Saturday, July 23, 2011

ಒಂದು ಅಂತರ್ಜಾಲದ ಚಿತ್ರದಿಂದ ಪ್ರೇರಿತ ಕವನ (Inspired by a Foto from the Net..)

Wednesday, July 13, 2011


ನಿನಗೊಂದು ಪ್ರಶ್ನೆ


ಕೊಲ್ಲುವ ನಿನಗೆ ಕೊಲೆಯೇ ಧರ್ಮ
ಮಾನವ ಜೀವಕೆಲ್ಲಿದೆ ನಿನ್ನಲಿ ಬೆಲೆ?
ಹೆತ್ತ ಕರುಳನ್ನೇ ಕಿತ್ತು ತಿನುವವ ನೀನು
ಮಹಾತ್ಮರ ಮಾತಿಗೆಲ್ಲಿದೆ ನೆಲೆ?

ಮನಸು ಮೌನವಾಗಿ ರೋದಿಸುತಿದೆ..
ತಿಳಿಯದಾಗಿದೆ ಹರಿವ ರಕ್ತ ಬೆರೆತಿದೆ
ನಿನ್ನವನದ್ದೋ ನಿನಗಾಗದವನದ್ದೋ
ಜೀವ ಭಯಕೆ ತಪ್ಪಿ ಓಡಿದವನದ್ದೋ?

ಏನೂ ಅರಿಯದ ಕಂದಮ್ಮನ ಅಳು
ಅಮ್ಮನ ರಕ್ತವ, ಅಣ್ಣನ ದೇಹವ
ತನ್ನವರ ಕಳಕೊಂಡವರ ಗೋಳು
ಅರಿವೇ ಇಲ್ಲವೇ ನಿನಗೆ ನೋವ ಭಾವ?

ಇದು ಅಲ್ಲ ಧರ್ಮ ಯಾರೂ ಹೇಳಲಿಲ್ಲ
ಪ್ರವರ್ತಕ ನೊಂದರಿಯ ವಿಚಾರಿಸಿದನಲ್ಲ
ಯಾರಿಂದ ಪ್ರೇರಿತ ಯಾರು ನಿನ್ನ ಗುರು?
ಕೊಲ್ವೆಯಾ ನಿನ್ನ ಕಂದನ ತಂದರೆ ಎದುರು?

Thursday, July 7, 2011

ಪುಟ್ಟಿಯ ವಿಸ್ಮಯ

(ಚಿತ್ರ ಕೃಪೆ: ಶ್ರೀ ಆನಂದ್ ಮತ್ತು ಶ್ರೀಮತಿ ಸೌದಾಮಿನಿ)

ಪುಟ್ಟಿಯ ವಿಸ್ಮಯ

ಓ..ಓ...ಅಲ್ನೋಡೇ ಅಮ್ಮಾ... ಅಬ್ಬಾ...!!!
ಎಂತಾ ಸಾಲು..!! ಕೆಂಪಗೆ ಒಂದರ ಹಿಂದೊಂದು
ನಾವು ಪ್ರೇಯರ್ ಗೆ ಸ್ಕೂಲಲ್ಲಿ ಹೋಗೋ ಹಂಗೆ
ಸಕ್ರೆ ತುಂಡು ಹಿಡ್ಕಂಡು..ಎಂತ ಡಿಸಿಪ್ಲಿನ್ನು ಅಲ್ಲಾ...??

ಆಮೇಲೆ...ಅಲ್ಲಿ ನೋಡು ಚಿಕ್ಕ ಮರಿ ಕಷ್ಟಪಡ್ತಿದೆ..
ಅರೆ,,,ಬಂತು..ಅದರ ಅಣ್ಣ ಅನ್ಸುತ್ತೆ..ಹೆಲ್ಪ್ ಮಾಡೋಕೆ
ಹಹಹ ಅಲ್ಲಿ..ಅಲ್ಲಿ..ಓ...ಈಗ ಕುಶಿ ಮರಿಗೆ ಕಾಣುತ್ತೆ
ಹಿಂದೆ..ಅಯ್ಯೋ ಗಡವ ಬತ್ತಿದೆ..ಅಯ್ಯೋ ..
ಡ್ಯಾಶ್ ಆಯ್ತು ..ಇಲ್ಲ ಇಲ್ಲ...ಪಕ್ಕ ಹೋಯ್ತು...

ಅಮ್ಮ ಅದು ಯಾರು...?? ದೊಡ್ಡದು..
ಅಪ್ಪನ್ ಥರ ಡುಮ್ಮ..ಮರಿನ ಮೇಲೆ ಎತ್ಕೊಂಡ್ತು
ಹೋಗ್ತಾ ಇದೆ,,,ಹಹಹ ನನ್ನ ಅಪ್ಪ ಎತ್ಕೊಳ್ಳೋ ಥರಾ...
ಎಲ್ಲಾ ಅದಕ್ಕೆ ದಾರಿ ಬಿಡ್ತಾ ಇವೆ...ಅದು ..ರಾಜಾನಾ..??

ಓ..ಓ..ಅಲ್ಲಿ ನೋಡೇ ಅಮ್ಮಾ... ಕ್ವೀನು...
ನಂಗೊತ್ತು..ನಿನ್ ತರಾ ಕ್ಯೂಟು...ರೆಡ್ಡು..
ಅರೆ ..ರಾಜಾನೂ ದಾರಿ ಬಿಡ್ತು ಅದಕ್ಕೆ...
ಎಂಥಾ ಡೌಲು..ಅಲ್ಲಾ...?? ಕುಶಿ ಆಯ್ತು
ಹೌದೂ.. ಅಮ್ಮಾ ..ಎಲ್ಲಿಗೋಗ್ತಿದೆ ಇರುವೆ ಸಾಲು???