ಬೀರಬಲ್
ಗುಂಡಾನೋ...
ಬೀರಬಲ್ಲ
ಬೀರನ್ನ ಬಿಟ್ರೆ
ಇನ್ನೇನನ್ನೂ ಬಲ್ಲ
ಕಣ್ಣ ಬಾಣ
ಕಣ್ಣಲ್ಲೇ ಬಾಣ
ಹುಬ್ಬು ಕುಣಿಸಿ
ಅದೇ ಬಿಲ್ಲು
ಅದಕ್ಕೇ ಹೇಳೋದು
ಹುಡ್ಗೀರ್ದೇ ದಿಲ್ಲು
ಬರ್ತ್ ಡೇ ಕೇಕು
ವೈಯ್ಯಾರಿ ಸೈಕಲ್ ಚಕ್ರ
ಸಗಣಿತೊಪ್ಪೆ ಕತ್ತರಿಸಿತ್ತು
ಬಿದ್ದಿದ್ದೊಂದು ಅಲ್ಲೇ ಹತ್ರ
ಹಿಂದೆ ನಿಂತ ಪಡ್ಡೇ ಹೈಕ್ಳು ಅಂದ್ರು
“ಹ್ಯಾಪಿ ಬರ್ತ್ ಡೇ ಟು ಯೂ”
ಕಿಲಾಡಿ ಹುಡ್ಗಿ
ಹಿಂತಿರುಗಿ ಹೇಳೋದೇ?
“ಪೂರ್ತಿ ಕೇಕ್ ಈಸ್ ಫ಼ಾರ್ ಯೂ”
ಐಸ್ ಕ್ರೀಮ್
ಅವಳಿಗೆ ಬಂತು
ಗುಂಡನ ಮೇಲೆ
ಅಚಾನಕ್ಕು ಪ್ರೇಮ
ಕರಗಿಬಿಟ್ಟ ಗುಂಡ
ತಿನ್ನೋಕೆ ಮುಂಚೆನೇ
ಅವಳು ಕೊಡ್ಸಿದ
ಐಸ್ ಕ್ರೀಮ
ವ್ಯತ್ಯಾಸ
ಮದ್ವೆಗೆ ಮುಂಚೆ
ಅವನದ್ದು ಪರ್ಸು
ಇಬ್ಬರದೂ –ಕೈ
ನಂತರವೂ..
ಅವನದ್ದೇ ..ಪರ್ಸು..
ಅವಳದ್ದೇ..ಕೈ
ಕಾರು ಬಾರು
ಗುಂಡ ಹೇಳ್ದ
ಇದೆ ನಂದೂ ದೊಡ್ಡ
ಕಾರುಬಾರು
ಮದುವೆಯಾಯ್ತು ಮಾವ ಕೇಳ್ದ
ತೋರಿಸ್ದ ತನ್ನ ಮುರುಕಲು ಕಾರು,
ಅದರಲ್ಲೇ ತುಂಬಿದ್ದ
ಬಾಟ್ಲು ಬ್ರಾಂದಿ-ಬೀರು
ಮಾಡಿ ಅದನ್ನೇ ಒಂದು ಬಾರು
ಕಣ್ಣೀರು
ಮಡುಗಟ್ಟಿದ ದುಃಖ
ಬೆಂಬಿಡದ ಶೋಕ
ಅವಡುಗಚ್ಚಿ ತಡೆದರೂ
ರೆಪ್ಪೆದೂಡಿ ಬರುವುದು
ಹನಿಯೊಂದು-ಕಣ್ಣೀರು
ಅವಿನಾಶ ಯಾರು ನಿನ್ನ
ವಿನಾಶಕ್ಕೆ ದೂಡಿದ್ದು?
ಕೇಳಿ- ಮನತುಂಬಿತ್ತು
ನನ್ನದೇ ಕರುಳಕುಡಿ
ವಿಜಯನಿಗೂ ಅದೇ ಗತಿ
ಯೋಚನೆ ಮಾತ್ರದಿ
ತಡೆಯಲಾರೆ ಬರುತಿರೆ
ಕಣ್ತುಂಬಿ - ಕಣ್ಣೀರು.
ಅವಿನಾಶ-ವಿಜಯರು
ಅವರೆಲ್ಲಿ ತಿರುಗಿ ಬರುವರು
ಬಂದರು ಹಲವರು
ಆಯುಕ್ತರು ಮಂತ್ರಿವರ್ಯರು
ಬಂತು ಹೊತ್ತು
ಲಕ್ಷಹೊತ್ತ ಅಧಿಕಾರಿಗಳ ಕವರು
ಲಕ್ಷ-ಕೋಟಿಗಳೂ ತಡೆಯಲಾರವು
ನೆನಪಹೊತ್ತು ಪದೇ ಪದೇ
ನಿಲ್ಲದೇ ಬರುವ-ಕಣ್ಣೀರು