Wednesday, October 10, 2012

ಸುಬ್ಬಿ....

(Art - by a school kid, Source: web site) ಚಿತ್ರ: ಅಂತರ್ಜಾಲದಿಂದ ಒಬ್ಬ ಶಾಲಾ ಬಾಲಕಿ ಬಿಡಿಸಿದ ಚಿತ್ರ


ಸುಬ್ಬಿ
ಏನ್ಲಾ ಸಿದ್ದ ಸುಬ್ಬಿ ಬಂದಂಗಿಲ್ಲ ನಾಟೀಗೆ
ಬೋ ಪಸಂದಾಗವೆ ಸಾಲು ಎಲ್ಲಾ ನೆಟ್ನೆಟ್ಗೆ
ಪಡ್ಡೆ ಬಡ್ಡೀ ಐಕ್ಳು ನಾಟಿ ಸಾಲೆಲ್ನೋಡಾವು
ಆದ್ರೂ ಕಲಾ ಸುಬ್ಬಿ ಬಂದ್ರೇನೆ ಮನ್ಸಿಗ್ ಚಾವು
 
ಸುಬ್ಬಿ- ನಮ್ ಊರ್ನಾಗೇ ಬೋ ವಲ್ಡ್ ಪೇಮಸ್ಸು
ಏನ್ಮಾಟ್ವಾದ್ ಮೈಯಿ, ಅವ್ಳಿದ್ರೆ ಗೇಯ್ಮೆಗುಮ್ಮಸ್ಸು
ನೀಟಾಗ್ಬತಾನೆ ಗೌಡ ಗದ್ದೆತಾಕ್ಕೆ, ಮೀಸೆನೋ ಟ್ರಿಮ್ಮು
ತಂಪೊತ್ನಾಗೂ ಬೆವರ್ತಾವೆ ಐಕ್ಳು ನೀರ್ಬೇಕು ಡ್ರಮ್ಮು
 
ಅದ್ಕೇ ಅಂತೀನಿ, ಮುದ್ನಿಲ್ಲೋ ಗೌಡ ಇಂದ್ಯಾಕವ್ನೆ?
ಸುಬ್ಬಿ ಇದ್ರೆ ಮುಂದ್ನಿಂತ್ ಇವ ಮುಸ್ಮುಸಿ ನಗ್ತಾನೆ
ಅವ್ಳೋ ಬೋ ಘಾಟಿ, ಕುಲುಕ್ತಾಳೆ ಬಳುಕ್ತಾಳೆ ಒಸಿ
ಸಂಜೀಕ್ ಶೆಟ್ರಂಗ್ಡೀಲಿ ಗೌಡ್ನ ಲೆಕ್ದಲ್ಲಿ ಸಿಕ್ತದೆ ದಿನ್ಸಿ
 
ಆದ್ರೆ ನಮ್ಸುಬ್ಬಿ ತಂಟೇಕೋದ್ರೆ ಬುಟ್ಟಾಳೆ ಸುಮ್ಕೆ?
ಗಟ್ವಾಣಿ ಎಂಗ್ಸು ತಗದ್ಬುಟ್ಟಾಂದ್ರೆ ಮುರೀತಾದೆಮ್ಕೆ
ಗೌಡಾನೂ ಅಂಗೇ ಓಗಿದ್ನಂತೆ ಅವ್ಳತಾಕ್ಕೆ ಒಂದಿನ
ಆವೊತ್ತು ಕೊಟ್ಟಿದ್ದಂತೆ ಮುಟ್ನೋಡ್ಕಳಂಗೆ ದಿನಾ
 
ಸುಬ್ಬಿ ಅಂದ್ರೆ ನನ್ ಮಗ್ಳಿದ್ದಂಗೆ ಅಂತಾನೆ ಗೌಡ
ಗೋಗರ್ದ್ನಂತೆ ಆವತ್ನಡ್ದಿದ್ ಎಲ್ಲೂ ಏಳ್ ಬ್ಯಾಡ
ಮಗು ಮನ್ಸು ನಮ್ಸುಬ್ಬಿದು, ಕಸ್ಟ ಅಂದ್ರೆ ಕರುಗ್ತದೆ
ಬಡುವ್ಳಾದ್ರು ಕೈಲಾದ್ದು ಮಾಡಾಕೆ ಮನ್ಸು ಮರುಕ್ತದೆ

11 comments:

  1. ಸುಬ್ಬಿ ಬಾಳ ಗಮ್ಮತ್ತಾಗಾವ್ಳೆ

    ReplyDelete
    Replies
    1. ಸುಬ್ಬಿ ಅಂದ್ರೆ ಒಂಥರಾ ವೈನು....ಹಹಹ ಧನ್ಯವಾದ

      Delete
  2. ಬೋ ವೈನಾಗೈತೆ ಕವನಾನು ನಮ್ ಸುಬ್ಬಿ ಹಂಗೆ..:) :)

    ReplyDelete
  3. ಸುಬ್ಬಿ ಒಲವು ತುಂಬಾ ಐತೆ ಆಜಾದೂ ಮ್ಯಾಗೆ.
    ಆತ ಕರದಾಗೆಲ್ಲ ಬರ್ತಾಳೋಡಿ ಕವನದ ಒಳಗೆ!
    ಅವ್ಳ ಹಾಡು ಕೇಳಿ ಖುಶ್ ಆಗ್ತೀವಿ ನಾವೆಲ್ಲಾರೂ.
    ಕೇಳಸ್ತಾ ನಮಗಿರಬೇಕಣ್ಣ ಹಾಡುಗಳಾ ನೂರು!

    ReplyDelete
    Replies
    1. ಸುನಾಥಣ್ಣ.. ಗದ್ದೆತಾವ ಬಂದ್ರೆ ಸುಬ್ಬಿ
      ರಾಮಕ್ಕ ತತ್ತಾಳೆ ಎಲೆಯಡ್ಕೆ ಸುಣ್ಣದ್ಡಬ್ಬಿ

      ಧನ್ಯವಾದ ಎಂದಿನಂತೆ ನಿಮ್ಮ ಬೆನ್ನು ತಟ್ಟುವಿಕೆಗೆ

      Delete
  4. ಾಜಾದ್,
    ಸುಬ್ಬಿ ಕವನ ಸಕ್ಕತ್ ಕಿಕ್ ಕೊಡ್ತು...

    ReplyDelete
    Replies
    1. ಸುಬ್ಬಿ ಇಂಗೇ ಅವಾಗಾವಾಗ ಬರ್ತಿದ್ರೆ ...ಎಂಗೆ..?? ಸಿವಣ್ಣಾ...?????

      Delete
  5. ಸುಬ್ಬಿ ಬಂದ್ಬುಟ್ಲೂ , ನಮ್ ಹಳ್ಳಿ ಹೈಕ್ಳಾ ನಿದ್ದೆ ಓಡಿಸ್ಬುಟ್ಲೂ , ಬೋ ಬೋಪಸಂದಾಗದೆ ಕಣ್ ಏಳಿ. ಹಂಗೆಯ ಸುಬ್ಬಿ ಜೊತೆ ನಾಮೂ ನಾಟಿ ಮಾಡೂಕೆ ಹೋಗುಮಾ ಅಂತಾ ಅವ್ನಿ , ಬಂದೀರಾ ಹೋಗುಮ. ಬಂದಿರಾ ಅಜಾದ್ ಸಾಮೇರೆ , ಯೋಳಿ ಬಿರ್ ಬಿರ್ನೆ .
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  6. ಸುಬ್ಬಿ ಬಂದ್ರೆ ನಾಟಿ ಕೆಲ್ಸ ಮಾಡೋದು ಸೈ.. ಆದ್ರೆ ಬಾಲು ಬಂದ್ರೆ ಪೋಟೋ ಸಕ್ಕತ್ ಬರ್ತವೆ...ಆವಾಗ ಇನ್ನೂ ಸೈ....ಹೋಗ್ಮಾ ಬನ್ನಿ ಬಾಲಣ್ಣ

    ReplyDelete
  7. ಬೋ ಪಸಂದೈತೆ ಹಳ್ಳಿ ಹಾಡು :-)

    ReplyDelete