Friday, April 30, 2010

Something ಡಿಫರೆಂಟು

Something ಡಿಫರೆಂಟು


ಕತ್ತೆ, ಕಿರುಬ, ಹಂದಿ,


ರಣಹದ್ದು, ಕಾಗೆ, ರೋಗಿ,


ನರಿ, ಗೂಬೆ, ಗೋಸುಂಬೆ


ಮಾಸ್ತರು ಹೇಳಿದರು ಮಕ್ಕಳನ್ನು ಕೇಳುತ್ತಾ


ಈ ಎಲ್ಲ ಗುಣಕೆ ಹೊಂದುವ ಒಂದು


ಪ್ರಾಣಿಯ ಹೆಸರು ಹೇಳಿ,


ಮಕ್ಕಳೆಲ್ಲ ಕೂಗಿ ಹೇಳಿದರು


‘ರಾಜಕಾರಣಿ‘





ಡುಂಡಿ ನೀವ್ ನನ್ ಸೀನಿಯರ್


ವಿ.ವಿ.ಲಿ ನಾನ್ ನಿಮ್ ಜೂನಿಯರ್


ನೀವ್ ಬರೆದ್ರಿ ಎಲ್ಲ ಅಂದ್ರು


ಚುಟುಕ ಅಂದ್ರೆ ಡುಂಡಿ


ನಾನ್ ಬರೆದ್ರೆ ಓದೋರಿಲ್ಲ


ಹೇಳ್ತಾರೆ ಹಾಳ್ಮಾಡ್ಬ್ಯಾಡ ಪೇಪರ್


ದಂಡಿ



ಹುಡುಗೀದು


ಹೋಗುತ್ತೆ ಮುಂದಕ್ಕೆ


ಆಂಟೀದು


ನಿಂತಲ್ಲೇ ನಿಲ್ಲುತ್ತೆ


ವಯಸ್ಸು



ಅವನು ಆಗ್ಲಿಲ್ಲವೇ


ಅಂತ ಪರದಾಟ


ಇವನು ಯಾಕಾದ್ರೂ


ಮಾಡ್ಕೊಂಡೆನೋ


ಒದ್ದಾಟ....


ಮದುವೆ




ಯೋಗಾಯೋಗ


ಭೋಗಾಭಾಗ


ಸದಾನಂದ


ನಿತ್ಯಾನಂದ




ಹೊಟ್ಟೇಲಿ ಹೊತ್ತೆ


ಕನಸನ್ನ ಕಟ್ಟಿ


ಎದೆಯಾಮೃತ


ಕೈತುತ್ತ ಕೊಟ್ಟೆ


ಬೆಳೆದೆ ನಾ ಸುಖದಲಿ ಓಲಾಡಿ


ಮುತ್ತಿಗಾಗಿ ನಿನ್ನ


ಬೆಂಕಿಯ ಬೇಯ್ಗೆಗಿಟ್ಟೆ ಕಾಡಿ


ಆದರೂ ನಕ್ಕು ಹರಸಿದೆ


ಹರಿಸಿ ಮಮತೆಯಾ ಕೋಡಿ


ಏಕೆಂದರೆ ನೀನನ್ನ


ಅಮ್ಮ


ಬಿರಿದ ನೆಲಕೆ ಬೇಕು..


ನಾ ನೊಂದರೆ ಅಮ್ಮನ


ಕಣ್ಣಲಿ ತುಳುಕುವುದು..


ಪ್ರಿಯಕರ ತನ್ನ ಪ್ರಿಯೆಗೀಗ


ಮನತುಂಬಿ ಕರೆವುದು..


ಹನಿ