Wednesday, January 13, 2010

ಸಂಕ್ರಾಂತಿ - ತ್ರಿವರ್ಣಕ್ರಾಂತಿ



ಹಸಿರುಸಿರಾಡುವ ಹೊಲ ಗದ್ದೆ
ಉಸಿರಾಗಿದ್ದವು, ರೈತನೆಂದ ಗೆದ್ದೆ
ಕೊಳ್ಳುವುದು ಭಾರ, ಮಾರು ಅಗ್ಗ
ಸಾಲಹೊರೆ, ರೈತನ ಕೊರಳಿಗೆ ಹಗ್ಗ
ಬರಲಿ ಅನ್ನದಾತನ ಅನುಕೂಲದ ದಿನ
ತೀರಲಿ ಸಾಲ,ಹಸಿರಾಗಿ ಹೊಲ ಅನುದಿನ
ಬರಲಿ ಸಂಕ್ರಾಂತಿ ಮನೆಗೆ, ಗದ್ದೆಗೆ
ಊರಿಗೆ, ನಾಡಿಗೆ, ರೈತನಿಗೆ ಗದ್ದುಗೆ
ಆಗಲಿ ತ್ರಿವರ್ಣ ಕ್ರಾಂತಿ, ಹಸಿರು ಶಾಂತಿ
ಶ್ವೇತ ಹೈನಿಗೆ, ಮೀನಿಗೆ ನೀಲಕ್ರಾಂತಿ
ಬಾನಲಿ ಹಾರಾಡಿ ತ್ರಿವರ್ಣ ಪಟಪಟ
ತ್ಯಾಗ, ಶೌರ್ಯಕ್ಕಾಗಲಿ ಕೇಸರಿ ದಿಟ
ಸಮೃದ್ಧಿ, ಸಸ್ಯಸಿರಿ ಆಗಲಿ ಹಸಿರು
ಶಾಂತಿಗೆ ಬಿಳಿ, ಮುನ್ನಡೆಗೆ ಚಕ್ರವೇ ಉಸಿರು
ಸಂಭ್ರಮವಾಗಲಿ ಒಂದೆಡೆ ಅನ್ನದಾತನಿಗೆ
ತರಲಿ ಎಳ್ಳು-ಬೆಲ್ಲದ ಸಂಕ್ರಾಂತಿ
ಯೋಧನ ಶೌರ್ಯ, ಮೇಧಾವಿಗಳ ನಾಡಿಗೆ
ನಮಿಸಿ ವಿಶ್ವ ಆಗಲಿ ತ್ರಿವರ್ಣ ಕ್ರಾಂತಿ

10 comments:

  1. ಸಂಕ್ರಾಂತಿಗೆ ಉತ್ತಮ ಕವನ ಬರೆದಿದ್ದೀರಿ...
    ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು.

    ReplyDelete
  2. ಸಂಕ್ರಾಂತಿ ನಮ್ಮ ನಾಡಿಗೆ ಶುಭ ತರಲಿ.

    ReplyDelete
  3. raitanige sanktranti shubhavagali annuva ashayada tamma kavana arthapurna.
    Raitanige shubhavaagali innaadaru olle dina barali

    ReplyDelete
  4. ನನ್ನ ಬ್ಲಾಗು ಮಿತ್ರರೆಲ್ಲರಿಗೆ ಸಿಗಲಿ ನನ್ನ ಹಾರೈಕೆಯ ಕವನ ಎಂದೇ ಭಾವಮಂಥನದಲ್ಲೂ ಹಾಕಿದ್ದು.....ಶಿವು, ಸುನಾಥ್ ಸರ್ ಮತ್ತು ಶಿವರಾಂ ಸರ್ ನಿಮೆಲ್ಲ ಮತ್ತೊಮ್ಮೆ ಸಂಕ್ರಾಂತಿಯ ಶುಭಕಾಮನೆಗಳು.

    ReplyDelete
  5. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಸಂಕ್ರಾಂತಿಯ ಶುಭ ಹಾರೈಕೆಗಳು

    ReplyDelete
  6. ಧನ್ಯವಾದ ಗುರು...ಹೇಗಿತ್ತು ನಿಮ್ಮ ಸಂಕ್ರಾಂತಿ ಹಬ್ಬ

    ReplyDelete
  7. ಬದುಕಲ್ಲೂ ಹಸಿರು ತುಂಬಿರಲಿ

    ReplyDelete
  8. ರಾಘು ಧನ್ಯವಾದ, ನಿಮ್ಮ ಎಲ್ಲ ಕುಟುಂಬವರ್ಗಕ್ಕೆ ಸಂಕ್ರಾಂತಿಯ ಶುಭಕಾಮನೆಗಳು

    ReplyDelete
  9. ಉಮಾವ್ರೇ, ನನ್ನ ಎರಡೂ ಗೂಡಿಗೆ ಬೇಟಿ ನೀಡಿದಿರಿ, ಧನ್ಯವಾದ.

    ReplyDelete