ಲಾಭ-ನಷ್ಟ
ತರವಲ್ಲ ತಂಬೂರಿ ತಂತಿ ಹರಿಯಿತು
ಇಹವಲ್ಲ ಪರಕೆ ಪ್ರಾಣಪಕ್ಷಿ ಹಾರಿತು
ನಿಮ್ಮಾಗಮನ ಸ್ವರ್ಗದಿ ಲಾಭವಲ್ಲಿ
ಕಳೆದುಕೊಂಡ ನಮಗೆ ಆಯಿತು ನಷ್ಟವಿಲ್ಲಿ.
ಹಾರಿತ್ತು ಪ್ರಾಣ ಪಕ್ಷಿ
ಕೋಡಗ ಆಗಲಿಲ್ಲ ಕೋಳಿಗೆ ತುತ್ತು
ಆನೆ ಹೊಗಲಿಲ್ಲ ಆಡಿಗಿಲ್ಲ ಹೊತ್ತು
ಮೋಡ ಮಳೆಗರೆಯದೆ ಹೋದದ್ದು
ಜಟಕದ ಕುದುರೆ ಸುಮ್ಮನೆ ನಡೆದದ್ದು
ನೀಲಾಕಾಶಕೆ, ಸಾಬಿಗೆ ಆಗದಾಯ್ತು ಗೊತ್ತು
ಯಾರಿಗೂ ತಿಳಿಯಲೇ ಇಲ್ಲ
ಹುಟ್ಟುಹಬ್ಬದಂದೇ ಪ್ರಾಣಪಕ್ಷಿ ಹಾರಿತ್ತು.
ಇನ್ನಿಲ್ಲದ ಗಾಯನ ಗಾರುಡಿಗ
ಮನಬಿಚ್ಚು-ಮುಕ್ತ ಕಂಠದ ಭೋರ್ಗರೆವ ಹಾಡು
ನೇಗಿಲಯೋಗಿ ಮಣ್ಣವಾಸನೆ ಬಂತಲ್ಲಿಗೆ ಬೀಡು
ಏನೋ ತವಕ, ಎಂತಹ ಚಿಮ್ಮುವ ಹುರುಪು ನೋಡು
ಗಾಯನ ಗಾರುಡಿಗನ ಕಳೆದುಕೊಂಡಿತು ನಮ್ಮ ನಾಡು
Tuesday, December 29, 2009
Sunday, December 6, 2009
ದಾನವತೆ ಕೊನೆಯಾಗುವುದು
ದಾನವತೆ ಕೊನೆಯಾಗುವುದು
ಕಣ್ಣುಕಲೆತರೆ - ತುಟಿ ಅಲ್ಲ
ರೆಪ್ಪೆಮಾತನಾಡುವುವು
ಕಣ್ಮುಚ್ಚಿ ತನ್ಮಯನಾದರೆ
ಮನ-ಮನದಿ ಮಾತನಾಡುವುದು
ಮನ-ತೆರೆದರೆ ಮನಕೆ
ಹೃದಯಗಳು ಒಂದಾಗುವುವು
ಹೃದಯ ಬಿಚ್ಚಿ ನುಡಿದರೆ
ನಡೆ-ತಡೆಗೋಡೆಯ ಹಾರುವುವು
ವೈಶಾಲ್ಯದಿ ಯೋಚನೆ ಹರಿದರೆ
ಹರಿವನದಿ ಸಾಗರ ಸೇರುವುದು
ಸಾಗರಕುಂಟೇ ಸೀಮೆಗಳು?
ಸಾಗರಕೆಲ್ಲಿಯ ಆಳಗಳು?
ಸಾಗರೆಕೆ ಸಾಗರೆವೇ ತಾ ಸಾಟಿ
ಕ್ಷುಲ್ಲಕಗಳು ಮರೆಯಾಗುವುವು
ಧರ್ಮಗಳು ಮನದ ನೆಮ್ಮದಿಗೆ
ಕರ್ಮಗಳು ಇಹದ ತಹಬದಿಗೆ
ಧರ್ಮ ತಹಬದಿಗೆ ಯತ್ನಿಸಿದರೆ
ಕರ್ಮಗಳು ನೆಮ್ಮದಿಯ ಕಾಡುವುವು
ಮಾನವತೆಗೆ ಮನಕೊಟ್ಟರೆ
ದಾನವತೆ ಕೊನೆಯಾಗುವುದು
ಮೂರ್ಖತೆ ಪರಮಾವಧಿ
ನನ್ನ ಮನೆಯ ವಸ್ತು
ನಾನೇ ಸುಟ್ಟು ಬೇಸ್ತು
ನೀನಿರಬಹುದು ಕಟ್ಟುಮಸ್ತು
ನಿನ್ನ ಬಾಲನೀನೆ ಹಿಡಿಯಬೇಡ
ಮೂರ್ಖ ಸಿಗದೇನೂ.. ಆಗುವೆ ಸುಸ್ತು
ಮುಷ್ಕರ, ಧರಣಿ ಕುಂತೆ
ನಿನ್ನ ಇಂದಿಗೆ ನಿನ್ನ ಚಿಂತೆ
ನಿನ್ನ ನೆರೆಯವನದು ಅನಿಸಿ ಕಂತೆ
ಮುಳುಗುವೆ ಇದು ಸ್ವಾರ್ಥಗಳ ಸಂತೆ
ಕೆಲಸ ಬಿಡುವೆ ..ಧ್ವಂಸ ಮಾಡುವೆ
ಕಂಸನಾಗುವೆ, ಹಿಂಸೆ ಮಾಡುವೆ
ಬಸ್ಸು, ಕಟ್ಟಡ ಸರ್ವಜನ ಆಸ್ತಿ ಸುಡುವೆ
ಯಾವುದೋ ಮಗು ನರಳಿಸುವೆ
ನಿನ್ನ ನಾಶಕೆ ನೀನೇ ನಾಂದಿ ಹಾಡಿಸುವೆ
ಬಿಡು ದ್ವೇಷ-ಕಟ್ಟು ದೇಶ
ಮರೆತು ರೋಷ- ಕಳಚು ವೇಷ
ಚೆಲ್ಲು ವಿಷ - ಇರಲಿ ಹರುಷ
ಇನ್ನೂ ಏಕೆ ಮೀನ ಮೇಷ?
ಎಲ್ಲಬಿಡು ಮರೆತು ಬಿಡು
ಜೊತೆಗೂಡು, ಹೆಗಲುಕೊಡು
ಕೃಷಿಮಾಡು ಕಟ್ಟು ನಾಡು
ಕೆಡಹಲು ಸಾಕು ಒಂದೇ ಕೋಡು
ನೆಡಲು ಬೇಕು ಸಾವಿರ ಮೇಡು
ಮೆಟ್ಟು ನಾಡು ಇದುವೇ ಬೀಡು
ಕಟ್ಟು ನಾಡು ಕಟ್ಟು ನಾಡು ಕಟ್ಟು ನಾಡು
Subscribe to:
Posts (Atom)