Sunday, December 6, 2009

ದಾನವತೆ ಕೊನೆಯಾಗುವುದು



ದಾನವತೆ ಕೊನೆಯಾಗುವುದು
ಕಣ್ಣುಕಲೆತರೆ - ತುಟಿ ಅಲ್ಲ
ರೆಪ್ಪೆಮಾತನಾಡುವುವು
ಕಣ್ಮುಚ್ಚಿ ತನ್ಮಯನಾದರೆ
ಮನ-ಮನದಿ ಮಾತನಾಡುವುದು
ಮನ-ತೆರೆದರೆ ಮನಕೆ
ಹೃದಯಗಳು ಒಂದಾಗುವುವು
ಹೃದಯ ಬಿಚ್ಚಿ ನುಡಿದರೆ
ನಡೆ-ತಡೆಗೋಡೆಯ ಹಾರುವುವು
ವೈಶಾಲ್ಯದಿ ಯೋಚನೆ ಹರಿದರೆ
ಹರಿವನದಿ ಸಾಗರ ಸೇರುವುದು
ಸಾಗರಕುಂಟೇ ಸೀಮೆಗಳು?
ಸಾಗರಕೆಲ್ಲಿಯ ಆಳಗಳು?
ಸಾಗರೆಕೆ ಸಾಗರೆವೇ ತಾ ಸಾಟಿ
ಕ್ಷುಲ್ಲಕಗಳು ಮರೆಯಾಗುವುವು
ಧರ್ಮಗಳು ಮನದ ನೆಮ್ಮದಿಗೆ
ಕರ್ಮಗಳು ಇಹದ ತಹಬದಿಗೆ
ಧರ್ಮ ತಹಬದಿಗೆ ಯತ್ನಿಸಿದರೆ
ಕರ್ಮಗಳು ನೆಮ್ಮದಿಯ ಕಾಡುವುವು
ಮಾನವತೆಗೆ ಮನಕೊಟ್ಟರೆ
ದಾನವತೆ ಕೊನೆಯಾಗುವುದು

ಮೂರ್ಖತೆ ಪರಮಾವಧಿ
ನನ್ನ ಮನೆಯ ವಸ್ತು
ನಾನೇ ಸುಟ್ಟು ಬೇಸ್ತು
ನೀನಿರಬಹುದು ಕಟ್ಟುಮಸ್ತು
ನಿನ್ನ ಬಾಲನೀನೆ ಹಿಡಿಯಬೇಡ
ಮೂರ್ಖ ಸಿಗದೇನೂ.. ಆಗುವೆ ಸುಸ್ತು
ಮುಷ್ಕರ, ಧರಣಿ ಕುಂತೆ
ನಿನ್ನ ಇಂದಿಗೆ ನಿನ್ನ ಚಿಂತೆ
ನಿನ್ನ ನೆರೆಯವನದು ಅನಿಸಿ ಕಂತೆ
ಮುಳುಗುವೆ ಇದು ಸ್ವಾರ್ಥಗಳ ಸಂತೆ
ಕೆಲಸ ಬಿಡುವೆ ..ಧ್ವಂಸ ಮಾಡುವೆ
ಕಂಸನಾಗುವೆ, ಹಿಂಸೆ ಮಾಡುವೆ
ಬಸ್ಸು, ಕಟ್ಟಡ ಸರ್ವಜನ ಆಸ್ತಿ ಸುಡುವೆ
ಯಾವುದೋ ಮಗು ನರಳಿಸುವೆ
ನಿನ್ನ ನಾಶಕೆ ನೀನೇ ನಾಂದಿ ಹಾಡಿಸುವೆ
ಬಿಡು ದ್ವೇಷ-ಕಟ್ಟು ದೇಶ
ಮರೆತು ರೋಷ- ಕಳಚು ವೇಷ
ಚೆಲ್ಲು ವಿಷ - ಇರಲಿ ಹರುಷ
ಇನ್ನೂ ಏಕೆ ಮೀನ ಮೇಷ?
ಎಲ್ಲಬಿಡು ಮರೆತು ಬಿಡು
ಜೊತೆಗೂಡು, ಹೆಗಲುಕೊಡು
ಕೃಷಿಮಾಡು ಕಟ್ಟು ನಾಡು
ಕೆಡಹಲು ಸಾಕು ಒಂದೇ ಕೋಡು
ನೆಡಲು ಬೇಕು ಸಾವಿರ ಮೇಡು
ಮೆಟ್ಟು ನಾಡು ಇದುವೇ ಬೀಡು
ಕಟ್ಟು ನಾಡು ಕಟ್ಟು ನಾಡು ಕಟ್ಟು ನಾಡು

19 comments:

  1. ಅಜಾದ್ ಸರ್,
    ಕವನ ಸಮಯೋಚಿತವಾಗಿದೆ.... ನಮ್ಮ ಜನ, ನಮ್ಮದೇ ಆಸ್ತಿ ಹಾಳು ಮಾಡುತ್ತಾ, ತಮ್ಮದೇ ಸಮಯ ಹಾಳು ಮಾಡುತ್ತಿದ್ದಾರೆ..... ಏನೋ ಘನಂದಾರಿ ಕೆಲಸ ಮಾಡಿದ ಹಾಗೆ..... ಅವರಿಗೆ ಸಹಾಯ ಮಾಡುವ ಪುಡಾರಿಗಳ ನಿಜ ಬಣ್ಣ ಗೊತ್ತಾಗೋದು ತುಂಬಾ ತಡವಾಗತ್ತೆ..... ಕೋಮು ದ್ವೇಷಕ್ಕೆ, ಪ್ರಚೋದನೆ ಕೊಡುವ ರಾಜಕಾರಣಿಗಳು , ಜನರನ್ನು ತಮಗೆ ಬೇಕಾದ ಹಾಗೆ ಕುಣಿಸುತ್ತಿದ್ದಾರೆ..... ಜನ ಕುಣಿಯುತ್ತಿದ್ದಾರೆ.... ಇದಕ್ಕೆಲ್ಲಾ ಎಂದು ಕೊನೆಯೂ ದೇವರೇ ಬಲ್ಲ........

    ReplyDelete
  2. ಅಜಾದ್ ಸರ್,
    ತುಂಬಾ ಸುಂದರವಾಗಿದೆ
    ಅತ್ಯಂತ ಅರ್ಥಪೂರ್ಣ ವಾದ ಸಾಲುಗಳು

    ReplyDelete
  3. ದಿನಕರ್, ನಮ್ಮ ಕನ್ನಡಪರ ಸಂಘಟನೆಯೂ ಇದೇ ವಿಧ್ವಂಸಕ ಪ್ರತಿಭಟಣೆಗೆ ಎಡೆ ಮಾಡಿಕೊಡುತ್ತದೆ ಎನ್ನುವುದು ವಿಷಾದನೀಯ....ಇನ್ನು ಇತರರನ್ನು ದೂರುವುದು ಸರಿಯಲ್ಲ...ನಮ್ಮ ಮನೆಯ ನಾವೇ ಹಾಳುಗೆಡಹಿದರೆ...ಕಾಯ್ವರಾರಯ್ಯ...? ಕಲಿಯಬೇಕಿದೆ ನಾವು.

    ReplyDelete
  4. ಮಹೇಶ್ ಎಲ್ಲಿಂದ ಕಾಮೆಂಟ್ ಹಾಕಿದ್ದೀರಪ್ಪಾ..?? ಧನ್ಯವಾದ ಎಲ್ಲೇ ಹೋದರೂ ಬ್ಲಾಗ್ ನೋಡ್ತೀರಲ್ಲಾ ಮೆಚ್ಚಬೇಕು...

    ReplyDelete
  5. ಗುರು, ನಮ್ಮಲ್ಲಿ ಜವಾಬ್ದಾರಿ ಬಂದು ಬೇಜವಾಬ್ದಾರಿ ಹೋಗೋ ತನಕ ವಿಧ್ವಂಸ ..ಪ್ರತಿಭಟನೆ ಹೆಸರಲ್ಲಿ, ನಿಲ್ಲದೇನೋ..? ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ.

    ReplyDelete
  6. ಇಂದಿನ ವಾಸ್ತವತೆಗೆ ಹಿಡಿದ ಕನ್ನಡಿ ಈ ಎರಡು ಕವನಗಳು. ನಮ್ಮ ಸಮಾಜಕ್ಕೆ ವಿವೇಕ ಬರುವದೆಂದು?

    ReplyDelete
  7. ಒಂದೊಂದನ್ನೇ ಓದಿದರೂ ಅರ್ಥಪೂರ್ಣವಾಗಿರುವ ಈ ಕವಿತೆಗಳು, ಒಟ್ಟಿಗೇ ಓದಿದಾಗ ಬೇರೆಯದೇ ಅರ್ಥ ಹೊಮ್ಮಿಸುತ್ತವೆ.

    ವಾಸ್ತವದ ವಿಡಂಬನೆ ಮಾಡುತ್ತಲೇ, ಭವಿಷ್ಯವ ರೂಪಿಸುವ ಆಶಯ.... ಚೆನ್ನಾಗಿ ಮೂಡಿ ಬಂದಿದೆ.

    ReplyDelete
  8. ಸುನಾಥ್ ಸರ್..ನನ್ನನ್ನು ಬಹಳವಾಗಿ ಕಾಡುವುದು ಅಂದರೆ...ನಮ್ಮ ವಿಧ್ವಂಸಕ ಪ್ರತಿಭಟನೆ...ಮುಷ್ಕರ ಪ್ರತಿಭಟನೆಗೆ ಈ ಮಾರ್ಗ ಏಕೆ ಹಿಡಿಯುತ್ತಾರೋ ಗೊತ್ತಿಲ್ಲ...ಬಸ್ ಸೌಕರ್ಯ ಇಲ್ಲದೇ ಪರದಾಡುವ ಹಳ್ಳಿಗಾಡಿನ ಮುಗ್ಧ ಜನ ಮತ್ತು..ಮಣಗಟ್ಟಲೆ ಪುಸ್ಕಕಗಳನ್ನು ಹೊತ್ತು ಸರ್ಕಾರಿಶಾಲೆಗೆ ಹೋಗುವ ಬಡ ಮಕ್ಕಳ ಅಸಹಾಯಕತೆ ನೆನಪಾಗುತ್ತೆ...ನಾವು ಸುಡುವ ಬಸ್ ಗಳು ಇವರ ಅಸಹಾಯಕತೆಗೆ ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣ ಅಂತ ಅನ್ನಿಸೋದೇ ಇಲ್ಲವಲ್ಲ...?? !!! ಎಂಥ ದುರಂತ...???

    ReplyDelete
  9. ಆನಂದ್..ನಿಮ್ಮ ಪ್ರೋತ್ಸಾಹಕ ಮಾತಿಗೆ ನನ್ನ ನಮನ... ವಾಸ್ತವದ ಬಗ್ಗೆ ಅಸಮಾಧಾನ ಇದೆ..ಆದ್ರೆ ಭವಿಷ್ಯದ ಕನಸು ನನಸಾಗಲು ಎಲ್ಲರ ಸಹಕಾರ ಅಗತ್ಯ..ಅದಕ್ಕೆ ..ಜನಜಾಗೃತಿ ಆಗಬೇಕು.

    ReplyDelete
  10. ಸೂಪರ್! ಸೂಕ್ಷ್ಮ ವಿಷಯವನ್ನು ಚೆನ್ನಾಗಿ ಹೇಳಿದ್ದೀರಿ...
    ನಿಮ್ಮವ,
    ರಾಘು.

    ReplyDelete
  11. ರಾಘು..ಸೂಕ್ಷ್ಮಗಳನ್ನು ಹೇಳುವಷ್ಟಕ್ಕೇ ಸೀಮಿತ ನಮ್ಮ ಸ್ಥಿತಿ...ಕಡೇ ಪಕ್ಷ ಅದಾದರೂ ಸಮಾಧಾನ...ಧನ್ಯವಾದ

    ReplyDelete
  12. ಚೆನ್ನಾಗಿದೆ ಸರ್

    ReplyDelete
  13. ಮಂಜುಶ್ವೇತ....ಧನ್ಯವಾದ...ಪ್ರತಿಕ್ರಿಯೆಗೆ

    ReplyDelete
  14. ಈ ಕವನಗಳು ಒಳ್ಳೇ ದ್ವಂದ್ವಕ್ಕೆ ಸಿಲುಕಿಸಿಬಿಡುತ್ತವೆ... ವಾಸ್ತವವನ್ನು ವಸ್ತುನಿಷ್ಟವಾಗಿ ಹೇಳಿದ್ದೀರಿ, ಕೆಲವು ಭಾವಗಳು ಯಾಕೆ ಹೀಗೆ ಗೊತ್ತೇ ಆಗುವುದಿಲ್ಲ

    ReplyDelete
  15. ಪ್ರಭುಗೆ ಧನ್ಯವಾದ...ನಮ್ಮ ಬ್ಲಾಗಿನ ಈ ಚರ್ಚೆ ನಡೆದಿರುವಾಗ...ತೆಲಂಗಾಣ ದ ಪ್ರತಿಭಟನೆ....ಮತ್ತೆ ಅದಕ್ಕೆ ವಿರುದ್ಧವಾದುದು...ಎರಡೂ ಕಡೆಯಿಂದ ಸಾರ್ವಜನಿಕ ಆಸ್ತಿ ನಾಶ...ಎಂತಹ ಮೂರ್ಖರು ನಾವು...ಯಾರದೋ ಗಾದಿಗೆ ..ನಮ್ಮ ..ನಮ್ಮ ಜೇಬಿನ ಹಣದ ಬಲಿ,....

    ReplyDelete
  16. ಅದ್ಭುತ ರಚನೆ ಅಜ಼ಾದಣ್ಣ. ಪ್ರತಿ ಶಬ್ದಗಳ ಜೋಡಣೆ ಒಪ್ಪವಾಗಿದೆ. ವಿಷಯವೂ ಪ್ರಸ್ತುತ ಸ೦ದರ್ಭಕ್ಕೆ ಕನ್ನಡಿ.

    ReplyDelete
  17. ಧನ್ಯವಾದ ಸೀತಾರಾಂ ಸರ್...ನಮ್ಮ ವ್ಯವಸ್ಥೆಯತ್ತ ಒಂದು ನೋಟ ಅಸ್ಟೇ...

    ReplyDelete
  18. Hi, I like very much your blog.
    Keep doing.
    If you want, visit my blog.

    Happy new year!

    ReplyDelete