Friday, April 30, 2010

Something ಡಿಫರೆಂಟು

Something ಡಿಫರೆಂಟು


ಕತ್ತೆ, ಕಿರುಬ, ಹಂದಿ,


ರಣಹದ್ದು, ಕಾಗೆ, ರೋಗಿ,


ನರಿ, ಗೂಬೆ, ಗೋಸುಂಬೆ


ಮಾಸ್ತರು ಹೇಳಿದರು ಮಕ್ಕಳನ್ನು ಕೇಳುತ್ತಾ


ಈ ಎಲ್ಲ ಗುಣಕೆ ಹೊಂದುವ ಒಂದು


ಪ್ರಾಣಿಯ ಹೆಸರು ಹೇಳಿ,


ಮಕ್ಕಳೆಲ್ಲ ಕೂಗಿ ಹೇಳಿದರು


‘ರಾಜಕಾರಣಿ‘





ಡುಂಡಿ ನೀವ್ ನನ್ ಸೀನಿಯರ್


ವಿ.ವಿ.ಲಿ ನಾನ್ ನಿಮ್ ಜೂನಿಯರ್


ನೀವ್ ಬರೆದ್ರಿ ಎಲ್ಲ ಅಂದ್ರು


ಚುಟುಕ ಅಂದ್ರೆ ಡುಂಡಿ


ನಾನ್ ಬರೆದ್ರೆ ಓದೋರಿಲ್ಲ


ಹೇಳ್ತಾರೆ ಹಾಳ್ಮಾಡ್ಬ್ಯಾಡ ಪೇಪರ್


ದಂಡಿ



ಹುಡುಗೀದು


ಹೋಗುತ್ತೆ ಮುಂದಕ್ಕೆ


ಆಂಟೀದು


ನಿಂತಲ್ಲೇ ನಿಲ್ಲುತ್ತೆ


ವಯಸ್ಸು



ಅವನು ಆಗ್ಲಿಲ್ಲವೇ


ಅಂತ ಪರದಾಟ


ಇವನು ಯಾಕಾದ್ರೂ


ಮಾಡ್ಕೊಂಡೆನೋ


ಒದ್ದಾಟ....


ಮದುವೆ




ಯೋಗಾಯೋಗ


ಭೋಗಾಭಾಗ


ಸದಾನಂದ


ನಿತ್ಯಾನಂದ




ಹೊಟ್ಟೇಲಿ ಹೊತ್ತೆ


ಕನಸನ್ನ ಕಟ್ಟಿ


ಎದೆಯಾಮೃತ


ಕೈತುತ್ತ ಕೊಟ್ಟೆ


ಬೆಳೆದೆ ನಾ ಸುಖದಲಿ ಓಲಾಡಿ


ಮುತ್ತಿಗಾಗಿ ನಿನ್ನ


ಬೆಂಕಿಯ ಬೇಯ್ಗೆಗಿಟ್ಟೆ ಕಾಡಿ


ಆದರೂ ನಕ್ಕು ಹರಸಿದೆ


ಹರಿಸಿ ಮಮತೆಯಾ ಕೋಡಿ


ಏಕೆಂದರೆ ನೀನನ್ನ


ಅಮ್ಮ


ಬಿರಿದ ನೆಲಕೆ ಬೇಕು..


ನಾ ನೊಂದರೆ ಅಮ್ಮನ


ಕಣ್ಣಲಿ ತುಳುಕುವುದು..


ಪ್ರಿಯಕರ ತನ್ನ ಪ್ರಿಯೆಗೀಗ


ಮನತುಂಬಿ ಕರೆವುದು..


ಹನಿ

19 comments:

  1. ಜಲನಯನ,
    ಅದ್ಭುತವಾದ ಒಗಟಿನ ಹನಿಗಳನ್ನು ನೀಡಿದ್ದೀರಿ. ಓದುತ್ತ ಹೋದಂತೆ,ಖುಶಿಯಲ್ಲಿ ಕಣ್ಣು ತುಂಬಿಕೊಳ್ಳುತ್ತವೆ.

    ಇದು ಬೆಡಗಿನ ಹನಿ
    ಇದು ಒಗಟಿನ ಹನಿ
    ಇದು ಜಲನಯನರ Honey!

    ReplyDelete
  2. ತುಂಬಾ ಚೆನ್ನಾಗಿ ಮೂಡಿ ಬಂದಿವೆ ಚುಟುಕುಗಳು ಭಯ್ಯ ..ರಾಜಾಕಾರಿಣಿ ದಂತೂ ಸೂಪರ್.

    ReplyDelete
  3. ಅಜಾದಣ್ಣ,
    ಬೋ ಪಸಂದಾಗವೆ ಚುಟುಕಗಳು ...
    Something ಡಿಫರೆಂಟು ಅಲ್ಲ ಬಹಳ ಡಿಫರೆಂಟು ಬಿಡಣ್ಣ.....

    ReplyDelete
  4. hahaha ಒಳ್ಳೆ ಮಜಾ ಐತೆ..

    ReplyDelete
  5. soopar.... sooopar..... soopar........ sooopar........... mattenoo illa sir...... soopar........

    ReplyDelete
  6. ಸುನಾಥ ಸರ್, ನಿಮ್ಮ ಪ್ರತಿಕ್ರಿಯೆಯ ಟಾನಿಕ್ಕು ಬೀಳದಿದ್ರೆ ಏನೋ ನಿರುತ್ಸಾಹ ಬ್ಲಾಗಿಸೋಕೆ....ಧನ್-ಧನ್ಯವಾದ........ಚನ್-ಚನ್ನಾಗಿರೋ ಪ್ರತಿಕ್ರಿಯೆಗೆ

    ReplyDelete
  7. ತಂಗ್ಯಮ್ಮ...ಓ ಮನಸೇ
    ನಿನ್ನ ಸೂಪರ್ ಕವನದ ಮುಂದೆ ನನ್ನವು ಚುಟುಕ
    ಅವು ಓದೋಕೆ ತವಕ ಇವು ಮುಟ್ಟಿಸ್ತಾವೆ ಚುರುಕ

    ReplyDelete
  8. ಮಯೇಸಣ್ಣ...ಬಂದ್ಬಿಟ್ಯಾ...ಬೋ ದಿನ ಆಯ್ತು ಬುಡು...
    ನೀನೂ ಬುಡು ನಿನ್ನ್ ಬ್ಲಾಗು ಯಾಕೋ ಬಿಕೋ ಅಂತಾಯ್ತೆ..

    ReplyDelete
  9. ಗೌತಮ ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  10. ಸುಮಾ, ಕಡೆಗೂ,,,...ಹಹಹ...ಹೋಗ್ಲಿ ಬಿಡಿ ನಿಮ್ಮ ಪ್ರತಿಕೆಯೆಗೆ ಆಭಾರಿ ನಾನು...ನನ್ನ ಭಾವಮಂಥನ

    ReplyDelete
  11. ದಿನಕರ್...ಬಹಳ ಧನ್ಯವಾದ...ಬರೀ ಧನ್ಯವಾದ ..ನಿಲ್ಲದ ಧನ್ಯವಾದ...ಧನ್ಯವಾದ

    ReplyDelete
  12. ಸೀತಾರಾಂ ಸರ್....ನಿಮ್ಮ ಪ್ರೋತ್ಸಾಹಕ್ಕೆ ನನ್ನಿ...

    ReplyDelete
  13. ಜಲನಯನ,

    ಹನಿ ಹನಿಯಾಗಿವೆ..

    ReplyDelete
  14. ಚೆನ್ನಾಗಿವೆ ಚುಟುಕುಗಳು

    ReplyDelete
  15. ಗುರು, ಧನ್ಯ್ವಾದ ನಿಮ್ಮ ಪ್ರತಿಕ್ರಿಯೆಗೆ

    ReplyDelete
  16. ಎನ್ನಾರ್ಕೆಯವರಿಗೆ ಧನ್ಯವಾದ...ನಿಮಗೆ ಭಾವಮಂಥನಕ್ಕೂ ಸ್ವಾಗತ....ನಿಮ್ಮ ಪ್ರೋತ್ಸಾಹದ ಮಾತಿಗೂ ಧನ್ಯವಾದ

    ReplyDelete
  17. ಹನಿಗಳಲ್ಲ ಇವು ಚಿಂತನೆಗಳ ಗಣಿಗಳು,
    ಒಮ್ಮೆಮ್ಮೆ ವಿಚಾರಗಳ ಹಣಾ ಹಣಿ,
    ಮಗದೊಮ್ಮೆ ಆಂಗ್ಲ ಭಾಷೆಯ ಹನಿ,
    ಈ ತುಂತುರು ಭಾವ ಹೀಗೆ ಸುರಿಯಲಿ,
    ಚುಟುಕು ಮಳೆಯಾಗಿ..

    ಶುಭ ಹಾರೈಕೆಗಳು

    ReplyDelete