Wednesday, April 6, 2011

ಚಿತ್ರ ಕೃಪೆ: ಮಿತ್ರ ಪ್ರಕಾಶನ ಬ್ಲಾಗ್ (ಛಾಯಾ ಚಿತ್ತಾರ)

ಮೇಘವಾಗಲು ಸಾರ್ಥಕ ಇಳೆಗೆ

ಮೇಘಕೊಂದು ಆಗಲಿದೆ ಮೇಘದ ಸವಾಲು
ಕಪ್ಪು ಮೋಡ ಕೇಳಿತು ಬಿಳಿಮೋಡದ ಅಹವಾಲು
ನೀನು ತುಂಬಿಕೊಂಡು ಕಪ್ಪು ನಾನು ಬರಿದೇ
ಓಲಾಡುತಿರುವೆ ಹಗುರಾಗಿ ಒಂದೆಡೆ ನಿಲ್ಲದೇ

ನೀನಿಲ್ಲೋ ಅಲ್ಲೋ ಎಲ್ಲೋ ಒಂದೆಡೆ ಸುರಿವೆ
ನಾ ಹೀಗೇ ಗಾಳಿಹೋದೆಡೆ ನಿಲ್ಲದೇ ಅಲಿವೆ
ಹೇಳಿ ಬಿಡು ಬಿಟ್ಟು ಕೊಡು ಗುಟ್ಟನಿಂದು ನನಗೆ
ನಾನೂ ನಿನ್ನಂತೆ ಹೇಗಾಗಲಿ ಸಾರ್ಥಕ ಇಳೆಗೆ

ಮನದುಗುಡ ಬಿಚ್ಚಿ ಕಪ್ಪು ಹೇಳಿತು, ಬಿಳಿಯಾ
ಅಯ್ಯೋ ತುಂಬಿದೆ ಕಲ್ಮಶ ನನ್ನಲಿ ಗೆಳೆಯಾ
ಮನುಜ ಬಲು ಲಾಲಸಿ ಬಿಡಲಿಲ್ಲ ನನ್ನನೂ
ಬಿಳುಪಾಗಿರುವೆ ಹಾಗೇ ಇರು ಬಿಡವೊಲ್ಲ ನಿನ್ನನೂ

ನನಗೊಮ್ಮೆ ಹೋಗಬೇಕಿದೆ ನೆಲಕೆ ಕೆಳಗೆ
ಹನಿಯಾಗಿ ತುಂತುರಿಸಿ ಹನಿಸಿ ಅನ್ನಬೆಳೆಗೆ
ಕಪ್ಪಾದರೂ ಪರವಿಲ್ಲ ಹರಿದು ಸೇರಿ ಜಲಾಶಯ
ಬಿಸಿಗೆ ಧಗೆಗೆ ತಣಿಸಿ ಆವಿಯಾದರೂ ಇಲ್ಲ ಭಯ

ನಿಸರ್ಗ ನಿಯಮವಿದು ದಾಳಗಳು ನಾನು ನೀನು
ಹೂವೆಂದು ಮುಟ್ಟದೇ ಮಧುಹೀರದೇ ಜೇನು?
ಸೊಳ್ಳೆಯ ಕಪ್ಪೆ ಅದನು ಹಾವು ಮೇಲಿಲ್ಲವೇ ಹದ್ದು?
ಜೀವಿಗಳು, ಬಾಳುವುದು ನಿಯಮ ಅವಕಿಲ್ಲವೇ ಜಿದ್ದು?


28 comments:

  1. sundara kavana sir...
    mangaLuralli tumbaa bisilide eega...
    svalpavaadarU maLe barali endukoLLuttidde...
    nimma kavana Odi maLe bandashTe khushiyaayitu.......

    tumbaa dhanyavaada...

    ReplyDelete
  2. ಆಜಾದೂ..
    ಚೆನ್ನಾಗಿದೆ ನಿನ್ನ ಶಬ್ಧಗಳ ಜಾದು...

    ಮಸ್ತ್ ಸಾಲುಗಳು... ಜೈ ಹೋ !!

    ReplyDelete
  3. ಜಲನಯನ,
    ಸೊಗಸಾದ ಚಿತ್ರಕ್ಕೆ ಸೊಗಸಾದ ಕವನವನ್ನು ರಚಿಸಿರುವಿರಿ, ನಿಮಗೆ ಹಾಗು ಪ್ರಕಾಶರಿಗೆ ಅಭಿನಂದನೆಗಳು.

    ReplyDelete
  4. ದಿನಕರ್ ಧನ್ಯವಾದ..ಹೋಗ್ಲಿ ಹಬ್ಬ ಹ್ಯಾಗಾಯ್ತು? ಮಂಗಳೂರಲ್ಲಿ ಮಳೆಗೆ ಇನ್ನೂ ಟಾಯಿಮ್ ಇದೆ ಸರ್...ಹಹಹ ಆದ್ರೂ ನನ್ನ ಬ್ಲಾಗ್ ಲೇಖನಕ್ಕೆ ತಂಪಿನ ಹನಿ ಮೊದಲು ಬಿದ್ದದ್ದು ನಿಮ್ಮದೇ...

    ReplyDelete
  5. ಪ್ರಕಾಶೂ ನಿನ್ನ ಛಾಯಾಚಿತ್ತಾರ ನೋಡಿ ಒಂದೆರಡು ಸಾಲು ನಿನ್ನ ಕವನ ಮತ್ತು ಚಿತ್ರಕ್ಕೆ ಹಾಕಲು ಕೂತವನಿಗೆ ಹೊಳೆದದ್ದು ಈ ಕವನ...ಇದಕ್ಕೆ ಪ್ರೇರಣೆ ನಿನ್ನ ಚಿತ್ರ...ಧನ್ಯವಾದ...ದೋಸ್ತಾ...

    ReplyDelete
  6. ಸುನಾಥಣ್ಣ...ಎಂದಿನಂತೆ ಬಂದ ನಿಮ್ಮ ಆಶೀರ್ವಾದ ಅಭಿಮಾನದ ಪ್ರತಿಕ್ರಿಯೆಗೆ...ನನ್ನ ಧನ್ಯವಾದ..

    ReplyDelete
  7. Aajad Sir.....

    Sundara saalugalu....

    ನೀಲಿ ಬಾನಂಗಳದಿ ಕಾರ್ಮೋಡ ಕವಿದಿದೆ
    ಮೇಘಗಳ ಭಾರಕ್ಕೆ ಗಗನವದು ಬಾಗಿದೆ
    ಸುತ್ತ ಮುತ್ತಲೂ ಎಲ್ಲಾ ಕತ್ತಲೆಯು ಕವಿದಿದೆ
    ಹಗಲು ಹೊತ್ತು ಕೂಡ ಇರುಳೆನಿಸಿ ಬಿಟ್ಟಿದೆ

    ಆಗಿಹುದು ಢಿಕ್ಕಿ ಮೋಡಕ್ಕೆ ಮೋಡ
    ನೋವಲ್ಲಿ ಬಿಕ್ಕಿ ಬಿಕ್ಕಿ ಅಳುತಿಹುದ ನೋಡ
    ಕಣ್ಣೀರ ಧಾರೆ ಹರಿದಿಹುದು ಧರೆಗೆ
    'ಮಳೆ' ಎನ್ನುವೆವು ಈ 'ಕಣ್ಣೀರ ಕೋಡಿ' ಗೆ...

    ReplyDelete
  8. ಅಶೋಕ್ ನಿಮ್ಮ ಕವನ ಸೂಪರ್ ಪ್ರತಿಕ್ರಿಯೆ ಒಂಥರಾ ವಿಭಿನ್ನ,,,ಇದನ್ನ ಬಜ್ ನಲ್ಲಿ ಶೇರ್ ಮಾಡಿದ್ದೀನಿ (ನಿಮ್ಮ ಅನುಮತಿ ಇದೆ ಎಂದುಕೊಂಡು)...ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  9. ಮಹಾಬಲರೇ ಧನ್ಯವಾದ ನಿಮ್ಮ ಪ್ರೋತ್ಸಾಹಕ್ಕೆ...

    ReplyDelete
  10. i wil salute for this poem..
    nanage tumba mechchigeyaayitu.. adhbut padagal jodane mattu arthagalantu aaha tumba manadattuva saalugalu..

    kappu modake bili moda helitu
    besaragolladiru naa ninn iniya
    naavibbaru modagale bhedaveke illi
    naaniruvaag neeneke onagid balli
    baa saniha bega iniya
    naavu ondaagi dharege iliyuva
    bhoomi meliruva dhveshavemb (kappu moda) benkige biddu
    preetiyannu maatra jeevisalu biduva..
    hegide sir modagala pratiyuttar ?????

    ReplyDelete
  11. ಕೀರ್ತಿ, ಏನು ಹೇಳಲಿ ನಿಮ್ಮ ಅಭಿಮಾನಕೆ .. ಎರಡು ಮಾತಿಗೆ ಸಾಲುಗಳ ರೂಪದ ಕವನಿಸಿ ಪ್ರತಿಕ್ರಿಯಿಸಿದ ಬಗೆಗೆ..ಮೋಡಗಳ ಪ್ರೀತಿಗೆ ಪ್ರೀತಿಯ ಮಳೆಗೆ ಇಳೆಗೆ ತಂಪು ಮನಕೆ ಇಂಪು....ಧನ್ಯವಾದಗಳು...

    ReplyDelete
  12. nivu pratikriyisa parige nann hrutpoorvak dhanyavaadgalu sir..
    nimma kavanakkint nann saalugalu bele kadime allave.. irali bidi abhinandanegalu...

    ReplyDelete
  13. ultimate lines & wordings...!!! ತುಂಬಾ ತುಂಬಾ ಚೆನ್ನಾಗಿದೆ ಸರ್... ಓದುತ್ತ ಕಳೆದು ಹೋಗಿದ್ದೆ...!!!

    ReplyDelete
  14. ಕೀರ್ತಿ..ಎಲ್ಲಾ ಕವನಗಳೂ ತಮ್ಮೊಳಗೇ ತಮ್ಮದೇ ಶಕ್ತಿಯಲ್ಲಿ ಮೆರೆವ ಅಣುಗಳು...ಇವುಗಳಲ್ಲಿ ಕಡಿಮೆ ಹೆಚ್ಚಿಲ್ಲ...ಆಯ್ಯಾ ಮನೋಭಾವಕ್ಕೆ ಮನಸ್ಥಿತಿಗೆ ಅನುಗುಣವಾಗಿ ಬದಲಾಗುತ್ತವೆ...ಅದನ್ನೇ ಭಾವ ಎನ್ನುವುದು...ಹಾಗಾಗಿ ..ಜೈ ಹೋ ನಿಮ್ಮ ಕವನಕ್ಕೂ...ಧನ್ಯವಾದ...ಮತ್ತೊಮ್ಮೆ...ನಿಮ್ಮ ಅಭಿಮಾನಕ್ಕೆ.

    ReplyDelete
  15. ಕಾವ್ಯಾ...ಧನ್ಯವಾದ ನಿಮ್ಮ ಅಭಿಮಾನದ ಪ್ರತಿಕ್ರಿಯೆಗೆ...ನನ್ನ ಜಲನಯನಕ್ಕೆ ಸ್ವಾಗತ...ನಾನೂ ಬಂದೆ ನಿಮ್ಮ ಬ್ಲಾಗಿನತ್ತ.

    ReplyDelete
  16. ಅಜಾದ್,
    ಚಿತ್ರವನ್ನು ನೋಡಿ ಕವನವನ್ನು ಬರೆಯುವ ನಿಮ್ಮನ್ನೆಲ್ಲ ಕಂಡ ನನಗೆ ಹೊಟ್ಟೆಕಿಚ್ಚು ಬರುತ್ತದೆ. ನನಗೆ ಆ ರೀತಿ ಬರೆಯಲು ಆಗುತ್ತಿಲ್ಲ. ಸುಂದರ ಚಿತ್ರಕ್ಕೆ ಚೆಂದದ ಕವನ ಕೊಟ್ಟಿದ್ದಕ್ಕೆ ಧನ್ಯವಾದಗಳು.

    ReplyDelete
  17. ಗುರು, ಧನ್ಯವಾದ..ನಿಮ್ಮ ಪ್ರತಿಕ್ರಿಯೆಗೆ...

    ReplyDelete
  18. ಶಿವು, ಮೊದಲಿಗೆ ಚಿತ್ರಗ್ರಹಣೆ ಮಾತ್ರ ಆಗೋದು ಅಂದ್ಕೊಂಡ್ರಿ...ನಿಧಾನಕ್ಕೆ ಅದಕ್ಕೆ ವಿವರಣೆ ಮತ್ತೆ ಲಘು ಪ್ರಹಸನ ಈಗ ಅದರಲ್ಲಿ ಒಳ್ಲೆ ಕೈಚಳಕ ತೋರಿಸಿದ್ರಿ.. ಇನ್ನು ಕವನಕ್ಕೂ ಕೈ ಹಾಕಿ ಸೃಜನಶೀಲತೆ ಇರುವವರಿಗೆ ಕಷ್ಟವೇನಲ್ಲ,,,ನನ್ನ ಬರಹ ಪ್ರಾಕಾರ ಪ್ರಾರಂಭವಾದದ್ದು ಪ್ರಬಂಧ, ಕಥೆಗಳೊಂದಿಗೆ...

    ReplyDelete
  19. ಧನ್ಯವಾದ ಗಣಪತಿಯವರೇ ನಿಮ್ಮ ಆಗಮನಕ್ಕೆ ಮತ್ತು ಪ್ರೋತ್ಸಾಹದ ಮಾತಿಗೆ...

    ReplyDelete
  20. ಅಶ್ವಿನಿ, ನನ್ನ ಬ್ಲಾಗ್ ಗೆ ಸ್ವಾಗತ...ಹಾಗೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ

    ReplyDelete
  21. ಆಜಾದ್ ಸರ್, ಅಂತೂ ಪ್ರಾಸವನ್ನು ಪ್ರಸವಿಸಿದ್ದು ಬಹಳ ಖುಷಿಕೊಡುತ್ತಿದೆ. ಕವನ ಹಿಡಿಸಿತು.

    ReplyDelete
  22. ವಿ.ಆರ್.ಬಿ ಸರ್...ಪ್ರಾಸಕ್ಕೆ ಪ್ರಯಾಸ ಪಡ್ಲಿಲ್ಲ...ಹಾಗಾಗಿ ಇದನ್ನು ಬ್ಲಾಗಿಸಿದೆ. ನಿಮ್ಮ ಪ್ರೋತ್ಸಾಹ ನಮ್ಮ ಶಕ್ತಿ..ಧನ್ಯವಾದ

    ReplyDelete
  23. praasavilladidarenu...rasavideyalla..saviyalu..saakallave..ishtu.sogasaagide.abhinandanegalu.

    ReplyDelete
  24. dhanyavaada kalarava avre nimma protsaahada maatige.....

    ReplyDelete