Tuesday, April 10, 2012

ತಂಗಿ ಮದುವೆ




ಮೆರಿ ಪ್ಯಾರಿ ಬೆಹನಿಯಾ ಬನೆಗಿ ದುಲ್ಹನಿಯಾ (ಸಚ್ಚಾ ಝೂಠಾ...1970)
ತಂಗಿ ಮದುವೆ
ನನ್ನ ಮುದ್ದು ತಂಗ್ಯಮ್ಮ
ನಿನ್ನ ಗಂಡು ಎಲ್ಲಮ್ಮಾ
ಬಂತು ನೋಡು ದಿಬ್ಬಣದ ಸವಾರಿ
ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
          ಎಂತ ಸಿಂಗಾರ ಮಾಡಿ ತಂಗ್ಯಮ್ಮ ಕುಂತವ್ಳೆ//೨//
          ತಿಲಕ ಹಣೆಗೆ ಅಚ್ಚಿ ನಗ್ ನಗ್ತಾ ಕುಂತವ್ಳೆ
ತಂಗ್ಯಮ್ಮ ಉಟ್ಟವ್ಳೆ ತವರಿನ ಸೀರೆ 
ಲಗ್ನಾ ಆಗೋಕೆ ಗಂಡಿನ ಜೋಡಿ...
          ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
ತಂಗ್ಯಮ್ಮ ಮದ್ವಣಗಿತ್ತಿ ಅರಿಸಿಣ ಅಚ್ಚಂಡು//೨//
ತವ್ರನ್ನ ಬಿಡೋವಾಗ ಕಣ್ಣೀರು ತುಂಬ್ಕೊಂಡು
ತಬ್ಕೊಂಡು ಅಮ್ಮನ್ನ ಅಳ್ತಾಳೆ ತಾರೆ...
ತಾರೆ ಒಂಟವ್ಳೆ ಗಂಡನ ಕೂಡಿ....
ನಿನ್ನ ಅಣ್ಣ ಕುಣಿದವನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ//
          ಅಮ್ಮನ ಗೋಳು ನಾನು ನೋಡಲಾರೆ ತಂಗಿ//೨//
          ಅಪ್ಪನ ಕಣ್ಣಲ್ಲೂ ನೀರು ಗೋಳಾಡ್ತಾಳೆ ಪುಟ್ನಿಂಗಿ
          ನೋವಿದ್ರೂ ನಗ್ತೀನಿ ಭಾವನ್ಗುಣ ನೋಡಿ
          ತಂಗಿ ಒಂಟವ್ಳೆ ಗಂಡನ ಜೋಡಿ
          ನಿನ್ನ ಅಣ್ಣ ಕುಣಿದವ್ನೆ ಇದನ ನೋಡಿ// ನನ್ನ ಮುದ್ದು ತಂಗ್ಯಮ್ಮ

Tuesday, April 3, 2012

ಮುಖ-ಪುಸ್ತಕ



ಮುಖ-ಪುಸ್ತಕ
ಮೊದಲ್ ಮೊದಲ್ ನೋಡೋ ಮುಖ
ಮೋಡಿ ಮಾಡೈತೆ ಎಂಥದ್ದೋ ಸುಖ
ಏಯ್, ಬ್ಯಾಡಪ್ಪಾ, ಸ್ವಲ್ಪ ಕೆಲ್ಸ ಕಾರ್ಯ
ಬಾಸ್ ಗೂ ತೋರಿಸಬೇಡವೇ ಮುಖ?
ಚೂರು ಪಾರು ಮಾಡಿ ಆಗಲ್ವೇ ಧೈರ್ಯ?

ಕೆಲ್ಸದ್ ಮಧ್ಯೆ, ಏಯ್ ತಡಿ ಏನೈತೋ!!
ಯಾರು ಹೊಸ್ದಾಗಿ ಏನನ್ನ ಹಾಕವ್ರೋ!!
ಫೋಟೋ ಯಾವ್ದಾದ್ರೂ ಇಂಟ್ರೆಸ್ಟಿಂಗೂ
ಕಾಮೆಂಟ್ ಕಾಲೆಳಿಯೋ ಗ್ರೂಪಿಂಗೂ
ಬ್ಲಾಗಕ್ಕಂತೂ ಬರೊಲ್ಲ ಬ್ಲಾಗಿಗ್ರು ಹೆಂಗೂ
ಇಲ್ಲೇ ಹಾಕ್ತೀನಿ ನನ್ ಕವ್ನ ಒಂದ್ಸಾಂಗು

ಮಧ್ಯಾನ್ಹ ಆಯ್ತು ಕೆಲ್ಸದ್ ಅರ್ಧ ಪುಟ
ಅರ್ಧ ಘಂಟೆಲಿ ನಾಕಾಗ್ತಿತ್ತು ಮೊದ್ಲಾಗಿದ್ರೆ
ಈಗ ಮುಖ ನೊಡ್ಕೊಂಡ್ ಅರ್ಧನೇ ದಿಟ
ಏನ್ಮಾಡೋದು? ಗೊತ್ತಾಗ್ತಿಲ್ಲ ಯಾಕೋ
ಹೆಂಗ್ಬರೋದು ಹೊರ್ಗೆ ಸಾಕಪ್ಪ ಸಾಕೋ

ಆದಿನ ಬಂದೆ ಆಫೀಸ್ ಗಣ್ಕದ್ ಕಿವಿ ಹಿಂಡ್ದೆ
ಕಿಟ್ಕಿ ತೆರೆಕೊಳ್ತು, ಮುಖದ್ಬಾಗ್ಲು ಮುಚ್ಕೊಳ್ತು
ತಟ್ದೆ, ಕಿಟ್ಕಿ ಮುಚ್ದೆ, ಎಲ್ಲ ಬಂದ್ ಹೊರಗ್ಬಂದೆ
ಮತ್ತೆ ಕಿವಿ, ಕಿಟ್ಕಿ,.. ಊಹೂಂ.. ಮುಖ ಕಾಣ್ಲಿಲ್ಲ
ತಲೆ ಕೆರ್ಕೊಂಡೆ, ಮೈಯಲ್ಲಾ ಪರಚ್ಕೊಂಡೆ..
ಅಳು ಬರೊಂಗಾಯ್ತು ನನ್ನಲ್ಲೇ ಕಿರಿಚ್ಕೊಂಡೆ

ಕಛೇರಿ ಜವಾನ ಪರಿಯೋಜನೆ ಕಡ್ತ ತಂದಿಟ್ಟ
ವಿಧಿಯಿಲ್ಲ ಸುರ್ಹಚ್ಕೊಂಡೆ ಮುಗ್ಸಿ ಕಡ್ತದ್ ಬೆಟ್ಟ
ಚಾ ಕುಡಿಯೋಕೆ ಪಕ್ಕದ್ ಛೇಂಬರ್ ಮಯೇಸ
ಎಣ್ಣೆ ಕುಡ್ದಂಗೆ ಮುಖ-ಕ್ಯಾಂಟೀನ್ಗೆ ಬತ್ತೀರಾಸಾ?
ಇದೇನಪ್ಪ ಮಯೇಸಾ, ಮುಖದಲ್ಲೇ ಮುಳಗ್ತಿದ್ದೆ

ಬಿಡಿಸಾ, ಒಸಾ ಸಾಯೇಬ ಲಾಕ್ ಮಾಡವ್ನೆ
ಮುಖ ನೋಡಿದ್ಸಾಕು ಕಡ್ತಾ ನೋಡಿ ಅಂತಾನೆ
ನೋಡಿದ್ರಲ್ಲಾ ನೀವೂನೂವೆ, ಆಫೀಸ್ಕೆಲ್ಸ ಎಲ್ಲಾ
ಮದ್ಯಾನಕ್ಕೇ ಮುಗೀತಾ ಅವೆ ಕೆಲ್ಸ, ಬಾಕಿ ಇಲ್ಲಾ
ದಿನಾ ರೇಗ್ತಿದ್ದ ನಮ್ ಸಬ್-ಬಾಸು, ಈಗ ಖುಶ್
ಮುಖ ಮನ್ಯಾಗ್ ನೊಡ್ಕೊಳ್ಳುಮಾ ಅದೇ ಭೇಶ್