Sunday, May 24, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ಬಿನ್ ಲ್ಯಾಡನ್ನು ನಂ ಮಾವ
ಬಿಲ್ ಕ್ಲಿಂಟನ್ನು ನಂ ಬಾವ ಅಂತ ಹಾಡಿದೆಯಲ್ವಾ?
ಹೌದು ಮಗು
ಮತ್ತೆ ಇವರಿಬ್ಬರೂ ಕ್ಲೋಸ್ ರಿಲಟಿವ್ಸ್ ಅಂತಾಯ್ತಲ್ಲ?
ಹಾಗೇ ಅಂದ್ಕೋ...
ಮತ್ತೆ ನಮ್ಮಪ್ಪ ಲಾಲೂ ಅಂತಾನೂ ಇದೆ..!!!
ಇವರು ಮೂವರೂ ಸಂಬಂಧಿಕರಾಗ್ಲಿಲ್ವಾ?
ನಂಗೊತ್ತಿಲ್ಲ ಮಗು.

ಅಪ್ಪಾ..
ಹೇಳು ಮಗು..
ಬೆಂಗ್ಳೂರ್ ರೋಡುಗಳು ಮಳೆಯಿಂದ
ಹಳ್ಳ ಕೊಳ್ಳಗಳಾಗಿವೆಯಂತೆ..
ಹೌದು ಮಗು..ವಾಹನ ಏನು ಜನ ನಡೆದಾಡೋದೂ
ಅಪಾಯಕಾರಿ ಅಗ್ಬಿಟ್ಟಿದೆ
ಮತ್ತೆ ,,ಮಳೆ ಬರೋವರ್ಗೂ ರಿಪೇರಿ ಮಾಡೊಲ್ಲ
ಅಲ್ವಾ ಅಪ್ಪ,,?
ಹೌದು ಮಗು...
ಮಳೆ, ಸರ್ಕಾರ ನುಂಗಣ್ಣಗಳಿಗೆ ಒಳ್ಳೆ ಚಾನ್ಸು
ಅಂತ ಪೇಪರ್ನಲ್ಲಿ ಬರ್ದಿದ್ದಾರಲ್ಲಾ, ಯಾಕಪ್ಪಾ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಏನು ಮಗು..?
ಕನ್ನಡದ ಗಾಯಕ ಪ್ರತಿಭೆಗಳಿದ್ರೂ
ಹಿಂದೀ ಗಾಯಕರನ್ನು ಕನ್ನಡಕ್ಕೆ ಯಾಕೆ ತರ್ತಾರೆ..?
ಅವರ ಹಾಡು ಜನಪ್ರಿಯ ಆಗಿದೆ ಅಂತ
...ಮತ್ತೆ ಬೋಲ್ಡ್ ಆಗಿ ಅಭಿನಯಿಸೋ
ಪರಭಾಷಾ ತಾರೆಯರನ್ನೂ ತರ್ತಾರಲ್ಲಾ..?
ಹೌದು ಮಗು..
ಅಷ್ಟು ‘ಬೋಲ್ಡ್‘ ಆಗಿ ಕನ್ನಡದ ಹುಡ್ಗೀರು
ಮಾಡೋಲ್ಲ ಆಂತಾನೇ..?
ನಂಗೊತ್ತಿಲ್ಲ ಮಗು.

ಅಪ್ಪಾ..
ಸ್ಲಂ ಅಂದ್ರೆ ಏನಪ್ಪಾ...??
ಬೆಂಗ್ಳೂರು ಹಳೇ ಮದ್ರಾಸು ರೋಡಿನಪಕ್ಕ
ಗುಡ್ಲು ಕಟ್ಕೊಂಡು ಇದ್ದಾರಲ್ಲಾ
ಕೊಳೆಗೇರಿ ಅಂತಾರಲ್ಲಾ ಅದು...
ಕೊಳೇಗೇರಿ ನಾಯಿಗೆ ಆಸ್ಕರ್ ಪ್ರಶಸ್ತಿ
ಕೊಟ್ಟರಂತೆ...??
ಹೌದು ಮಗು..
ಮತ್ತೆ ನಮ್ಮ ಗಬ್ಬು ನಾರೋದನ್ನ
ನಾವೇ ಜಗತ್ತಿಗೆ ತೋರ್ಸಿದ್ದಕ್ಕಾ ..ಪ್ರಶಸ್ತಿ?
ನಂಗೊತ್ತಿಲ್ಲ ಮಗು.

8 comments:

  1. ಸರ್,

    ಅಪ್ಪ-ಮಗುವಿನ ನಿಮ್ಮ ಜುಗಲ್‌ಭಂದಿ ಚೆನ್ನಾಗಿ ಬರುತ್ತಿದೆ. ಮಗುವಿನ ವಿಸ್ಮಯದ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಕೊನೆಯಲ್ಲಿ ಸೋಲುವುದು ನೀವೇ ತಾನೆ...

    ಧನ್ಯವಾದಗಳು

    ReplyDelete
  2. ನಿಮ್ಮ " ನ೦ಗೊತ್ತಿಲ್ಲ ಮಗು" ಸರಣಿಯ ಚುಟುಕು/ಕುಟುಕು ಕಾರ್ಯಾಚರಣೆ ಚೆನ್ನಾಗಿದೆ.

    ReplyDelete
  3. ಶಿವು, ಕೆಲವು ಮಕ್ಕಳ ಪ್ರಶ್ನೆಗೆ ಉತ್ತರ ಹುಡುಕಾಡಬೇಕಾಗಬಹುದು, ಮತ್ತೆ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಮುಜುಗರವೆನಿಸಿದರೆ ಮತ್ತೆ ಕೆಲವು ಪ್ರಶ್ನೆಗಳಿಗೆ ನಮಗೇ ಉತ್ತರ ತಿಳಿದಿರುವುದಿಲ್ಲ.

    ಪರಾಂಜಪೆಯವರೇ, ಮಕ್ಕಳ ಪ್ರಶ್ನೆಗಳನ್ನು ಹತ್ತಿಕ್ಕುವುದು ಸರಿಯಲ್ಲ ಆದರೆ, ಅವರ ಪ್ರಶ್ನೆಗಳು ನಿಜಕ್ಕೂ ನಮ್ಮನ್ನು ಕೆಲವೊಮ್ಮೆ ಯೋಚನೆಗೆ ತಳ್ಳುತ್ತವೆ...ಪ್ರತಿಕ್ರಿಯೆಗೆ thanks.

    ReplyDelete
  4. ಸರ್,
    ಏನು ಎಲ್ಲ ಉತ್ತರಕ್ಕೊ ಗೊತ್ತಿಲ್ಲ ಅಂತೀರ... ಹಾ ಹಾ ಹಾ ಆಮೇಲೆ ನಿಮ್ಮ ಮಗು ನಿಮಗೇನು ಗೋತ್ತೆ ಇಲ್ಲ ಎಂದು ಬಿಡುತ್ತೆ ಹಹಹ..
    ಬಹಳ ಇಷ್ಟವಾಯಿತು... ಕೆಲವಕ್ಕೆ ಉತ್ತರಗಳು ಸಿಗುವುದೇ ಇಲ್ಲ ಅಲ್ಲವೆ..?

    ReplyDelete
  5. ಗೊತ್ತಿಲ್ಲ ಮಗು...........
    ಹಹಹ ಹಹಹ

    ReplyDelete
  6. ಮಗುವಿನ ಪ್ರಶ್ನೆಗಳು ತುಂಬಾ ಚೆನ್ನಾಗಿವೆ. ಉತ್ತರ ಗೊತ್ತಿದ್ದರೂ, ಗೊತ್ತಿಲ್ಲ ಅಂತ ಹೇಳೋದೇ safe, ಅಲ್ವೇ!

    ReplyDelete
  7. ಸುನಾಥ್ ಸರ್,
    ನಮಸ್ತೆ, ಸ್ವಾಗತ ಜಲನಯನ ಮತ್ತು ಭಾವ ಮಂಥನಕ್ಕೆ
    ಧನ್ಯವಾದಗಳು...ನಿಮ್ಮ ಟೀಕೆ ನನಗೆ ದಾರಿದೀಪ, ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ತಿಳಿಸಿ.

    ReplyDelete
  8. ಬಹಳ ಸಂತೋಷ, ಧನ್ಯವಾದಗಳು
    ಇಸ್ಮಾಯಿಲ್ ಎಂ ಕೆ ಶಿವಮೊಗ್ಗ

    ReplyDelete