ಇಮಾಮ್ ಸಾಬಿ -ದುಶ್ಯಾಸ್ನಾಗಿದ್ದು.....
ನಾಟಕ ಪ್ರದರ್ಶನಕ್ಕೆ ಊರಲ್ಲಿ ಜೋರು ತಯಾರಿ ನಡೆದಿತ್ತು.. “ಊರುಭಂಗ” ನಾಟಕ. ದ್ರೌಪದಿ ಸೀರೆ
ಹರಣ ಪ್ರಸಂಗದಿಂದ ಪ್ರಾರಂಭ... ದುಶ್ಯಾನನ ಪಾತ್ರ ಸೀರೆ ಹರಣ ಪ್ರಸಂಗದಲ್ಲಿ ಮಾತ್ರ ಇತ್ತು. ಎಂಕ್ಟೇಸ..”ನಾನು
ದುಸ್ವಾಸನ್ಪಾಲ್ಟು ಮಾಡ್ತೀನಿ ಎಲ್ಲಾ ಕಿತ ಸುಬ್ಬಾನೇ ಮಾಡ್ತಾನೆ” ಅಂತ ಜೋರು ಮಾಡಿ ಪಾತ್ರ
ಗಿಟ್ಟಿಸಿದ್ದ. ಪ್ರಾಕ್ಟೀಸೂ ಚನ್ನಾಗೇ ಮಾಡಿದ್ದ. ನಾಟಕದ ಶ್ರೀರಾಮನವಮಿ ದಿವ್ಸ ಬೆಳಿಗ್ಗೆ ಮದ್ಯಾಹ್ನ ಅನ್ನದೇ “ಕೋಸಂಬರಿ, ಹೋಳಿಗೆ,
ಹಬ್ಬದ ಊಟ ಪಗಡ್ದಸ್ತಾಗೇ ಜಡ್ದ...’ಬ್ಯಾಡ್ವೋ ಒಟ್ಟೆ ಕೆಟ್ಟೋಯ್ತದೆ.. ಗಾಸಿ ಬಿದ್ದು ಪಾತ್ರ
ಗಿಟ್ಸಿದ್ದೀಯಾ’ ಅಂತ ಅವನ ಸ್ನೇಹಿತ ಹೇಳಿದ್ರೂ ಕೇಳಿರ್ಲಿಲ್ಲ ಅಂವ.
ರಾತ್ರಿ ೯.೦ ಕ್ಕೆ ನಾಟಕ ಶುರು ಆಗೋದು, ೮.೦ ಆದ್ರೂ ಆಸಾಮಿ ಪತ್ತೆ ಇಲ್ಲ...
ಸೀನ ಬಂದು ಗೌಡ್ರಿಗೆ ಹೇಳ್ದ “ನಾಟ್ಕದ ಮೇಟ್ರು ಸ್ಯಾನೆ ಟೆನ್ಸನ್ನಾಗವ್ರೆ ಕಣಣ್ಣೋ, ಈ
ಟೊತ್ತಾದ್ರೂ ನಿಮ್ತಮ್ಮನ್ಮಗ ಎಂಕ್ಟೇಸಾ ನಾಪತ್ತೆ, ಮೊದ್ಲ ಸೀನೇ ಅವನ್ದು” ಅಂದ
ಬೀಡಿ ಸೇದ್ತಾ ನಿಂತಿದ್ದ ’ಕೃಷ್ಣ’ ನ ಪಾತ್ರದ ರಮೇಸ...
“ಅಯ್ಯೋ ಗೌಡ್ರೇ.. ಒಂದೇ ಸಮನೆ..
ಚೊಂಬಿಡ್ಕೊಂಡು ಇತ್ಲ್ ಕಡೆ ಓಗಿದ್ದೇ ಓಗಿದ್ದು.. ಎಂಕ್ಟೇಸಾ..!! ಆವಾಗ್ಲೇ ನೋಡ್ದೆ..,
ಬಂದೌವ್ನೆ ಅಂದ್ಕಂಡೆ..ಇನ್ನೂ ಬರ್ನಿಲ್ವಾ...??”
ಶಿವೇಗೌಡ್ರಿಗೆ ಆತಂಕ... “ನೋಡ್ರಲೇ ಅಲ್ಲೇ ಇತ್ಲ್ ತಾವ” ಅಂದ್ರು
ಸೋಮ ಓಡ್ಕಂಡ್ಬಮ್ದು...ಏದುಸಿರ್ಬಿಡ್ತಾ...
“ಗೌಡ್ರೇ..ಎಂಕ್ಟೇಸ ಸುಸ್ತಾಗಿ ಮಲಗ್ಬಿಟ್ಟವನೆ... ಜ್ವರಾನೂ ಬಂದಂಗೈತೆ.. ಬರಾಕಾಗಾಕಿಲ್ಲ
ಯಾಸ ಆಕಲ್ಲ ಅವ್ನು ..ಅಂತ ಏಳೋಗೋ ಲೇ ..ನಾಟ್ಕದ್ ಮೇಟ್ರಿಗೆ” ಅಂತ ಅವ್ರಮ್ಮ ನನ್ನ
ಓಡ್ಸಿದ್ಲು...” ಅಂದ.
ನಾಟಕದ ಮೇಷ್ಟ್ರಿಗೆ ಏದುಸಿರು ಜಾಸ್ತಿ ಆಯ್ತು...
“ಲೇ ಏನಾದ್ರೂ ಮಾಡ್ರಲೇ...ಮೊದ್ಲೇ ಉಬ್ಬಸಾ ಈ ಮೇಟ್ರಿಗೆ..ಆ ಮ್ಯಾಕೆ ಟೆನ್ಸನ್ನಾಗೆ
ನಿಗತ್ಕಂಡ್ರೆ,,ಏನ್ಮಾಡನೇ.. ನಾಟ್ಕ ಅಂತ ನೋಡೋದಾ..ಇಲ್ಲ ಮೇಟ್ರ್ ಎಣ ಸಾಗ್ಸೋದಾ??” ಅಂದ್ರು
ಗೌಡ್ರು...
ಅಲ್ಲಿದ್ದ ಹಳ್ಳಿ ಹೈದರನ್ನೇನು ದೊಡ್ಡೋರನ್ನೂ ಕೇಳಿ ಆಯ್ತು... ಯಾರೂ...”ಊಹೂಂ...” ನಾನ್
ಮಾಡೊಲ್ಲ ಅನ್ನೋರೇ....
ಆಗ ಅಲ್ಲೇ ಇದ್ದೆ .. ನಾಕನೇ ಕ್ಲಾಸ್ ಶ್ರೀಕಾಂತ...
“ನಾನ್ಮಾಡ್ತೀನಿ ಗೌಡ್ರೆ...?? ನಾಟ್ಕ ಪ್ರಾಕ್ಟೀಸು ದಿನಾ ನೋಡಿದ್ದೀನಿ..ಬಾಯ್ಪಾಟ ಆಗದೆ
ಡೈಲಾಗು ದುಸ್ಯಾಸನ್ದು” ಅಂದ...
“ಲೇ ಓಗೋಲೇ... ಯಾವಾಗ್ ನೋಡಿದ್ರೂ ಗೊಣ್ಣೆ ಸಿರ್ಕೊಂಡಿರ್ತೀಯಾ... ಕೆಳಕ್ಕ್ ಬೀಳ್ದಂಗೆ
ಗೊಣ್ಣೆನ ಸೆಳ್ದೀಯೋ... ಇಲ್ಲ ಬಿದ್ ಬಿದ್ದೋಗೋ ನಿನ್ ನಿಕ್ಕರ್ ನ ಇಡ್ಕಂಡೀಯೋ ...ಅಲ್ಲಾ
ದ್ರೌಪದಿ ಸೀರೆ ಸೆಳ್ದೀಯೋ...” ಓಗೋ ಕ್ಯಾಮೆ ನೋಡು” ಅಂದ್ಬುಟ್ರು.. ಗೌಡ್ರು...
ಈಗೇನ್ಮಾಡೋದು... ಟೈಮೇ ಇಲ್ಲ ಅರ್ಧ ಗಂಟೆನೆ ಇರೊದು... ಸಾಲದ್ದಕ್ಕೆ ಬೆಂಗ್ಳೂರಿಂದ
ದ್ರೌಪದಿ ಪಾತ್ರಕ್ಕೆ ಎಣ್ಣು ಆಲ್ಟಿಸ್ಟ್ ಬಂದವಳೆ..?? !!!
ಅಲ್ಲೇ ಇದ್ದ ಇಮಾಮ್ ಸಾಬಿ ನ ನೋಡಿ ರಮೇಶ ಉರ್ಫ್ ’ಕೃಷ್ಣ’
“ಗೌಡ್ರೇ..ನಮ್ ನಾಟ್ಕದ್ ಎಲ್ಲಾ ಡೈಲಾಗೂ ಇಮಾಮಂಗೆ ಗೊತ್ತು... ಅವಂಗೇ ಆಕಿದ್ರೆ ಎಂಗೆ
ಯಾಸ,,,??” ಅಂದ
“ಅಲೆಲೆ ಔದಲ್ಲೋ... !!!”
ಏದುಸುರು ಎಳ್ಕೊಂಡೇ ಬಂದ ನಾಟಕದ ಮೇಷ್ಟ್ರಿಗೆ ಮುಳ್ಗೋನಿಗೆ ಹುಲ್ಕಡ್ಡಿ ಸಿಕ್ಕಂಗಾಯ್ತು...
ಇಮಾಮ್ ಸಾಬಿ ಕೈ ಹಿಡ್ಕಂಡು.... “ಲೇ ಸಾಬಿ ಮಾಡೋ ದುಸ್ಯಾಸನ ಪಾರ್ಟು” ಅಂದ್ರು
ಎಲ್ಲರ ಒತ್ತಾಯದ ಮೇಲೆ ಇಮಾಮ್ ನಾಟಕದ ದುಶ್ಯಾಸನನ ಪಾತ್ರಕ್ಕೆ ಬಣ್ಣ ಹಚ್ಚೇಬಿಟ್ಟ....
ನಾಟಕ ಶುರು ಆಯ್ತು...
ದ್ರೌಪದಿ..ಅಂತಃಪುರಕ್ಕೆ ಎಂಟ್ರಿ ಕೊಟ್ಟ ದುಸ್ಯಾಶನ...
“ಎಲೆ ದ್ರೌಪದಿ...!!!.... ನೀ,,,ನೀ...ನೀ.....”
ಯಾಕೋ.. ಎಡವಟ್ ಆಯ್ತು..ಇಮಾಮ್ ಸಾಬಿ ತಡವರಿಸ್ದ....
ಸೈಡ್ ವಿಂಗಿಂದ ನಾಟಕ ಪುಸ್ತಕ ಹಿಡ್ಕಂಡಿದ್ದ ಮೇಷ್ಟ್ರು... ಡೈಲಾಗ್
ಹೇಳ್ಕೊಟ್ರೂ...ಊಹೂಂ...
ಸೈಡ್ ವಿಂಗ್ ಪಕ್ಕಕ್ಕೆ ಬಂದ ಇಮಾಮ್ ..
“ಮೇಟ್ರೆ..ಡೈಲಾಗೂ..ನಮ್ದೂಕೆ ಬಂದಂಗೆ ಏಳ್ತೀನಿ...” ಅಂದ
“ಆಯ್ತೋ ಮಾರಾಯಾ ಏನೋ ಹೇಳಿ ಮುಗ್ಸು...” ಅಂದ್ರು ಮೇಷ್ಟ್ರು
ಇಮಾಮ್
ಉರ್ಫ್ ದುಶ್ಯಾಸನ: “ಕ್ಯಾಗೆ..ದುರಾವ್ ಪತ್ತಿ,..sss ನಿಮ್ದೂಕೆ ಬುಲಾವ್ ಅಂದ್ರೂ..ಬರೊಲ್ಲ ಕರ್ಕೋ ಹೇಳ್ತೀ..ssss?? ನಕ್ಕೋ
ನಕ್ಕೋ...ಚನ್ನಾಗಿ ಇರೊಲ್ಲ..!!!. ನಮ್ದೂಕೆ ಅಣ್ಣ ನಿಮ್ದೂಕೆ ಎಳ್ಕೊಂಡೂ ಬಾ ಕರ್ಕೋ ಏಳವ್ನೆ..
ಇಜ್ಜತ್ ಸೆ ಬಾ ಇಲ್ಲಾ ಅಂದ್ರೆ ನಿಮ್ದೂಕೆ ಎಳಕೊಂಡು ಓಗ್ತೀನಿ......”
ಅಂತೂ ಇಂತೂ...ದೃಶ್ಯ ಮುಗೀತು...ಪುಣ್ಯಕ್ಕೆ ಸಭೆ ಸೀನ್ ಬರೋ ಹೊತ್ತಿಗೆ.. ಸಾವರಿಸಿಕೊಂಡು
ಬಂದೇ ಬಿಟ್ಟ ಮೇಕಪ್, ವೇಶ ಏರಿಸ್ಕೊಂಡು ಎಂಕ್ಟ...!!!!
ಮೇಷ್ಟ್ರು ಖುಶೋ ಖುಷು... “ಬಂದ್ಯಾಪ್ಪಾ...ಅಂತೂ ಸಭೆ ಸೀನ್ ಹೊತ್ಗಾದ್ರೂ..
ಸಿಧ್ಹವಾಗಿದ್ದೀಯಲ್ಲಾ... ಜ್ವರ ಅಂತಿದ್ರು ಯಾರೋ...??!!!” ಅಂದ್ರು ಮೇಷ್ಟ್ರು.
“ಏನ್ ಮೇಟ್ರೇ ... ಬೆಂಗ್ಳೂರಿಂದಾ ಕರ್ಸೀರಿ ಈರೋಯಿನ್ನಾ... ಎಂಗ್ ಮಿಸ್
ಮಾಡಾಕಾದದು..ಅದ್ಕೇ ಒಂದ್ ಮಾತ್ರೆ ನುಂಗಿ ಸಿವಾ ಅಂತ ಬಂದ್ಬುಟ್ಟೆ...” ಅನ್ನೋದೇ ಎಂಕ್ಟೇಸ..???!!!!
ಮೊದಲಿಗೆ..: ಭಾಷೆ ಮತ್ತು ಅದನ್ನು ದುಡಿಸಿಕೊಂಡಿರುವ ರೀತಿ ತುಂಬಾ ಇಷ್ಟವಾಯಿತು...
ReplyDeleteಸೊಗಸಾದ ನಗೆ ಲೇಖನ..ಓದುತ್ತ ಹೋದ ಹಾಗೆ..ನಾವು ತಂಬಿಗೆ ಹಿಡಿಯುವಷ್ಟು ನಕ್ಕು ಹೊಟ್ಟೆ ಸುಸ್ತಾಯಿತು...
ಚಂದದ ಬರಹ..ನನಗೆ ಇಷ್ಟವಾದ ಸಂಭಾಷಣೆ "ನಾಟ್ಕ ಅಂತ ನೋಡೋದಾ..ಇಲ್ಲ ಮೇಟ್ರ್ ಎಣ ಸಾಗ್ಸೋದಾ"
And your followers who is following your blog publically hit the magical number 100 :-)..Congratulations sirji!!!
ReplyDeleteಧನ್ಯವಾದ ಶ್ರೀಮನ್... ನೀವು ಯಾವಾಗಲೂ ಪ್ರಥಮ ಪ್ರಜೆ ಆಗ್ತಿರೋದು,,,ನನಗೆ ಹೆಮ್ಮೆ ಅನ್ನಿಸ್ತಿದೆ.. ನಿಮ್ಮ ಮುಕ್ತ ಮನದ ಆತ್ಮೀಯ ಪ್ರತಿಕ್ರಿಯೆ...ನನ್ನ ನೋಡಿದವ್ರು
Delete"ಯಾಕ್ಲಾ ಅಟ್ಟದ್ಮ್ಯಾಕ್ಕೋಗಿದ್ದೀಯಾ...ಇಳೀಲಾ " ಅನ್ನೋ ಹಾಗಾಗುತ್ತೆ...
superb.. very funny..
ReplyDeleteಧನ್ಯವಾದ ಶುಭಾವ್ರೇ..ಪ್ರತಿಕ್ರಿಯೆಗೆ
Deleteಚೆನ್ನಾಗಿದೆ ಸಾರ್ ನಕ್ಕು ನಕ್ಕು ಹೊಟ್ಟೆ ಹುನ್ನಾಯಿತು
ReplyDeleteಹೆಗ್ಡೆಕಟ್ಟೆ ಧನ್ಯವಾದ ಬ್ಲಾಗಿನಕಡೆ ಬಂದು ಪ್ರೋತ್ಸಾಹಿಸಿದ್ದಕ್ಕೆ
Deleteಸೂಪರ್ ಡ್ರಾಮಾ
ReplyDeleteಮಸ್ತ್ ಕಾಮಿಡಿ
ಫುಲ್ ಎಂಜಾಯ್ಮೆಂಟ್
ಓದಿದ್ದು ಅನ್ಸಿಲ್ಲಾ ಇದು
ನೇರವಾಗಿ ನಾಟಕ ನೋಡಿದ ಕಲ್ಪನೆ ಅದ್ಭುತ ..
ಹೇ ಮದನಾ ಪ್ರಶಾಂತ ವದನ...ಇದು ಒಂದು ನಾಟಕದ ಡೈಲಾಗು...ಹಹಹಹ್ ಧನ್ಯವಾದ ಪ್ರಶಾಂತ್
Deleteಜಲನಯನ,
ReplyDeleteದುಸ್ಸಾಸ್ನ ನನಗೆ ತುಂಬ ಪ್ರಿಯನಾಗಿಬಿಟ್ಟ!
ದುಸ್ಸಾಸ್ನ ದುಸ್ಸಾಸ ಪಸಂದಾಗಿದ್ರೆ ಸಂದಾಕೇ ಕತೆ ಬಂದೈತೆ ಅಂದಂಗಾತಲ್ಲಾ ಸುನಾತಣ್ಣಾ,,,ಬೋ ಕುಸಿ ಆಯ್ತು...
Deleteಸಾ... ನಮ್ ಊರ್ ಗೆ ಹೋಗಿ ಬಂದ್ವಿ... ಹಹಹ ನಮ್ಮ ಅಪ್ಪ ನಾಟಕಗಳಲ್ಲಿ ಹಾರ್ಮೋನಿಯಂ ನುಡಿಸೋರು ಅಪ್ಪಾ ಆಗಾಗ ಈ ತರಹದ ಕಥೆಗಳು ಹೇಳೋರು ನೆನೆಸ್ಕೊಂಡು ನಗು ಬಂತು... ಇತ್ತೀಚೆಗೆ ಆ ತರಹದ ನಾಟಕಗಳೇ ಬರುವುದಿಲ್ಲ ಬಂದರೂ ಅಂದಿನ ಮೆರುಗು ಇಲ್ಲಾ.
ReplyDeleteನಿಮ್ದುಕೆ ನಾಟ್ಕಾ ಬೋ ಇಷ್ಟಾ ಆಗೈತೆ ಹಹ
ನಾಟಕದ ಹಾರ್ಮೋನಿಯಂ ಮತ್ತೆ ಹಳ್ಳಿ ತಬಲಾ ಮಾಸ್ತರು...ವಾವ್ ಏನು ಅನುಭವ ಅದು...ಎಷ್ಟು ಸಲ ಪ್ರಾಕ್ಟೀಸ್ ನೋಡಿದ್ರೂ...ನಾಟಕ ಮಾತ್ರ ತಪ್ಪದೇ ನೋಡ್ತಿದ್ವಿ ಅಲ್ವಾ ಸುಗುಣಾ...ಅದೂ ಒಂದು ಅಪೂರ್ವ ಅನುಭವ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
DeleteSooper ...:) :) :) :) sustaaytu nakku ...
ReplyDeleteThanks you Sandhya putti.. halavaaru anubhavagaLive...avanne hanchikollo yochane..ashte
Deleteಆಜಾದ್ ಸರ....
ReplyDeleteನಾಟಕ ಬೋ ಪಸಂದಾಗೈತೆ..ಮೊದ್ಲೂ ಈ ತರಹದ ನಾಟಕ ಓದಿವ್ನಿ,ಆದ್ರೂ ಇದ್ರಾಗೆ ಏನೋ ಬ್ಯಾರೆ ಥರಾ ಐತೆ..ದುಸ್ಸಾಸನಂಗೆ ಕೊಟ್ ಮಾತ್ರೆ ಹೆಸ್ರು ವಸಿ ಹೇಳ್ಬಿಡಿ ನೋಡವಾ...(ಬೆಂಗ್ಳೂರ್ ಹುಡ್ಗಿ ಹೇಳ್ಬ್ಯಾಡಿ ಮತ್ತೆ!!!)
ಚೆನಾಗಿತ್ತು ಸರ್..ಬರೆಯುತ್ತಿರಿ...ನಕ್ಕು ಹಗುರಾದೆ...
ನಮಸ್ತೆ..
ಚಿನ್ಮಯ ಧನ್ಯವಾದ...ನಿಮ್ಮ ಪ್ರತಿಕ್ರಿಯೆಗೆ..
Deleteಅರಅರೆ ಇಸ್ಕಿ...
ReplyDeleteನಿಮ್ದೂಕೆ ಅಚ್ಚಾಸೆ ಬರ್ದಿದ್ದೀರ ನಾಟ್ಕನ...
ನಾನು ಚಿಕ್ಕವನಿದ್ದಾಗ ನಮ್ಮೂರಲ್ಲಿ ಅಡಿಕೆ ಚೀಣಿ ಮಾಡಲು ಇಮಾಮ್ ಸಾಬಿ ಅಂತ ಬರ್ತ ಇದ್ರು. ನಾನು ಅವನ ತರ ಡುಮ್ಮಕ್ಕೆ ಇದ್ದಿದ್ರಿಂದ ನನ್ನ ಸಹ ಇಮಾಮ್ ಸಾಬಿ ಅಂತಿದ್ರು. ಹ್ಯಂಗೊ ಸಣ್ಣ ಆದ ಮ್ಯಾಕೆ ನಿಲ್ಸಿದ್ರು ಹಂಗೆ ಕರೆಯೋದ್ನ...
ಬೊ ಪಸಂದಾಗಿತ್ತು ಧಣಿ.....
ಇಸ್ಕಿ ಉಸ್ಕಿ...ಕೈಕು ಖುಷ್ಕಿ...ಬೋ ಕುಸಿ ಆಯ್ತು...ಧನ್ಯವಾದ ಮಯೇಸ್ಮಾಮ.
Deletehha hha..super...innu svalpa munduvarisiddare innU nagabahudittu sir...
ReplyDeletesuper....
ದಿನಕರ್... ಧನ್ಯವಾದ ಹೀಗೇ ನೆನಪಾದ ಒಂದ್ಚೂರು...ಮಸಾಲೆ ಸೇರ್ಸಿ...ಹಹಹಹ
Deletevery nice sir
ReplyDeleteಧನ್ಯವಾದ ಸಂತೋಷ್.......
DeleteAOh Too good.....
ReplyDeleteActually lekhana odtidde, ondu phone call bantu, aagashte Imaam Saab dialogue odtidde, nagu tadeyokaagde joraagi nakkubitte.... phone disconnect maadi matte call maadtidini :)....
Awesome.... Azad Sir, liked it!
ಹಹಹ, ಫೋನಾಯಿಸಿದವರು...ಅಯ್ಯೋ ಮಿಸ್ ಆಗಿ ಫೋನ್ ಬೇರೆ ಕಡೆಗೇನಾದ್ರೂ ಹೋಯ್ತಾ..?? ಅಂದ್ಕೊಂಡ್ರಾ..??
ReplyDeleteಧನ್ಯವಾದ ರೂಪಾ...
ಬಾಲ್ಯದಲ್ಲಿ ಗುಬ್ಬಿ ವೀರಣ್ಣ ಕಂಪನಿಯವರ ನಾಟಕ ಗಳನ್ನು ನೋಡಿದ್ದು ನೆನಪಾಯಿತು ....ನಮ್ಮ ಊರಲ್ಲಿ ನಾಟಕ ಹಳ್ಳಿಯವರು ಮಾಡುವಾಗ " ನಿಮಿಷಾರ್ಧದಲ್ಲಿ ಬರುವೆ " ಎನ್ನಲು" ನಿಮ್ಮ ಶ್ರಾಧ್ಧ ದಲ್ಲಿ ಬರುವೆ " ಅಂದಿದ್ದನಂತೆ ..ದ್ರೌಪದಿ ಬಸವಳಿದು " ಅನ್ನಲು "ದ್ರೌಪದಿ ಬಸ್ಸಿಳಿದು " ಎಂದಿದ್ದನಂತೆ ಒಬ್ಬ ಮಹಾನುಭಾವ ...ನಕ್ಕು ಹಗುರಾಯಿತು ಮನಸ್ಸು ...ಹಾರ್ದಿಕ ಅಭಿನಂದನೆಗಳು .
ReplyDeleteThis comment has been removed by the author.
Deleteಅನು ಮೇಡಂ ನಾಟಕಗಳಲ್ಲಿ ಆಗೋ ಎಡವಟ್ಟು ಕೆಲವೊಮ್ಮೆ ಇರುಸುಮುರುಸಾಗುತ್ತೆ. ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ
ReplyDeleteHahaha....Sooper sir........Tumba ishta aitu....(Ellaru nakkaitu ansutte..naanobba tubelight tara...late aagi nagta iddini)
ReplyDeleteನಗುವಿನ ವಿಷಯದಲ್ಲಿ...ನಾನು ಟ್ಯೂಬ್ ಲೈಟ್ ಆಗೋಕೆ ಬಯಸ್ತಿನಿ,,,ಮತ್ತೆ ಮತ್ತೆ ನೆನಪಿಸ್ಕೊಂಡು ನಗೋಕೆ... ಅಲ್ವಾ ಅಶೋಕ್...
Delete