗಳನ್ನು ವಿರಾವೇಶದಿಂದ ಹೋರಾಡಿ ಓಡ್ಸಿದ್ರು... ಆ ದಿನ ಅವಗಿನ ಸರಕಾರ ವಿಜಯ ದಿನ ಅಂತ ಹೇಳಿ ಇನ್ನು ಮುಂದೆ ಪ್ರತಿ ವರ್ಷ ಆಚರಿಸುವ ಅಂತ ಹೇಳ್ತು.. ಆ ಸರಕಾರ ಹೋಯ್ತು ಹೊಸ ಸರಕಾರ ಬಂತು ವಿಜಯ ದಿನ ಬೇಡ ಅಂತ ಹೇಳಿದ್ರು... ಕೊನೆ ಪಕ್ಷ ನಮ್ಮ ರಾಜಕರಿಣಿಗಳಿಗೆ ದೇಶಕ್ಕಾಗಿ ಹೋರಾಡುವ ಸೈನ್ಯದ ವಿಷಯದಲ್ಲಿ ಮುಗುತುರಿಸದೆ ತುರಿಸದೆ ಇರಲಿಕ್ಕೆ ಆಗೋಲ್ವಾ..? ಇಗ ಮಾಡಬೇಕಾಗಿರೋದು 'ಆಪರೇಷನ್'... ನಮ್ಮ ರಾಜಕಾರಿಣಿಗಳಿಗೆ... ಅಲ್ವ..ಹ್ಹ ಹ್ಹ ಹ್ಹ... ನಮ್ಮ ಸಿಸ್ಟಮ್ ನ್ನು ನಾವೇ ಸರಿಮಾಡಬೇಕು...ಏನ್ ಅಗೊತ್ತೆ ಅದನ್ನು ಮಾಡೋಣ... ಇಂದು ಒಬ್ಬ... ನಾಳೆ ಇಬ್ಬರು... ಮುಂದೊಮ್ಮೆ ಇಡೀ ದೇಶ!... ಏನಂತೀರ?
ReplyDeleteಪ್ರಳಯ ಎಲ್ಲಿ ಆಗಬೇಕೋ ಅಲ್ಲಿ ಅದ್ರೆನೆ ಒಳ್ಳೇದಲ್ವ..? ನೀವು ಬರೆದಿರುವ ಕೆವಿತೆ ಪರಿಸ್ಥಿತಿಗೆ ಹಿಡಿದ ಕನ್ನಡಿ... ಸೂಪರ್..... ಸರ್ !
ನಿಮ್ಮವ,
ರಾಘು.
ರಾಘು,
ReplyDeleteನಿಮ್ಮ ಕಮೆಂಟಿಗೊಂದು ಸಲಾಮ್....
ನಿಜ....ಈ ನಿಟ್ಟಿನಲ್ಲಿ ಎಲ್ಲರೂ ಕಲಿಯಬೇಕು...
ಧನ್ಯವಾದಗಳು....
ಪ್ರಳಯದ ತಪ್ಪು ಕಲ್ಪನೆಯನ್ನ ತಿದ್ದಿ ತಿಳಿ ಹೇಳುವ ಬಗೆ ಸೊಗಸಾಗಿದೆ ಭೈಯ್ಯಾ
ReplyDeleteರಾಘು, ಬಹಳ ಚನ್ನಾಗಿ ಎಳೆ-ಎಳೆಗಳನ್ನು ಬಿಡಿಸಿ ನಮ್ಮ ಮುಖಕ್ಕೆ ಕನ್ನಡಿ ಹಿಡಿದಿದ್ದೀರಿ, ನಿಜ..ನಮ್ಮನ್ನು ನಾವು ನಿಂದಿಸಿಕೋಬೇಕು...ನಾನೊಬ್ಬ ಮಾಡಿದರೆ ಏನಾಯ್ತು..ಬೇರೆಯವರು ಮಾಡ್ಬೇಕಲ್ಲ..ಎಮ್ದುಕೊಂಡೇ ಪ್ರತಿಯೊಬ್ಬರೂ ಮಾಡಿದರೆ...ಎಲ್ಲಿ ಕೊನೆ..ಅಥವಾ ಎಲ್ಲಿದೆ ಆರಂಭ...? ನಿಮ್ಮ ಮನಸ್ಸಿನ ದುಗುಡ, ನಮ್ಮ ಮೇಲೆ ನಮ್ಗೇ ಇರುವ ಬೇಸರ...ಹೌದು..ಇದು ಎಲ್ಲರಿಗೆ ಮನದಟ್ಟಾದರೆ...ಎಷ್ಟು ಚನ್ನ...? ಧನ್ಯವಾದ ನನ್ನ ಲೇಖನಕ್ಕೆ ಒಂದು ಚಿಂತನಾ ಆಯಮವನ್ನೇ ಕೊಟ್ಟಿರಿ ನಿಮ್ಮ ಪ್ರತಿಕ್ರಿಯೆ ಮೂಲಕ
ReplyDeleteಸೀತಾರಂ ಸರ್, ಧನ್ಯವಾದ.....ನಾನು ನಿಮ್ಮ ಹಾರುವ ಕಪ್ಪೆ ಲೇಖನಕ್ಕೆ ಪ್ರತಿಕ್ರಿಯಿಸುವಾಗ...ಹಾರುವ ಮೀನಿನ ಬಗ್ಗೆ ಹೇಳಿವಿದನ್ನು ಮರೆತೆ...ಹೌದು ಈ ಮೀನುಗಳು ಸಮುದ್ರದ ಮೇಲ್ಮೈ ಮೇಲೆ-ಗಾಳಿಯಲ್ಲಿ ಸುಮಾರು ೨೦-೩೦ ಮೀಟರ್ ದೂರವನ್ನು ಕ್ರಮಿಸಬಲ್ಲವು.....!!! ಇಲ್ಲಿ ನಮ್ಮ ರಾಜಕಾರಣಿಗಳು ಕಪ್ಪೆ ಗಳ ವತಗುಟ್ಟುವಿಕೆ, ಊತಿಕ್ಯಾತನ ಬಣ್ನಬದಲಾವಣೆ, ಹಾವಿನ ವಿಷ, ಗುಳ್ಳೆನರಿಯ ಠಕ್ಕತನ...ಇವುಗಳ ಬಗ್ಗೆ ಬರಿಯಿರಿ...
ReplyDeleteಮಹೇಶ್, ನಿಮ್ಮ ಅನಿಸಿಕೆ ಮತ್ತು ಪೂರಕ ಸಹಾಯಕ್ಕೆ ಧನ್ಯವಾದ
ReplyDeleteರಂಜು, ಪ್ರಳಯದ ಚಿತ್ರ ನೋಡಿದೆಯಾ? ೨೦೧೨..??
ReplyDeleteಹೌದು ತಮ್ಮ ಜೀವನದ ಪ್ರಳಯವನ್ನು ಅನುಭವಿಸಿದವರು ಈಗಿಲ್ಲ ಆದರೆ ಅದನ್ನು ಸಮೀಪದಿಂದ ಕಂಡವರಿಗೆ ಅದೊಮ್ದು ಮಹಾನ್ ದುರಂತ...ಹೋಗಿ, ನೋಡಿ ಅನುಭವಿಸಿದವರಿಗೆ, ನೈಸರ್ಗಿಕ ವಿಪತ್ತು, ಕೇಳಿಯೂ ನೋಡಿಯೂ ಇರದವರಿಗೆ..ಹೀಗೊಂದು ಆಯ್ತಂತೆ..ಅಂತ..ಅಂತೆ-ಕಂತೆಯ ಕಥೆ....ಇದೇ ಅಲ್ಲವಾ ಪ್ರಳಯ..ಯಾರ್ಯಾರಿಗೆ ಹೇಗೆ ಎನ್ನುವುದು...??
ಸರ್,
ReplyDeleteಪ್ರಳಯದ ೨೦೧೨ ಚಿತ್ರ ನೋಡಿದೆ. ತುಂಬಾ ಚೆನ್ನಾಗಿ ತೆಗೆದಿದ್ದಾರೆ. ತಾಂತ್ರಿಕವಾಗಿ ನನಗಿಷ್ಟವಾಯಿತು. ಹೊರಪ್ರಪಂಚದಲ್ಲಿ ಏನೆಲ್ಲಾ ನಡೆಯುತ್ತಿದ್ದರೂ ನಮ್ಮ ಯಡಿಯೂರಪ್ಪ ಕೂತು ತಿನ್ನುತ್ತಿರುವ ಚಿತ್ರ ಅದಕ್ಕೆ ತಕ್ಕಂತೆ ನಿಮ್ಮ ಬರಹ ಎಲ್ಲಾ ಚೆನ್ನಾಗಿದೆ..
ಶಿವು, ನಾನು ೨೦೧೨ ನೋಡಬೇಕೆಂದುಕೊಂಡಿದ್ದೇನೆ...ನೋಡಿ ನಂತರ ತಿಳಿಸುತ್ತೇನೆ. ಆದ್ರೆ ಈ ಚಿತ್ರದ ಮಾರಾಟ ತಜ್ಜ್ನರ ಕುತಂತ್ರವೇ ೨೦೧೨ ರ ಊಹಾಪೋಹ ಅಂತ ಅಮೇರಿಕನ್ನರ ಅಂಬೋಣ...ಇದ್ದರೂ ಇಅರಬಹುದಲ್ಲವೇ..??
ReplyDeleteಜಲನಯನ ಅವರೇ ,
ReplyDeleteತುಂಬ ಚೆನ್ನಾಗಿದೆ ನಿಮ್ಮ ಕವಿತೆ .. :)
ಮಂಜುಶ್ವೇತೆಯವರಿಗೆ ಧನ್ಯವಾದ ನನ್ನ ಬ್ಲಾಗಿನತ್ತ ಮಂಜೊನ ತಂಪನ್ನು ಎರಚಿ, ಮನ ಮುದಗೊಳಿಸಿದ್ದಕ್ಕೆ...ನಿಮ್ಮ ಪ್ರತಿಕ್ರಿಯೆಗೂ ನಮನ.
ReplyDeletetoo good ...nice presentation witty thoughts .... keep writing ....
ReplyDeleteReally good one sir...
ReplyDeleteಚೇತನಾ (ಹೆಗ್ಡೆ ಲಂಡನ್ ನಿಂದ..ಅಲ್ವಾ??) ..ಧನ್ಯವಾದ ಬಂದುದಕ್ಕೆ ಗೂಡಿಗೆ..ಮತ್ತೆ ಪ್ರತಿಕ್ರಿಯೆಗೆ...ನನ್ನ ಜಲನಯನ ವನ್ನೂ ನೋಡಿ..ಒಮ್ಮೆ,,,
ReplyDelete