ಹೂಗಳು ನಗುತಿವೆ
(ಚಿತ್ರ: ಶರ್ಮಿಲಿ; ಗಾಯಕರು: ಕಿಶೋರ್ ಕುಮಾರ್; ಸಂಗೀತ: ಸಚಿನ್ ದೇವ್
ಬರ್ಮನ್)
ಹೂಗಳು ನಗುತಿವೆ ನಗುತಲಿ ರಮಿಸಲೂ.. //೨//
ಸೇರಲು ಮನಗಳು ಮತ್ತೆ ಮತ್ತೆ ಮಿಲನಕೇ..//೨//
ಹೂಗಳು ನಗುತಿವೆ...
ನೀ ನಿರೆ ಇರುವುದು ಪರಿಸರದಾ ಸರಿಗಮ
ನೀ ಬಂದು ಹೋದರೆ ಎಂದು ಎಲ್ಲಿ ಸಂಗಮ //ನೀನಿರೆ ಇರುವುದು//
ಘಳಿಗೆಯೆರಡು ಸೇರಿ ಇಂದು ಪ್ರೀತಿಯಲ್ಲಿ ಕಳೆಯುವಾ...sss
ಹೂಗಳು ನಗುತಿವೆ...//ಪ//
ಕಣ್ಣಿನ ಕನಸಲಿ ನನಸು ಇಂದು ತುಂಬಿದೆ
ಹೆಜ್ಜೆಯ ಗುರುತಲೂ ನಿನ ಘಮ ತುಳುಕಿದೆ//ಕಣ್ಣಿನ ಕನಸಲೂ//
ಯಾರ ಬಯಕೆ ಹೇಗೋ ಏನೋ ನನದಂತೂ.. ಹೀಗಿದೇ..sss
ಹೂಗಳು ನಗುತಿವೆ...// ಪ //
ಮಾತಿಗೆ ತುಟಿಗಳು ಏನೋ ಹೇಳಹೊರಟಿವೆ
ಮಾತೇ ಹೊರಡದೇ ಸುಮ್ಮನೇ ಕುಳಿತಿವೆ..//ಮಾತಿಗೆ ತುಟಿಗಳು//
ನಿನ್ನ ಮಾತ ಕೇಳಲೆಂದು ನನ್ನ ಮನವು ಬಯಸಿದೇ...sss
ಹೂಗಳು ನಗುತಿವೆ...// ಪ //
‘ಶರ್ಮೀಲಿ’ ಚಿತ್ರದ ಈ ಗೀತೆಯು ನನ್ನ ಮೆಚ್ಚಿನ ಗೀತೆಗಳಲ್ಲಿ ಒಂದು. ಆ ಗೀತೆಯನ್ನು ಕೇಳಿಸಿದ್ದಕ್ಕಾಗಿ ಹಾಗು ಗೀತೆಯನ್ನು ಸಮರ್ಥವಾಗಿ ಕನ್ನಡೀಕರಿಸಿದ್ದಕ್ಕಾಗಿ ಧನ್ಯವಾದಗಳು.
ReplyDeleteಸುನಾಥಣ್ನ ಧನ್ಯವಾದ...ಮೊದಲ ಆಶೀರ್ವಾದಕ್ಕೆ...
Deleteಸುಂದರವಾದ ಅನುವಾದ....!
ReplyDeleteಧನ್ಯವಾದ ಮಂಜುಳಾದೇವಿಯವ್ರೇ...
Deleteಆ ಹಾಡು...ಈ ಪದಗಳು ಎರಡು ಕಾಡುತ್ತವೆ.ಒಂದು ಭಾವ...ಇನ್ನೊಂದು ಮಂಥನ...ಸುಂದರ ಅತಿ ಸುಂದರ...
ReplyDeleteಧನ್ಯವಾದ ಶ್ರೀಮನ್... ಕವನ ಬರೆದು ಅದಕ್ಕೆ ಲಯ ಸಂಗೀತ ಹಾಕುವುದು ಸುಲಭ ಅದೇ ಇರುವ ಪದಗಳಿಗೆ ಅರ್ಥವತ್ತಾದ ಪರ್ಯಾಯ ಕನ್ನಡ ಪದ ಹಾಕೋದು ಸ್ವಲ್ಪ ಕಷ್ಟ...
ReplyDeleteನನ್ನ ಮೆಚ್ಚಿನ ಗೀತೆ ಗಳಲ್ಲೊಂದು .......ಸುಂದರವಾಗಿ ಕನ್ನಡೀಕರಿಸಿದ್ದೀರಿ .......ವೆರಿನೈಸ್ ಸರ್
ReplyDeleteಧನ್ಯವಾದ ಅಶೋಕ್ ಮೆಚ್ಚುಗೆಗೆ..
ReplyDelete