Thursday, February 25, 2010

ಛಲ-ಬಲ

ಬಿಡೆ ಎನ್ನುತಿದೆ

ಬೆಂಬಿಡದೆ ಬರುತಿದೆ

ಕೆಂಡಕೈಲಿ ಹಿಡಿದು

ಚೆಂಡಾಡುವ ಛಲ

ಉಂಡು ಗುಂಡಾಗುವ ಬಲ

ಷರತ್ತು ಇರಬೇಕು

ಎದೆಗಾರಿಕೆ ಬೆಳೆಸಿಕೋಬೇಕು

ಕಂಡು ಪತಂಗವ

ಬೆಂದಬೂದಿಯಿಂದೆದ್ದು

ಚಿಮ್ಮುವ ಫೀನಿಕ್ಸಿನ ಗುದ್ದು

ಉಸಿರುನಿಲ್ಲುವತನಕ

ಉಸಿರಾಡಲಡ್ಡಿಯೇನು?

ಬರಲಿ ಅದು ನಿನ್ನ ಹಿಂದೆ

ಬೀಳಬೇಡ ಅದರಬೆನ್ನ ಹಿಂದೆ

ತಪ್ಪಲ್ಲ ..ಒಪ್ಪುವೆ

ಮಾಡಿದರೂ ಮೋಸವ

ಮಾಡಬೇಡ ಸಹವಾಸವ

ಕಲಿ ಸವಾಲೆಸೆವುದ

ಬದುಕ ಬದುಕುವುದಕಲಿ

ಸಾವ ಮೆಟ್ಟುದೇ ಸವಿ

ಸಾವ ಮೆಟ್ಟುವುದಾ ಸವಿ

Saturday, February 20, 2010

ಇನ್ನೊಂದು-ಮೂರು..ಹಾಗೇ...

ಕಾಲ್-ಏಜು


ನನಗಾಯ್ತು ಯುವೇಜು
ಜೊತೆಗೆ ನೀನ್ಬಂದೆ ಬಾಜು
ಎಲ್ಲ ಸೇರಿದ್ದು ಅಲ್ಲಿ
ಅದುವೇ ನಮ್ಮ ಕಾಲ್-ಏಜು


ಮನೆಯವರಿಗೆ ಸುಳ್ಳು
ಕಲಿಯೋದಕ್ಕೆ ಕಲ್ಲು
ಕೆಲವರು ಸೇರೋದೆ ಇಲ್ಲಿ
ಮಾಡೋಕೆ ಗುಲ್ಲು


ಕಲಿತವ ಉಳೀತಾನೆ
ಇಲ್ಲದವ ಅಲೀತಾನೆ
ಅವ ಆಗ್ತಾನಲ್ಲೇ ಪ್ರೊಫೆಸರು
ಇವ ಬರೋರ್ಗೆಲ್ಲಾ ಸೀನಿಯರು


No ಮಿಲನ್
ಅವಳಪ್ಪನಾದ ನಮ್ಮಿಬ್ಬರ ಮಧ್ಯೆ
ವಿಲನ್
ಅದಕೇ ಬಹಳದಿನ ಆದ್ರೂ ಆಗುತ್ತಿಲ್ಲ
ಮಿಲನ್




Un-ರೀಚಬಲ್ಲು
ಕ್ಲಿಂಟನ್ನು ಮಾವ
ಲ್ಯಾಡನ್ನು ಭಾವ
ಲಾಲು ಅವ್ರಪ್ಪ
ಶನಿ, ರಾಹು, ಕೇತು
ಎಲ್ಲಾ ಇದ್ದಕಡೆ
ನಾನು ಹ್ಯಾಗೆ ಹೋಗಲಪ್ಪ

Saturday, February 13, 2010

ಇದು ಎಂಥಾ ಜಾಲವಯ್ಯ


ಎಂಥಾ ಜಾಲವಯ್ಯ...
ಇದು ಎಂಥ ಅಂತರ್ಜಾಲವಯ್ಯ
ಹೊಸ ವಿಷಯ ತಿಳಿಸಿ
ಹೊಸ ಆಸೆ ಹುಟ್ಸೋ
ಮಾಯಾಜಾಲವಯ್ಯ

ನೆಟ್ಟಲ್ಲಿ ಬಿದ್ದು ಒದ್ದಾಡುವ
ಹುಡ್ಗಿ ಹಿಂದೆ ಹುಡ್ಗ ಓಡಾಡುವ
ಬುದ್ಧಿ ಇಲ್ದೇ ಬರಿದಾಗುವ
ನಿದ್ದೆ ಕೆಟ್ಟು ಮಂಕಾಗುವ
ಒಂದೇ ಹುಚ್ಚನಂತೆ ಅಲೆವಾ....
ಇದು..ಎಂಥಾ ಜಾಲವಯ್ಯ....

ಕ್ಲಾಸು ತಪ್ಸಿ ಬಂಕ್ ಹೊಡೆಯುವ
ನೆಟ್ ಕೆಫೆಯ ಎದೆಗೆ ಹಣ ಸುರಿಯುವ
ಡೌನ್ ಆದ್ರೆ ತಾನೂ ಡೌನ್ ಆಗುವಾ
ಆನ್ ಲೈನು ಬಂದ್ರೆ ಚೀರಾಡುವಾ
ಹಣವಿಲ್ಲದಿದ್ರೆ ಪರದಾಡುವಾ....
ಇದು ಎಂಥಾ ಜಾಲವಯ್ಯ......

Friday, February 5, 2010

ಹಾಗೇ ಇನ್ನೊಂದೆರ್ಡು ಡೋಸ್

ಆಗಿದ್ದರೆ ಭೇಟಿ
ಆಗಿದ್ದರೆ ಒಂದುವೇಳೆ ಭೇಟಿ
ನಮಗಿರುತಿರಲಿಲ್ಲ ಸಾಟಿ
ಲೈಲಾ ಮಜನೂ ಸಲೀಂ ಅನಾರ್
ಪ್ರೇಮಪುಸ್ತಕ ಸೇರ್ತಿದ್ವು ಗಟಾರ್

ಲವ್ ಸ್ಟೋರಿ
ವೈನಾಗಿದ್ದ ನಮ್ಮ ಲವ್ ಸ್ಟೋರೀಲಿ
ಅಗ್ಬಾರ್ದಿತ್ತು ಖಳನಾಯಕ ನಿಮ್ಮಪ್ಪ
ಮೀಟಾಗ್ತಿರ್ಲಿಲ್ಲ ಹೀಗೆ ಬೇರೆ-ಬೇರೆ ದಾರೀಲಿ
ಆಗ್ತಿದ್ದೆ ಅಮ್ಮನ್ಗೆ ಸೊಸೆ ಮಾವ ನಮ್ಮಪ್ಪ


ಮಿಲ್ಟ್ರಿ-ಚೌಲ್ಟ್ರಿ
ಗುಂಡ ಹೋದ ಸೇರಲು ಮಿಲ್ಟ್ರಿಗೆ
ಗುಂಡಿ ಅಟ್ಕಾಯಿಸ್ಕೊಂಡ್ಲು ರಸ್ತೇಲಿ
ಕಣ್ಣಿಗೆ-ಕಣ್ಣು ಸೇರಿದ್ವು,
ಮನಸುಗಳೆರಡೂ ಒಂದಾದ್ವು
ಮದ್ವೆ ಅಗ್ತಾವ್ರೆ ಬಂದ್ಬಿಡಿ ಚೌಲ್ಟ್ರಿಗೆ


ಸೂರ್ಯ ಗ್ರಹಣ
ಗುಂಡ ಹೋದ ಇಂಟರ್ ವ್ಯೂಹಕ್ಕೆ
ಬಿದ್ದ ಪುಂಖಾನುಪುಂಖ ಪ್ರಶ್ನೆ ಜಾಲಕ್ಕೆ
ಕೇಳಿದ್ರು, ಧರತಿ-ಸೂರ್ಯನ ಮಧ್ಯೆ
ಚಂದ್ರ ಬಂದರೆ ಏನಾಗುತ್ತೆ ಗುಂಡ..?
ಥಟ್ ಅಂತ ಕೊಟ್ಟ ಉತ್ರ ಗುಂಡ
ಆಗೋದೇನು..? ಚಂದ್ರನ್ನ ಧರತಿ
ಮದ್ವೆ ಆಗ್ತಾಳೆ, ಸೂರ್ಯಂಗೆ
ಗ್ರಹಣ ವಕ್ರಸ್ತೈತೆ....