ಚಿತ್ರ: ಮೇರೆ ಸನಮ್ (1961), ಗಾಯಕರು- ಮೊಹಮ್ಮದ್ ರಫಿ, ಸಂಗೀತ- ಓ ಪಿ ನಯ್ಯರ್
ಹಾಡು: ಹಂದಂ ಮೇರೆ..ಮಾನ್ ಭೀ
ಜಾವೋ...ಕೆಹನಾ ಮೇರೆ ಪ್ಯಾರ್ ಕಾ....
ಕನ್ನಡ ಭಾವಾನುವಾದ: ಡಾ. ಆಜಾದ್
ಐ ಎಸ್.
ಪ್ರೀತಿಯ ಋತು
ಓ..ಸಖಿಯೇ ಹೀಗೇ, ಅಪ್ಪಿಕೋ
ಒಮ್ಮೆ
ನನ್ನಯ ಮನಸಿನ ಮಾತಿದು
ಅರೆ..ನವಿರು ನವಿರು ನಗು
ತುಟಿಯಲ್ಲಿ
ನಿನ್ನಯ ಮನಸಿನ ಮಾತದು
II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ಆಯ್...ಪ್ರೇಮ ಪ್ರೀತಿಯ ಈ ಋತು
ಇರದು ಎಂದೆಂದೂ
ಮನಸಲಿ ಮುದದ ಭಾವವು
ಬರದು ಹಾಗೆಂದೂ.. II 2 II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಮುಂಗುರುಳಾ ಹೀಗೇ ಸರಿಸಿದರೆ,
ನಯನದಿ ಆಸೆ ಇಣುಕುವುದು
II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.
ನಿನ್ನಯ ಮುಖದ ಹೂನಗೆ
ಮಾಸದೆ ಇರಲೆಂದೂ
ಕನಸಲಿ ದಿನವೂ ಕಾಣಿಸಿ
ನೆನಪಿರು ಎಂದೆಂದೂ..II2II
ಖರೇ..ಇದು ಎಂದಿಗೂ, ನಿನ್ನಾಣೆ ಇಂದಿಗೂ...
ಕರುಣಿಸು ನಿನ್ನ ದರುಶನವಾ,
ಸಾರ್ಥಕ ಆಗಲಿ ಜೀವನವೂ
II ಓ ಸಖಿಯೇ ಹೀಗೇ ಅಪ್ಪಿಕೋ ಒಮ್ಮೆII ..ಪ.