(ಚಿತ್ರ ಕೃಪೆ: ನೆನಪಿನ ಸಾಲು ಬ್ಲಾಗೊಡೆಯ ಪ್ರವೀಣ್)
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಗದ್ದಿ ತಾಕ್ಕೆ
ಮನ್ಯಾಗ್ ಇದ್ಬಿಡು
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ಒಲೀತಾಕ್ಕೆ
ಇದ್ದು ಬಿಡ್ ದೇವ್ರ ಮನ್ಯಾಗ್
ಜಪ ದ್ಯಾನ ಮಾಡ್ಕಂಡ್
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ನೀ ಬ್ಯಾಡವ್ವ
ಹೋಗಬ್ಯಾಡೇ ನೀ ಹೊಳೀ ದಂಡ್ಯಾಕ್ಕೆ
ಬಟ್ಟೆ ಬರೆ ಒಗೀಬ್ಯಾಡ
ನಡ ಇಡ್ಕ್ಂಡೀತು ಮುಪ್ನಾಗೆ
ಹಾಕಾಣಿಲ್ಲೇನು ಅಮ್ಮಯ್ಯ
ಮುದ್ದೆ-ಸಾರು ತಾಟ್ಗೆ...?
ಅವ್ವವ್ವ ಎಲ್ಲಾಕ್ಕೂ ಹೂಂ
ಆದ್ರೆ ನಿನ್ನುತ್ತರ..!!!
ಏಳ್ಬಿಡು ಅಮ್ಮಯ್ಯಂಗೆ
ತೆಗ್ದಿಡು ನನ್ ತಾಟ್ ನಾನ್ ಸತ್ಮ್ಯಾಕ್ಕೆ
ಯಾಕಂದ್ರೆ..ಈಟ್ ಮಾತ್ರಾನೂ
ಆಕಾಣಿಲ್ಲ ಪುಟ್ನೆಂಡ್ತಿ
ಮುದ್ದೆ-ಸಾರು ನಿನ್ತಾಟ್ಗೆ...?
ಸೊಸೆ ಕಾಟ ತಡೆಯಲಾಗದೆ ಹೋಗುತ್ತಿದ್ದೀಯಾ ಅವ್ವ ಗದ್ದಿ ತಾಕ್ಕೆ.....
ReplyDeleteಚೆನ್ನಾಗಿದೆ ಶೈಲಿ....
ಮುದಿ ವಯಸ್ಸಿನ ಅವಸ್ಥೆಯನ್ನು ಬಹು ಚೆನ್ನಾಗಿ ಕವನಿಸಿದ್ದೀರಿ, ಜಲನಯನ. ಕನ್ನಡ ಭಾಷೆಯ ಶಿಷ್ಟರೂಪ ಹಾಗು ಗ್ರಾಮ್ಯರೂಪಗಳ ಮೇಲಿರುವ ನಿಮ್ಮ ಕೌಶಲ್ಯ ಮೆಚ್ಚುವಂತಹದು.
ReplyDeleteಮಹೇಶ್ ನನಗಂತೂ ಅಳ್ಳಿ ಬಾಸೆ ಬೋ ಅತ್ರ ಅನ್ನಿಸ್ತೈತೆ ಮನ್ಸಿಗೆ...ಒಂತರಾ ಸರಾಗ ಅರಿಯೋದು....
ReplyDeleteಸುನಾಥಣ್ಣ ...ನನ್ನ ಚಿಕ್ಕ ಪ್ರಯತ್ನ ಅಷ್ಟೇ..ಇದು ನಿಮ್ಮಂಥ ಹಿರಿಶ್ರೇಣಿ ಲೇಖಕರಿಗೆ ಮೆಚ್ಚುಗೆಯಾಗಿದೆ ಅಂದರೆ ಅದಕ್ಕೆ ನಿಮಗೆ ನನ್ನ ಮೇಲೆ ಇರೋ ಪ್ರೀತಿವಿಶ್ವಾಸ ಹೆಚ್ಚು ಕಾರಣ ಅಂದ್ಕೋತೀನಿ...ಧನ್ಯವಾದ...
ReplyDeleteಆಜಾದು..
ReplyDeleteಆಡು ಭಾಷೆಯಲ್ಲಿ ಬರೆದದ್ದು..
ಅಮ್ಮನ ಪ್ರೀತಿ .. ಭಾವ ಸೊಗಸಾಗಿ ಮೂಡಿ ಬಂದಿದೆ...
ಆ ಭಾಷೆ ( ಮಾತು) ಹೇಗೆ ಕಲಿತೆ ಮಾರಾಯಾ...?
ಧನ್ಯವಾದ ಪ್ರಕಾಶೂ...ಇದು ಹಳ್ಳಿಲಿ ಹುಟ್ಟಿ ಹಳ್ಲಿಲಿ ಬೆಳ್ದ ಜೀವ ಕಣಣ್ಣೋ..ಅಳ್ಳಿ ಬಾಸೆ ಬುಡು ಅಂದ್ರೆ ಬುಡಾಕಾದದ್ದಾ...ಯೋಳು ವಸಿ....ಹಹಹಹ
ReplyDeleteಆಡುಭಾಷೆಯಲ್ಲಿ ಹೆಣೆದ ಭಾವನಾತ್ಮಕ ಚಿತ್ರಣ - ಅಭಿನ೦ದನೆಗಳು ಅಜಾದ್ ಸರ್.
ReplyDeleteಅನ೦ತ್
ಧನ್ಯವಾದ ಅನಂತ ಸರ್...ಆಡು ಭಾಷೆ ಮನಸಿಗೆ ಮನೆಗೆ ಹತ್ತಿರವಾದದ್ದು ಅಲ್ವಾ...??
ReplyDeleteNice !
ReplyDeleteವಿ.ಅರ್.ಬಿ.ಸರ್...ಥ್ಯಾಂಕ್ಸ್ ....
ReplyDelete