Thursday, August 5, 2010

ಮತ್ತೆ ಕೆಲವು ನ್ಯಾನೋಗಳು.......

Why ಯಾರೀ?



ಬಲು ಜೋರು ಬಾಲೆ ಎರಡು ಜಡೆ ಹೂಮಾಲೆ
ಜಿಂಕೆಯಂತೆ ಜಿಗಿದವಳು ಓಹ್ ! ಓಲಾಡೋ ಓಲೆ

 

ಕಣ್ಣಿನಲಿ ತುಂಟತನ ಅದರೂ ಇಲ್ಲ ಮೊಂಡುತನ
ಹೆಣ್ಣಿನಂದ ತುಂಬಿದ ಗಲ್ಲ ಅಲ್ಲಿಗಲ್ಲಿಗೆ ಚೆಲ್ಲುತನ

ಬೆಳೆದು ಬಲುವೈಯಾರಿ ಸಿಂಗರಿಸೆ ಸಿಂಗಾರಿ
ಛೇಡಿಸೆ ಹುಸಿಗೋಪ ಕೆನ್ನೆಗೆ ಚಲ್ಲಿದಂತೆ ಕೇಸರಿ

ಹಳ್ಳಿಹಾದಿ ಅಜ್ಜಿ ಮನೆ ಬಾವಿನೀರಿಗೆ ಬಂದ ವೈಯಾರಿ
ಬಳುಕು ನಡು, ನೀಳ ಜಡೆ, ನೀರು ಹೋಗುತ್ತಿದೆ ಸೋರಿ

ಅವಳಾ ನೋಟ ಹೊನ್ನ ಮೈಬಣ್ಣ ಎಲ್ಲರ ಗೆಲ್ಲುವಾಸೆ
ಮುದಿ ಗೌಡ ಜಗುಲಿ ಮೇಲೆ, ನೋಡಿ ಕುಣಿಯಿತು ಮೀಸೆ

ಕೇಳಿದ್ರೆ ಹೇಳ್ತಾನೆ ಮುಪ್ಪಾದ್ರೂ ಹುಳಿಯಲ್ವೇ ಹುಣಿಸೆ
ಇದ ಕೇಳಿ ಗೌಡ್ತಿ ತಂದು ತೋರ್ಸಿದ್ಲು ಹಳೆ ಪೊರಕೆ ವರಸೆ

Sunday, August 1, 2010

ಸ್ನೇಹಿತ


(ಸ್ನೇಹಿತರ ದಿನದಂದು ನನ್ನ ಬಾಲ್ಯದ ಗೆಳೆಯನ ನೆನಪಲ್ಲಿ)

ಅವನಲ್ಲಿ ನಾನಿಲ್ಲಿ ಆದರೂ ನಮ್ಮಲ್ಲಿಲ್ಲ ದೂರ


ಅವನಿದ್ದ ನನ್ನ ಜೊತೆ ಇದ್ದಾಗಲೂ ನಾನು ಪೋರ



ಮಾಸ್ತರು ಹಾಜರಿಗೆ ಅವನದಾಯ್ತು ಜವಾಬು

ಎಂದೋ ಸತ್ತಿದ್ದ ನನ್ನ ತಾತ ಸತ್ತ ಎಂದ ಸಬೂಬು



ಸ್ಕೂಲಿಂದ ಬರುವಾಗ ತೋಪಿಗೆ ನುಗ್ಗಿದ್ದು ಮಾವಿಗೆ

ಮಾಲಿ ಬಂದಾಗ ನನ್ನ ಬದಲಿಗೆ ತಾನೇ ಸಿಕ್ಕಿದ್ದ ಪೆಟ್ಟಿಗೆ



ತುಂಟಾಟಮಾಡಿ ಸಿಕ್ಕಿಬಿದ್ದೆ, ಬೆತ್ತ ಬಿತ್ತು ಛಟೀರ್-ಕೈಗೆ

ಅಯ್ಯೋ ಎಂದಿದ್ದ ಗೆಳೆಯ ಬಿದ್ದಂತೆ ಏಟು ತನ್ನ ಮೈಗೆ



ಹತ್ತರಲ್ಲಿ ಪ್ರಥಮ ದರ್ಜೆ ಸಿಕ್ಕಿದ್ರೂ ಪೆಚ್ಚಾಗಿ ಬಂದ್ರೆ - ನಾನು

ಊರಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದ ತಾನೇ ಗೆದ್ದಂತೆ ಅವನು